ಬೆಂಗಳೂರು: ವೈಟ್ ಆಟೋದಲ್ಲಿ ಬಂದಿಳಿದ ಕಾರ್ಲ್ ಪೀ! ಟೆಕ್ ಹಬ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಕಂಪನಿ!

ಬೆಂಗಳೂರು: ಟೆಕ್ ಲೋಕದ ಕ್ರೇಜಿ ಬ್ರ್ಯಾಂಡ್ ‘ನಥಿಂಗ್’ (Nothing) ತನ್ನ ಮೊದಲ ಫ್ಲ್ಯಾಗ್‌ಶಿಪ್ ಸ್ಟೋರ್ ಅನ್ನು ಬೆಂಗಳೂರಿನಲ್ಲಿ ಭರ್ಜರಿಯಾಗಿ ಲಾಂಚ್ ಮಾಡಿದೆ. ಈ ಕಾರ್ಯಕ್ರಮದ ಹೈಲೈಟ್ ಎಂದರೆ ಕಂಪನಿಯ ಸಿಇಒ ಕಾರ್ಲ್ ಪೀ (Carl Pei) ಅವರು ಆಟೋ ರಿಕ್ಷಾದಲ್ಲಿ ಆಗಮಿಸಿದ್ದು! ಕಾರ್ಲ್ ಪೀ ಅವರು ಸಾಮಾನ್ಯ ಆಟೋದಲ್ಲಿ ಬರಲಿಲ್ಲ. ಬದಲಾಗಿ, ನಥಿಂಗ್ ಕಂಪನಿಯ ಐಕಾನಿಕ್ ವಿನ್ಯಾಸವಾದ ‘ವೈಟ್ ಆಂಡ್ ಟ್ರಾನ್ಸ್‌ಪರೆಂಟ್’ ಥೀಮ್‌ನಲ್ಲಿ ಸಿದ್ಧಪಡಿಸಲಾದ ವಿಶೇಷ ಬಿಳಿ ಬಣ್ಣದ ಆಟೋದಲ್ಲಿ ಬಂದಿಳಿದರು.

ಬೆಂಗಳೂರಿನ ಟ್ರಾಫಿಕ್ ಮತ್ತು ಆಟೋ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಅವರು ಈ ರೀತಿ ಬರುವ ಮೂಲಕ ನೆರೆದಿದ್ದ ಟೆಕ್ ಪ್ರೇಮಿಗಳ ಗಮನ ಸೆಳೆಯಿತು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ಬೆಂಗಳೂರಿನಲ್ಲಿ ತೆರೆದಿರುವ ಈ ಸ್ಟೋರ್ ಭಾರತದಲ್ಲೇ ನಥಿಂಗ್ ಕಂಪನಿಯ ಮೊದಲ ಬೃಹತ್ ಮಳಿಗೆಯಾಗಿದ್ದು, ಗ್ರಾಹಕರು ನಥಿಂಗ್ ಫೋನ್‌ಗಳು ಮತ್ತು ಇಯರ್ ಬಡ್ಸ್‌ಗಳ ಅನುಭವವನ್ನು ಇಲ್ಲಿ ನೇರವಾಗಿ ಪಡೆಯಬಹುದಾಗಿದೆ.

ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ಹೊಸ ಆಟೋ ಬಿಡುಗಡೆ ಮಾಡಿದ ಮಹೀಂದ್ರ, ಇದರಲ್ಲಿದೆ ಅದ್ಬುತ ಫೀಚರ್! 

ಇಲ್ಲಿದೆ ನೋಡಿ ವಿಡಿಯೋ 

ಕಾರ್ಲ್ ಪೀ ಅವರ ಈ ‘ಲೋಕಲ್’ ಶೈಲಿಯ ಪ್ರವೇಶವು ಕಂಪನಿಯ ಮಾರ್ಕೆಟಿಂಗ್ ತಂತ್ರದ ಒಂದು ಭಾಗವಾಗಿದ್ದು, ಬೆಂಗಳೂರಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಫೋನ್ ಹೋಲ್ಡರ್, ಚಾರ್ಜಿಂಗ್ ಪೋರ್ಟ್, ಗ್ಲೋ ಬಾಕ್ಸ್, ಬಾಟಲ್ ಹೋಲ್ಡರ್ ಇತ್ಯಾದಿ ಎಕ್ಸಸರಿಸ್‌ಗಳಿದ್ದು, ಇ-ಅಟೋ ಎಕ್ಸ್ ಶೋರೂಮ್ ಬೆಲೆ 3,58,999 ರೂ. ಆಗಿದೆ.

ಮತ್ತಷ್ಟು ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು