Breaking News

ಕೇರಳದ ಸ್ಪಾಗೆ ನುಗ್ಗಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ! ಭೀಕರತೆ ಬಿಚ್ಚಿಟ್ಟ ಸಂತ್ರಸ್ತೆ

A young woman was physically assaulted after barging into a spa in Kerala! The victim revealed the horror

ಕೇರಳದ ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲಾದಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು ತಮ್ಮ ಮೇಲೆ ನಡೆದ ಅಮಾನುಷ ಕೃತ್ಯದ ಭೀಕರ ವಿವರಗಳನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಸಂತ್ರಸ್ತೆಯ ಹೇಳಿಕೆ ಪ್ರಕಾರ, ಸುಮಾರು 10 ಮಂದಿಯ ಗುಂಪು ಸ್ಪಾಗೆ ಬಂದು ಇದೊಂದು ‘ಕೋಟೇಶನ್’ ಎಂದು ಹೇಳಿಕೊಂಡು ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಹೇಳಿದ್ದಾಳೆ. ಅಲ್ಲದೆ, ಪ್ರಮುಖ ಆರೋಪಿ ಸುಬಿನ್ ಅಲೆಕ್ಸಾಂಡರ್ ಚಾಕೋ, ಅಲಿಯಾಸ್ ಮರಣ ಸುಬಿನ್, ಮಾದಕ ವಸ್ತುಗಳ ನಶೆಯಲ್ಲಿದ್ದ ಅನುಮಾನ ವ್ಯಕ್ತವಾಗಿದೆ.

Advertisement

ಸಂತ್ರಸ್ತೆಯನ್ನು ಕೊಠಡಿಯಲ್ಲಿ ಕೂಡಿಹಾಕಿ, ಕತ್ತಿಗೆ ಚಾಕು ಇಟ್ಟು ಬೆದರಿಸಿ ಸುಮಾರು 35 ನಿಮಿಷಗಳ ಕಾಲ ಅತ್ಯಾಚಾರ ಎಸಗಲಾಗಿದೆ ಎಂದು ಸಂತ್ರಸ್ತೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಿರಂತರ ಬೆದರಿಕೆಗಳಿಂದಾಗಿ ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: ಶಾಪಿಂಗ್ ಮಾಲ್‌ನಲ್ಲಿರುವ ಸ್ಪಾ ಕೇಂದ್ರವೊಂದರಲ್ಲಿ ರಾಶಿ ರಾಶಿ ಕಾಂಡೋಮ್‌ ಪತ್ತೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾಕೋ (27) ಮತ್ತು ಬರ್ಲಿನ್ ದಾಸ್ (38) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ತಿರುವಲ್ಲಾ ಡಿಎಸ್‌ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ.

ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಆನಂದ್ ಮಾತನಾಡಿ, ಪ್ರಮುಖ ಆರೋಪಿ ಚಾಕೋ ವಿರುದ್ಧ ಮತ್ತೊಮ್ಮೆ ಕಾಪಾ ಕಾಯ್ದೆ ಜಾರಿಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಿ ಈ ಹಿಂದೆ ಕಾಪಾ ಕಾಯ್ದೆಯಡಿ ಬಂಧಿತನಾಗಿ 2025ರ ಮಾರ್ಚ್‌ನಲ್ಲಿ ಬಿಡುಗಡೆಯಾಗಿದ್ದನು.

ಇದನ್ನೂ ಓದಿ: ಅತ್ತೆಯಿಂದ ವೇಶ್ಯಾವಾಟಿಕೆಗೆ ಒತ್ತಾಯ, ಹಸುಗೂಸು ಬಿಟ್ಟು ಯುವತಿ ಆತ್ಮಹತ್ಯೆ

ಈ ಘಟನೆ ಕುರಿತು ಮೊದಲ ಮಾಹಿತಿ ವಿಶೇಷ ಪಡೆಗೆ ಲಭಿಸಿದ್ದು, ಅಧಿಕೃತ ದೂರು ಇಲ್ಲದಿದ್ದರೂ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಸಂತ್ರಸ್ತೆಯ ಹೇಳಿಕೆ ದಾಖಲಿಸಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಕೋಟೇಶನ್ ಅಪರಾಧವೇ? ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಜೊತೆಗೆ, ತಿರುವಲ್ಲಾ ಪ್ರದೇಶದಲ್ಲಿನ ಎಲ್ಲಾ ಸ್ಪಾಗಳ ಚಟುವಟಿಕೆಗಳನ್ನೂ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತ, ಸ್ಪಾ ಮಾಲೀಕ ಡಾ. ಸಂಜಯ್, ತಮ್ಮ ವ್ಯವಹಾರವನ್ನು ಹಾಳುಮಾಡುವ ಉದ್ದೇಶದಿಂದ ಮತ್ತೊಬ್ಬ ಸ್ಪಾ ಮಾಲೀಕರು ಈ ಕೃತ್ಯದ ಹಿಂದೆ ಇದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್–ಗ್ಯಾಂಗ್‌ಸ್ಟರ್‌ಗಳ ಅಕ್ರಮ ಮೈತ್ರಿ ಇದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಈ ಗಂಭೀರ ಅಪರಾಧ ಪ್ರಕರಣ ಕೇರಳದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು