ಕನ್ನಡ ಚಿತ್ರರಂಗದ ಖ್ಯಾತ ನಟಿ ಮೇಘನಾ ರಾಜ್ ಅವರು ತಮ್ಮ ಜೀವನದ ಮಹತ್ವದ ನಿರ್ಧಾರ ಕುರಿತು ಮೊದಲ ಬಾರಿಗೆ ಓಪನ್ ಆಗಿ ಮಾತನಾಡಿದ್ದಾರೆ. “ಪ್ರತಿಯೊಬ್ಬರಿಗೂ ಜೀವನದಲ್ಲಿ ಒಬ್ಬ ಜೊತೆಗಾರ ಬೇಕು. ಅದು ಕೇವಲ ಗಂಡನಾಗಿಯೇ ಇರಬೇಕೆಂದೇನಿಲ್ಲ, ಆದರೆ ಕಷ್ಟ-ಸುಖ ಹಂಚಿಕೊಳ್ಳಲು ಒಬ್ಬ ವ್ಯಕ್ತಿ ಬೇಕು” ಎಂದು ಅವರು ತಿಳಿಸಿದ್ದಾರೆ.
ಇಂಗ್ಲಿಷ್ ಯೂಟ್ಯೂಬ್ ಚಾನೆಲ್ Rayane Mithun ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಮದುವೆ ಕುರಿತು ಅನೇಕ ಪ್ರಶ್ನೆಗಳು ಎದುರಾಗುತ್ತಿದ್ದರೂ, ಇದುವರೆಗೆ ಸ್ಪಷ್ಟವಾಗಿ ಯಾವುದೇ ನಿರ್ಧಾರವನ್ನು ಅವರು ಪ್ರಕಟಿಸಿರಲಿಲ್ಲ.

ಪತಿ ಚಿರಂಜೀವಿ ಸರ್ಜಾ ಅವರು ನಿಧನಹೊಂದಿ ಆರು ವರ್ಷಗಳಾಗುತ್ತಿದ್ದು, ಅವರ ಅಗಲಿಕೆಯ ನಂತರ ಮೇಘನಾ ತಮ್ಮ ಮಗನ ಆರೈಕೆಯಲ್ಲಿ ಹಾಗೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು. “ಸದ್ಯ ಮತ್ತೊಂದು ಪ್ರೀತಿಗೆ ಮಾನಸಿಕವಾಗಿ ಸಿದ್ಧಳಾಗಿಲ್ಲ. ಆದರೆ ಮುಂದೆ ಜೀವನದಲ್ಲಿ ಏನಾದರೂ ಅವಕಾಶ ಬಂದರೆ ಆ ಕ್ಷಣದಲ್ಲಿ ಯೋಚಿಸಿ ನಿರ್ಧಾರ ಮಾಡುತ್ತೇನೆ” ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral: ವಿಜಯ್, ರಶ್ಮಿಕಾ ಮದುವೆ ಲೈವ್‌ಗೆ 60 ಕೋಟಿ ಆಫರ್!
ಇದೇ ವಿಚಾರವಾಗಿ ಕೆಲ ದಿನಗಳ ಹಿಂದೆ ಹಿರಿಯ ನಟ ಹಾಗೂ ಮೇಘನಾ ಅವರ ತಂದೆ ಸುಂದರ ರಾಜ್ ಕೂಡ ಮಾತನಾಡಿ, “ಮಗಳ ಬದುಕಿನ ಆಯ್ಕೆ ಅವಳದೇ. ಅವಳು ತೆಗೆದುಕೊಳ್ಳುವ ನಿರ್ಧಾರವೇ ನಮ್ಮ ನಿರ್ಧಾರ” ಎಂದು ತಿಳಿಸಿದ್ದಾರೆ. “ಗಂಡು-ಹೆಣ್ಣಿನ ಸಂಬಂಧ ಕೇವಲ ದೈಹಿಕವಲ್ಲ, ಅದು ಮಾನಸಿಕ ಸಹಬಾಳ್ವೆ” ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದರು.
ಸದ್ಯ ಮೇಘನಾ ತಮ್ಮ ಮಗ ರಾಯನ್ ಸರ್ಜಾ ಅವರ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. 2020ರ ಜೂನ್‌ನಲ್ಲಿ ಚಿರಂಜೀವಿ ಸರ್ಜಾ ಅವರ ನಿಧನದ ನಂತರ ಕುಟುಂಬಕ್ಕೆ ಬೆಳಕಾಗಿ ಬಂದಿದ್ದು ರಾಯನ್. ಮೇಘನಾ ಅವರ ಈ ಸ್ಪಷ್ಟ ಮನದ ಮಾತುಗಳು ಅವರ ಅಭಿಮಾನಿಗಳಿಗೆ ಸಂತಸ ತಂದಿದ್ದು, ಮುಂದಿನ ದಿನಗಳಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

