ಅಶಕ್ತ ಕುಟುಂಬದ ಮನೆ ನವೀಕರಿಸಿ ಹಸ್ತಾಂತರಿಸಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್

puttila-parivara-seva-trust-house-renovation-panaje-rss-centenary

ಪುತ್ತೂರು: ಸಂಘ ಶತಾಬ್ದಿಯ ಶುಭ ಸಂದರ್ಭವನ್ನು ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪಾಣಾಜೆ ಗ್ರಾಮ ಸಮಿತಿ ಅಶಕ್ತ ಕುಟುಂಬವೊಂದರ ಮನೆ ನವೀಕರಣ ಮಾಡಿ ಮಾನವೀಯತೆ ಮೆರೆದಿದೆ.

ಪಾಣಾಜೆ ಗ್ರಾಮದ ಕಲ್ಲಪದವು ನಿವಾಸಿ ವೀಣಾ ಬಾಬು ಅವರ ಮನೆಯ ಮೇಲ್ಚಾವಣಿ ಸಂಪೂರ್ಣ ಕುಸಿದು ಹೋಗಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಮನೆ ನವೀಕರಣ ಮಾಡುವುದು ಕಷ್ಟಕರವಾಗಿತ್ತು. ಈ ಹಿನ್ನೆಲೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪಾಣಾಜೆ ಗ್ರಾಮ ಸಮಿತಿ ಊರಿನ ದಾನಿಗಳು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ದಳದ ಸಹಕಾರದಿಂದ ಸುಮಾರು 55,000 ವೆಚ್ಚದಲ್ಲಿ ಮನೆ ನವೀಕರಣ ಕಾರ್ಯ ಕೈಗೊಂಡಿತು.

Advertisement

ನವೀಕರಿಸಿದ ಮನೆಯನ್ನು ಮಾರ್ಚ್ 8 ರಂದು ಗಣಪತಿ ಹವನ ನೆರವೇರಿಸಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಸಂಘ ಶತಾಬ್ದಿ ಸಂದರ್ಭದಲ್ಲಿ ನಡೆದ ಈ ಸೇವಾ ಕಾರ್ಯ ಸ್ಥಳೀಯರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಕುಟುಂಬಕ್ಕೆ ಶುಭಹಾರೈಸಿ, ಸಮಾಜದಲ್ಲಿ ಅಗತ್ಯವಿರುವವರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ಇದನ್ನೂ ಓದಿ: ವೀಲ್‌ ಚೇರ್‌ ಹಿಡಿದ ಮನೆ ಯಜಮಾನ; ಕಾಡುತ್ತಿರುವ ಅನಾರೋಗ್ಯ, ಚಿಕಿತ್ಸೆಗೆ ಬೇಕಿದೆ ಸಹಾಯ ಹಸ್ತ

ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘ ಪಾಣಾಜೆ ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಡಾ. ಅಖಿಲೇಶ್ ಪಾಣಾಜೆ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪ್ರೇಮ್ ರಾಜ್ ಆರ್ಲಪದವು, ಕೋಶಾಧಿಕಾರಿ ರೂಪೇಶ್ ನಾಯ್ಕ್, ನಿವೃತ್ತ ಮುಖ್ಯ ಶಿಕ್ಷಕಿ ಪ್ರತಿಭಾ ಓಕುಣ್ಣಾಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಯಶ್ರೀ ದೇವಸ್ಯ, ಯುವ ಉದ್ಯಮಿ ಹರಿಪ್ರಸಾದ್ ಕಾಸರಗೋಡು, ಗೋಪಾಲಕೃಷ್ಣ ಓಕುಣ್ಣಾಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಲ್ಲದೆ, ಪುತ್ತಿಲ ಪರಿವಾರ ಪಾಣಾಜೆ ಗ್ರಾಮ ಸಮಿತಿ ಅಧ್ಯಕ್ಷ ಶ್ರೀನಿವಾಸ ಕುಲಾಲ್ ಉಡ್ಡಂಗಳ, ಪ್ರಧಾನ ಕಾರ್ಯದರ್ಶಿ ಸುಖಿನ್ ರಾಜ್, ಪದಾಧಿಕಾರಿಗಳಾದ ವಸಂತ ಕುಮಾರ್ ಭರಣ್ಯ, ಪ್ರದೀಪ್ ಪಾಣಾಜೆ, ಸಂದೀಪ್ ಕೆ, ಸುರೇಶ್ ತೂಂಬಡ್ಕ, ಹರೀಶ್ ಕುಲಾಲ್ ಆರ್ಲಪದವು, ಹರೀಶ್ ವಾಣಿಯನ್, ಗೋಪಾಲಕೃಷ್ಣ ನೆಲ್ಲಿತ್ತಿಮಾರು, ಹರಿಕೃಷ್ಣ ಒಡ್ಯ, ಮಂಜುನಾಥ ಪೂಜಾರಿ, ರವಿಚಂದ್ರ ಬಿ.ಜಿ, ಶಶಿಕಾಂತ್ ವಾಣಿಯನ್, ಕೀರ್ತಿರಾಜ್ ಉಡ್ಡಂಗಳ, ಚಂದ್ರ ಬೇರಿಕೆ, ಹರೀಶ್ ಗುರಿಕೇಲು ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದೇ ವೇಳೆ ಸೀತಾ ಪರಿವಾರ ಟ್ರಸ್ಟ್‌ನ ಪದಾಧಿಕಾರಿಗಳಾದ ಪ್ರಮಿಳಾ ಸುರೇಶ್ ತೂಂಬಡ್ಕ ಮತ್ತು ಸಂದ್ಯಾ ಸಂದೀಪ್ ಕೆ ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು