Breaking News

T20 Worldcup: ಇಂಗ್ಲೆಂಡ್ ವಿರುದ್ಧ ವೀರೋಚಿತ ಸೋಲು ಕಂಡ ಇಟಲಿ

ಕೋಲ್ಕತಾ: ಕ್ರಿಕೆಟ್‌ನಲ್ಲಿ ಅಚ್ಚರಿಯ ಫಲಿತಾಂಶಗಳು ಸಾಮಾನ್ಯ. ಈಗಾಗಲೇ ಹಲವಾರು ಪಂದ್ಯಾವಳಿಯಲ್ಲಿ ಅನೇಕ ಬಲಿಷ್ಠ ತಂಡಗಳನ್ನು ಸಣ್ಣ ಪುಟ್ಟ ತಂಡಗಳು ಮಣಿಸಿದ ನಿದರ್ಶನವಿದೆ. ಇಂದು ನಡೆದ ಇಟಲಿ ಮತ್ತು ಇಂಗ್ಲೆಂಡ್ ತಂಡದ ನಡುವಿನ ಪಂದ್ಯಾಟದಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.

ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಇಟಲಿ ವಿರುದ್ಧ 24 ರನ್‌ಗಳ ಅಂತರದಿಂದ ಜಯ ಸಾಧಿಸಿತು. 203 ರನ್‌ಗಳ ಗುರಿ ಬೆನ್ನತ್ತಿದ ಇಟಲಿ ಹಂತ ಹಂತವಾಗಿ ವಿಕೆಟ್ ಕಳೆದುಕೊಂಡರೂ ಕೂಡ ಗೆಲುವಿನ ಸಮೀಪಕ್ಕೆ ಬಂದು ತಲುಪಿದ್ದರು.

Advertisement

ಇದನ್ನೂ ಓದಿ: ಛಲವಾದಿ ನಾರಾಯಣಸ್ವಾಮಿ ವಿರುದ್ಧ ಜಾತಿ ನಿಂದನೆ: ಕಾಂಗ್ರೆಸ್ ಶಾಸಕ ಅಶೋಕ್ ರೈ ವಿರುದ್ಧ ಬಿಜೆಪಿ ದೂರು

ಬೆನ್ ಮನೆಂಟಿ 60, ಗ್ರಾಂಟ್ ಸ್ಟೀವರ್ಟ್ 45, ಜಸ್ಟಿನ್ ಮೋಸ್ಕ 43 ರನ್ ಗಳಿಸಿ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು. ಕೊನೆಯ ಎರಡು ಓವರ್‌ಗಳಲ್ಲಿ ಗೆಲ್ಲಲು 30 ರ‌ನ್ ಬೇಕಿದ್ದಾಗ ಸ್ಯಾಮ್ ಕರಾನ್ ಮತ್ತೊಮ್ಮೆ ಆಪತ್ತಿಗೆ ನೆರವಾದರು. ಕೇವಲ 5 ರನ್ ನೀಡಿ ಮುಖ್ಯ ವಿಕೆಟ್ ಪಡೆದು ಇಟಲಿ ತಂಡದ ಗೆಲುವಿಗೆ ಬ್ರೇಕ್ ಹಾಕಿದರು. ಕೊನೇ ಓವರ್ ಎಸೆದ ಜೇಮಿ ಓವರ್‌ಟನ್ ಮೇಡಿನ್ ಓವರ್ ಹಾಕಿ ಎರಡು ವಿಕೆಟ್ ಪಡೆದು ಗೆಲುವಿನ ರುವಾರಿಯಾದರು‌.

ಇಂಗ್ಲೆಂಡ್ ಪರ ಜೇಮಿ ಓವರ್‌ಟನ್ ಮತ್ತು ಸ್ಯಾಮ್ ಕರನ್ 3, ಜೋಫ್ರ ಆರ್ಚರ್ 2, ವಿಲ್ ಜಾಕ್ಸ್ ಮತ್ತು ಆದಿಲ್ ರಶೀದ್ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ವಿಲ್ ಜಾಕ್ಸ್ 53, ಟಾಮ್ ಬ್ಯಾಂಟನ್ 30, ಫಿಲ್ ಸಾಲ್ಟ್ 28, ಸ್ಯಾಮ್ ಕರನ್ 25, ಜೇಕಬ್ ಬೆಥೆಲ್ 23 ರನ್ ಗಳ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು‌.

ಇಟಲಿ ಪರ ಗ್ರಾಂಟ್ ಸ್ಟೀವರ್ಟ್, ಕ್ರಿಶನ್ ಕಲುಗಮಗೆ ತಲಾ 2 ವಿಕೆಟ್, ಜೆಜೆ ಸ್ಮಟ್ಸ್, ಅಲಿ ಹಸನ್, ಬೆನ್ ಮನೆಟಿ ತಲಾ ಒಂದು ವಿಕೆಟ್ ಪಡೆದರು.

ಅಂತಿಮವಾಗಿ ಇಟಲಿ 24 ರನ್‌ಗಳ ವೀರೋಚಿತ ಸೋಲು ಕಂಡಿತು‌. ಇದರೊಂದಿಗೆ ಆಡಿದ ನಾಲ್ಕು ಪಂದ್ಯದಲ್ಲಿ 3 ಪಂದ್ಯ ಗೆದ್ದು ಇಂಗ್ಲೆಂಡ್ ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಿತು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

 

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು