ಆರೋಗ್ಯಕರ ಜೀವನಕ್ಕೆ ಉತ್ತಮ ನಿದ್ರೆ ಅತ್ಯಂತ ಮುಖ್ಯ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಭಾರತದಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ನಿದ್ರಾಹೀನತೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂಬ ಆತಂಕಕಾರಿ ಸಂಗತಿ ಹೊಸ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ರೆಸ್ಮೆಡ್ ಸಂಸ್ಥೆ ನಡೆಸಿದ 2026ರ ಗ್ಲೋಬಲ್ ಸ್ಲೀಪ್ ಸರ್ವೇ ಪ್ರಕಾರ, ಭಾರತದಲ್ಲಿ ಮಹಿಳೆಯರಿಗೆ ನಿದ್ರೆ ಬರಲು ಹೆಚ್ಚು ಸಮಯ ಹಿಡಿಯುತ್ತದೆ. ಸಮೀಕ್ಷೆಯ ಪ್ರಕಾರ ಸುಮಾರು 38% ಮಹಿಳೆಯರು ನಿದ್ರೆ ಬಾರದ ಸಮಸ್ಯೆ ಎದುರಿಸುತ್ತಿದ್ದಾರೆ, ಆದರೆ ಪುರುಷರಲ್ಲಿ 29% ರಷ್ಟು ಮಂದಿ ಮಾತ್ರ ನಿದ್ರಾಹೀನತೆಯನ್ನು ಎದುರಿಸುತ್ತಿದ್ದಾರೆ.

ಮಹಿಳೆಯರ ನಿದ್ರೆಗೆ ಒತ್ತಡ ಮತ್ತು ಆತಂಕ ಪ್ರಮುಖ ಕಾರಣವಾಗಿದ್ದು, 42% ಮಹಿಳೆಯರು ಇದರಿಂದ ನಿದ್ರೆ ಹಾನಿಯಾಗುತ್ತಿದೆ ಎಂದು ಹೇಳಿದ್ದಾರೆ. ಕುಟುಂಬದ ಜವಾಬ್ದಾರಿಗಳು ಕೂಡ ಮಹಿಳೆಯರ ನಿದ್ರೆಗೆ ಅಡ್ಡಿಯಾಗುತ್ತಿವೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಮದುವೆಗೂ ಮುನ್ನ ತೂಕ ಇಳಿಸಬೇಕೇ? ಕಠಿಣ ವ್ಯಾಯಾಮವಿಲ್ಲದೆ ಕೆಜಿಗಟ್ಟಲೆ ತೂಕ ಇಳಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್!
ಭಾರತದಲ್ಲಿ ಒಟ್ಟಾರೆ ನೋಡಿದರೆ ಒತ್ತಡ ಮತ್ತು ಆತಂಕ (39%), ಕೆಲಸದ ಒತ್ತಡ (37%) ಹಾಗೂ ಮನೆಯ ಜವಾಬ್ದಾರಿಗಳು (31%) ಉತ್ತಮ ನಿದ್ರೆಗೆ ದೊಡ್ಡ ಅಡ್ಡಿಯಾಗಿವೆ. ಸರಿಯಾದ ನಿದ್ರೆ ಇಲ್ಲದಿರುವುದು ದೇಹ ಮತ್ತು ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ.
- 39% ಜನರಿಗೆ ಹೆಚ್ಚು ಒತ್ತಡದಿಂದ ಇಲ್ಲದ ನಿದ್ದೆ
- 35% ಜನರಿಗೆ ಕಿರಿಕಿರಿಯಿಂದ ಇಲ್ಲದ ನಿದ್ದೆ
- 30% ಜನರಿಗೆ ಖಿನ್ನತೆಯಿಂದ ಇಲ್ಲದ ನಿದ್ದೆ
ಇದರಿಂದ ಕೆಲಸದ ಮೇಲೂ ಪರಿಣಾಮ ಬೀರುತ್ತಿದ್ದು, 71% ಉದ್ಯೋಗಿಗಳು ಸರಿಯಾದ ನಿದ್ರೆ ಇಲ್ಲದಿದ್ದರೆ ಕೆಲಸದಲ್ಲಿ ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ತಂತ್ರಜ್ಞಾನ ಸಹಾಯದಿಂದ ಜನರು ತಮ್ಮ ನಿದ್ರೆಯನ್ನು ಗಮನಿಸುತ್ತಿದ್ದಾರೆ. ಭಾರತದಲ್ಲಿ 75% ಜನರು ಸ್ಮಾರ್ಟ್ ವಾಚ್ ಅಥವಾ ಫಿಟ್ನೆಸ್ ಬ್ಯಾಂಡ್ ಮೂಲಕ ನಿದ್ರೆ ಟ್ರ್ಯಾಕ್ ಮಾಡುತ್ತಿದ್ದಾರೆ ಎಂಬುದೂ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ತಜ್ಞರ ಅಭಿಪ್ರಾಯದ ಪ್ರಕಾರ, ಆರೋಗ್ಯಕರ ಜೀವನಕ್ಕಾಗಿ ಸಮಯಕ್ಕೆ ನಿದ್ರೆ ಮಾಡುವುದು, ಒತ್ತಡ ಕಡಿಮೆ ಮಾಡುವುದು ಮತ್ತು ನಿದ್ರೆ ಆರೋಗ್ಯಕ್ಕೆ ಆದ್ಯತೆ ನೀಡುವುದು ಅತ್ಯಂತ ಅಗತ್ಯವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

