ಅಹಮದಾಬಾದ್: ಟಿ-20 ವಿಶ್ವಕಪ್‌ನಲ್ಲಿ ಸೋಲಿಲ್ಲದ ಸರದಾರನಂತೆ ಮೆರೆಯುತ್ತಿದ್ದ ಭಾರತಕ್ಕೆ ದಕ್ಷಿಣ ಆಫ್ರಿಕಾ ತಂಡ ಸೋಲಿನ ರುಚಿ ತೋರಿಸಿದೆ. ಕಳೆದ ಬಾರಿಯ ಫೈನಲ್ಸ್ ಸೇಡು ತೀರಿಸಿಕೊಂಡಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಸೂಪರ್-8 ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಲ್ಪ ಮೊತ್ತಕ್ಕೆ ಮೊದಲ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಡೆವಲ್ಡ್ ಬ್ರೆವಿಸ್ ಮತ್ತು ಡೇವಿಡ್ ಮಿಲ್ಲರ್ 50 ಎಸೆತಗಳಲ್ಲಿ 97 ರನ್‌ಗಳ ಜೊತೆಯಾಟ ನೀಡಿದರು. ನಂತರ ಬಂದ ಟ್ರಿಸ್ಟನ್ ಸ್ಟಬ್ಸ್ ಕೂಡ ಬಿರುಸಿನ ಹೊಡೆತಕ್ಕೆ ಕೈ ಹಾಕಿದರು. ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು.

ಇದನ್ನೂ ಓದಿ: T20 Worldcup: ವಿಲ್ ಜಾಕ್ಸ್ ಆಲ್‌ರೌಂಡ್ ಪ್ರದರ್ಶನ, ಶ್ರೀಲಂಕಾ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ
ತಂಡದ ಪರ ಡೇವಿಡ್ ಮಿಲ್ಲರ್ 35 ಎಸೆತಗಳಲ್ಲಿ 63, ಡೆವಲ್ಡ್ ಬ್ರೆವಿಸ್ 45, ಟ್ರಿಸ್ಟನ್ ಸ್ಟಬ್ಸ್ ಅಜೇಯ 44 ರನ್ ಗಳಿಸಿದರು. ಭಾರತ ಪರ ಜಸ್ಪ್ರೀತ್ ಬುಮ್ರಾ 3, ಅರ್ಶದೀಪ್ ಸಿಂಗ್ 2, ವರುಣ್ ಚಕ್ರವರ್ತಿ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಸತತ ಸೊನ್ನೆ ಸುತ್ತಿದ ಅಭಿಷೇಕ್ ಶರ್ಮ ಈ ಬಾರಿ ನಾನ್ ಸ್ಟ್ರೈಕ್ ನಲ್ಲಿ ಇದ್ದರು ಕೂಡ ಇಶನ್ ಕಿಶನ್ ಡಕ್ ಔಟ್ ಆಗಿ ನಿರಾಸೆ ಮೂಡಿಸಿದರು. ಭಾರತ ಪರ ಶಿವಂ ದುಬೆ 42, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ತಲಾ 18 ರನ್ ಗಳಿಸಿದರು.
ಉಳಿದ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು. ಅಂತಿಮವಾಗಿ ಭಾರತ 111 ರನ್‌ಗಳಿಗೆ ಆಲ್‌ಔಟ್ ಆಗಿ 76 ರನ್‌ಗಳಿಂದ ಸೋಲು ಕಂಡಿತು. ದಕ್ಷಿಣ ಆಫ್ರಿಕಾ ಪರ ಮ್ಯಾಕ್ರೊ ಯಾನ್ಸನ್ 4, ಕೇಶವ್ ಮಹಾರಾಜ್ 3, ಕಾರ್ಬಿನ್ ಬಾಷ್ 2 ಮತ್ತು ಆಯ್ಡೆನ್ ಮಾಕ್ರಮ್ 1 ವಿಕೆಟ್ ಪಡೆದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

