ಅಧಿಕಾರ ಹಿಡಿದ ಕೆಲವೇ ಗಂಟೆಗಳಲ್ಲಿ ಇರಾನ್‌ನ ಮಧ್ಯಂತರ ಸುಪ್ರೀಂ ಲೀಡರ್ ಅಲಿರೆಜಾ ಅರಾಫಿ ಹತ್ಯೆ

ಅಧಿಕಾರ ಹಿಡಿದ ಕೆಲವೇ ಗಂಟೆಗಳಲ್ಲಿ ಇರಾನ್‌ನ ಮಧ್ಯಂತರ ಸುಪ್ರೀಂ ಲೀಡರ್ ಅಲಿರೆಜಾ ಅರಾಫಿ ಅವರನ್ನೂ ಹತ್ಯೆ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಕೆಲವು ಇಸ್ರೇಲ್ ಮಾಧ್ಯಮಗಳಲ್ಲಿ ವರದಿಗಳಾಗಿವೆ. ಆದರೆ ಈ ವರದಿಗಳನ್ನು ಇರಾನ್ ಮಾಧ್ಯಮಗಳು ಅಥವಾ ಪ್ರಮುಖ ಅಂತರರಾಷ್ಟ್ರೀಯ ಸುದ್ದಿಸಂಸ್ಥೆಗಳು ಇನ್ನೂ ದೃಢಪಡಿಸಿಲ್ಲ.

ಹಿಂದೆ ಅಲಿ ಖಾಮೆನೇಯಿ ಅವರ ಹತ್ಯೆಯ ಕುರಿತೂ ಪ್ರಾರಂಭದಲ್ಲಿ ಗೊಂದಲ ಉಂಟಾಗಿತ್ತು. ಮೊದಲಿಗೆ ಇಸ್ರೇಲಿ ಅಧಿಕಾರಿಗಳು ದೃಢಪಡಿಸಿದ ನಂತರ ಇರಾನ್ ಅಧಿಕಾರಿಗಳು ಸುಪ್ರೀಂ ಲೀಡರ್‌ನ ಹತ್ಯೆ ಬಗ್ಗೆ ದೃಢಪಡಿಸಿದ್ದರು. ಇದೀಗ ಅಲಿರೆಜಾ ಅರಾಫಿ ಅವರ ಸಾವಿನ ಬಗ್ಗೆ ಹೊರಬಂದಿರುವ ವರದಿಗಳೂ ಇದೇ ರೀತಿಯ ಅನುಮಾನಗಳ ನಡುವೆ ಸಾಗುತ್ತಿವೆ.

Advertisement

ಇರಾನ್‌ನ ದೀರ್ಘಕಾಲದ ಸುಪ್ರೀಂ ಲೀಡರ್ ಆಗಿದ್ದ ಅಲಿ ಖಾಮೆನೇಯಿ ಅವರು ಫೆಬ್ರವರಿ ೨೮ ರಂದು ಟೆಹ್ರಾನ್ ಮೇಲೆ ನಡೆದ ಅಮೆರಿಕಾ-ಇಸ್ರೇಲ್ ಜಂಟಿ ವಾಯುದಾಳಿಯಲ್ಲಿ ಸಾವನ್ನಪ್ಪಿದ ನಂತರ, ಹಿರಿಯ ಧಾರ್ಮಿಕ ನಾಯಕ ಹಾಗೂ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದ ಅಲಿರೆಜಾ ಅರಾಫಿ ಅವರನ್ನು ತಾತ್ಕಾಲಿಕ ಸುಪ್ರೀಂ ಲೀಡರ್ ಆಗಿ ನೇಮಿಸಲಾಗಿತ್ತು.

ಖಾಮೆನೇಯಿ ಅವರ ಹತ್ಯೆಯಾದ ದಿನವೇ ಅರಾಫಿ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಆದರೆ ಮಾರ್ಚ್ ೨ರ ವರೆಗೆ ಅವರ ಮೇಲಿನ ದಾಳಿಯ ಕುರಿತ ವರದಿಗಳು ಅಧಿಕೃತವಾಗಿ ದೃಢಪಡಿಸಲ್ಪಟ್ಟಿಲ್ಲ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದ್ದು, ಅಪಾರ ಮಾನವ ಹಾನಿ ಮತ್ತು ಆಸ್ತಿ ನಷ್ಟಕ್ಕೆ ಕಾರಣವಾಗಿದೆ. ಪರಿಸ್ಥಿತಿ ದಿನೇದಿನೇ ಗಂಭೀರವಾಗುತ್ತಿದೆ.

Advertisement

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು