ಸಿನೆಮಾ : ಧುರಂಧರ್ ಚಿತ್ರದ ಟ್ರೇಲರ್ ನವೆಂಬರ್ 18ರಂದು ಬಿಡುಗಡೆಯಾಗಿತ್ತು. ನಿಜ ಘಟನೆಗಳಿಂದ ಪ್ರೇರಿತವಾದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಪಾಕಿಸ್ತಾನದ ನಾಲ್ಕು ಅತ್ಯಂತ ಅಪಾಯಕಾರಿ ಉಗ್ರರನ್ನು ಎದುರಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಗಳ ಗುರುತು ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದರೂ, ನಿರ್ಮಾಪಕರು ಅಧಿಕೃತ ದೃಢೀಕರಣ ನೀಡಿಲ್ಲ. ರಣವೀರ್ ಸಿಂಗ್ ಅವರ ಪಾತ್ರವು ಮೇಜರ್ ಮೋಹಿತ್ ಶರ್ಮಾ ಅವರಿಂದ ಪ್ರೇರಿತ ಎನ್ನಲಾದರೂ, ಇದು ಸಂಪೂರ್ಣ ಕಲ್ಪಿತ ಪಾತ್ರವಾಗಿದ್ದು, ಸೆನ್ಸಾರ್ ಮಂಡಳಿ ಇದನ್ನು ದೃಢಪಡಿಸಿದೆ.
ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು ರೂ. 784.50 ಕೋಟಿ ;

ಡಿಸೆಂಬರ್ 5ರಂದು ಬಿಡುಗಡೆಯಾದ ರಣವೀರ್ ಸಿಂಗ್ ನಟನೆಯ ಧುರಂಧರ್ ಚಿತ್ರವು ನಾಲ್ಕನೇ ವಾರದಲ್ಲೂ ಶತಕ ಬಾರಿಸಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ವಿಶೇಷವೆಂದರೆ, 28ನೇ ದಿನದ ಆದಾಯವು 27ನೇ ದಿನಕ್ಕಿಂತ ಹೆಚ್ಚು ಗಳಿಕೆಯಾಗಿದೆ. ನಾಲ್ಕು ವಾರಗಳ ಅಂತ್ಯದ ವೇಳೆಗೆ ಚಿತ್ರವು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು ರೂ. 784.50 ಕೋಟಿ ಸಂಗ್ರಹಿಸಿದೆ.
ಹಂತ ಹಂತವಾಗಿ ಗೆಲ್ಲುತ್ತಾ ಬಂದಿರುವ ಈ ಸಿನೆಮಾ ಮೊದಲ ವಾರ: ರೂ. 218 ಕೋಟಿ, ಎರಡನೇ ವಾರ: ರೂ. 261.5 ಕೋಟಿ, ಮೂರನೇ ವಾರ: ರೂ. 189.3 ಕೋಟಿ, ನಾಲ್ಕನೇ ವಾರ: ರೂ. 115.70 ಕೋಟಿ ಹೀಗೇ… ಜೊತೆಗೆ, ಪ್ರಖ್ಯಾತ ವ್ಯಾಪಾರ ವಿಶ್ಲೇಷಕ ತರನ್ ಆದರ್ಶ್ ಅವರು ತಮ್ಮ ಎಕ್ಸ್ (ಹಳೆಯ ಟ್ವಿಟರ್)ನಲ್ಲಿ “ನಾಲ್ಕನೇ ವಾರದಲ್ಲೇ ಶತಕ ಬಾರಿಸಿದ ಮೊದಲ ಚಿತ್ರ ‘ಧುರಂಧರ್’. ಈ ಚಿತ್ರ ತನ್ನ ಅದ್ಭುತ ಓಟದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ನಾಲ್ಕನೇ ವಾರದಲ್ಲಿ ರೂ. 100 ಕೋಟಿ ದಾಟಿದ ಮೊದಲ ಹಿಂದಿ ಚಿತ್ರ ಎಂಬ ದಾಖಲೆ ನಿರ್ಮಿಸಿದೆ” ಎಂದು ಬರೆದಿದ್ದಾರೆ.

