Breaking News

ಉಡುಪಿ: ಕಾರು ರಿವರ್ಸ್‌ ತೆಗೆಯುವಾಗ ಡೆಡ್ಲಿ ಸರಣಿ ಅಪಘಾತ! ವಿಡಿಯೋ ಇಲ್ಲಿದೆ

Udupi Accident

ಉಡುಪಿ: ವಾಹನಗಳನ್ನು ರಿವರ್ಸ್‌ ತೆಗೆಯುವಾದ ಬಹಳ ಜಾಗರೂಕರಾಗಿರಬೇಕು. ಇಲ್ಲವಾದರೆ ಅವಘಡಗಳಿಗೆ ಕಾರಣವಾಗುತ್ತದೆ ಎಂಬುದಕ್ಕೆ ಉಡುಪಿಯಲ್ಲಿ ಸಂಭವಿಸಿದ ಈ ಡೆಡ್ಲಿ ಸರಣಿ ಅಪಘಾತವೇ ಸಾಕ್ಷಿ. ವ್ಯಕ್ತಿಯೊಬ್ಬರು ಕಾರು ರಿವರ್ಸ್‌ ತೆಗೆಯುವಾಗ ಆಕಸ್ಮಿಕವಾಗಿ ವೇಗದ ಹಿಮ್ಮುಖ ಚಾಲನೆಯಾಗಿ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈರೋಡಿ ಭವನದ ಮುಂದೆ ನಿಲ್ಲಿಸಿದ್ದ ಕಾರನ್ನು ರಿವರ್ಸ್‌ ತೆಗೆಯಲು ಚಾಲಕ ಮುಂದಾದಾಗ ಏಕಾಏಕಿಯಾಗಿ ವೇಗವಾಗಿ ಯೂ ಆಕಾರದಲ್ಲಿ ಹಿಂದಕ್ಕೆ ಚಲಿಸಿದೆ. ಈ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಇಬ್ಬರು ಸವಾರರಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಅದರ ಹಿಂದಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಚಿಪ್ಸ್ ಅಂಗಡಿಗೆ ಡಿಕ್ಕಿ ಹೊಡೆದಿದೆ.

Advertisement

ಇದನ್ನೂ ಓದಿ: ಈಕೆ ವಿಶ್ವದ ಸುಂದರ ಮುಖ ಹೊಂದಿರುವ ಯುವತಿ, ಪುರುಷರಲ್ಲಿ ಯಾರು ಗೊತ್ತೇ?

ಈ ಘಟನೆಯಲ್ಲಿ, ಬೈಕ್ ಸವಾರ ಮತ್ತು ಆಟೋ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಸದ್ಯ ಈ ವಿಡಿಯೋವನ್ನು ಡೆಡ್ಲಿ ಕಲೇಶ್‌ ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

News Source : Social media

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು