Breaking News

Shocking: ತಾಲಿಬಾನ್ ಹೊಸ ರೂಲ್ಸ್, ಹೆಣ್ಮಕ್ಕಳಿಗೆ ನರಕ

ಕಾಬುಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಜಾರಿ ಆದ ಮೇಲೆ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಹೆಣ್ಣು ಮಕ್ಕಳ ಸ್ವಾತಂತ್ರ್ಯಕ್ಕೆ ಸಂಪೂರ್ಣ ಪೂರ್ಣ ವಿರಾಮ ಹಾಕಿತ್ತು. ಇದೀಗ ಮತ್ತೊಂದು ಕಾನೂನು ತಂದಿದ್ದು, ಹೆಣ್ಣು ಮಕ್ಕಳ ಜೀವನ ನರಕವಾಗಲಿದೆ.

ಇದನ್ನೂ ಓದಿ: ಬೆಂಗಳೂರು: ಒಕ್ಕಲಿಗ ಯುವ ಬ್ರಿಗೇಡ್‌ನ ‘ಸಾವಯವ ಸಂತೆ’ ಸಮಾರೋಪ; ಶ್ರೀಗಳ ಸಾಧನೆಗೆ ನಿವೃತ್ತ ನ್ಯಾ. ಸಂತೋಷ ಹೆಗ್ಡೆ ಮೆಚ್ಚುಗೆ

Advertisement

ತಾಲಿಬಾನಿಗಳ ಹೊಸ ಕಾನೂನಿನ ಅನ್ವಯ ಹೆಂಡತಿಯು ದಾಸಿಯಾಗಿದ್ದು, ಆಕೆಗೆ ಹೊಡೆಯುವ ಸಂಪೂರ್ಣ ಅಧಿಕಾರವನ್ನು ಪತಿಗೆ ನೀಡಲಾಗಿದೆ.

ಸರ್ವೋಚ್ಚ ನಾಯಕ ಅಖುಂಡ್ಜಾದಾ ಸಹಿ ಮಾಡಿರುವ ಈ ಕಾನೂನಿನಲ್ಲಿ, ಸಣ್ಣ ತಪ್ಪುಗಳನ್ನು ಮಾಡಿದಾಗ ಹೆಂಡತಿಗೆ ಹೊಡೆಯಲು ಗಂಡನಿಗೆ ಹಾಗೂ ಮಕ್ಕಳಿಗೆ ಬಾರಿಸಲು ತಂದೆಗೆ ಪೂರ್ಣ ಸ್ವಾತಂತ್ರ್ಯವಿದೆ.

ಆದರೆ ಅದರಿಂದ ಸಂತ್ರಸ್ತರಿಗೆ ಯಾವುದೇ ದೊಡ್ಡ ಗಾಯ ಅಥವಾ ಮೂಳೆ ಮುರಿತ ಆಗಬಾರದು ಎನ್ನಲಾಗಿದೆ. ಒಂದು ವೇಳೆ ಗಂಡ ಮೂಳೆ ಮುರಿಯುವಂತೆ ಹೆಂಡತಿಗೆ ಬಾರಿಸಿದರೆ ಗರಿಷ್ಠ 15 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದೆ.

ಅಂತೆಯೇ ಪತಿಯ ಆಣತಿಯಿಲ್ಲದೆ ಸಂಬಂಧಿಕರ ಮನೆಗೆ ಹೋಗುವ ಸ್ತ್ರೀಯರಿಗೆ 3 ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಲಾಗುವುದು.

ಹೊಸ ಸಂಹಿತೆಯ 9 ನೇ ವಿಧಿಯು ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಶಿಕ್ಷೆಯ ಶ್ರೇಣೀಕೃತ ವ್ಯವಸ್ಥೆಯನ್ನು ಪರಿಚಯಿಸುತ್ತದೆ. ಅಫ್ಘಾನ್ ಸಮಾಜವನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ.

ಧಾರ್ಮಿಕ ವಿದ್ವಾಂಸರು, ಎಲೈಟ್, ಮಧ್ಯಮ ವರ್ಗ ಮತ್ತು ಕೆಳವರ್ಗ. ಆರೋಪಿಯು ಯಾವ ವರ್ಗಕ್ಕೆ ಸೇರಿದವನೆಂಬುದನ್ನು ಅವಲಂಬಿಸಿ ಒಂದೇ ಅಪರಾಧಕ್ಕೆ ಶಿಕ್ಷೆ ಬದಲಾಗುತ್ತದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು