ಪುತ್ತೂರು: ಸೇಡಿಯಾಪಿಗೆ ಆಸ್ಪತ್ರೆ ಸ್ಥಳಾಂತರ ಬೇಡ; ನಗರದ ಹೃದಯಭಾಗದಲ್ಲೇ ಇರಲಿ ‘300 ಬೆಡ್’ ಆಸ್ಪತ್ರೆ – ರಫೀಕ್ ದರ್ಬೆ ಆಗ್ರಹ

ಪುತ್ತೂರು: ನಗರದ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಪುತ್ತೂರಿನ ಹೃದಯಭಾಗದಲ್ಲಿರುವ ಈಗಿನ ಸರ್ಕಾರಿ ಆಸ್ಪತ್ರೆಯ ಜಾಗದಲ್ಲೇ 300 ಬೆಡ್‌ಗಳ ಸುಸಜ್ಜಿತ ಆಸ್ಪತ್ರೆ ಇರಬೇಕು. ಯಾವುದೇ ಕಾರಣಕ್ಕೂ ಇದನ್ನು ಸೇಡಿಯಾಪಿಗೆ ಸ್ಥಳಾಂತರಿಸಬಾರದು ಎಂದು ಆರೋಗ್ಯ ರಕ್ಷಾ ಸಮಿತಿಯ ನಿಕಟಪೂರ್ವ ಸದಸ್ಯ ರಫೀಕ್ ದರ್ಬೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ವೀಲ್‌ ಚೇರ್‌ ಹಿಡಿದ ಮನೆ ಯಜಮಾನ; ಕಾಡುತ್ತಿರುವ ಅನಾರೋಗ್ಯ, ಚಿಕಿತ್ಸೆಗೆ ಬೇಕಿದೆ ಸಹಾಯ ಹಸ್ತ

Advertisement

ಮೆಡಿಕಲ್ ಕಾಲೇಜು ಸ್ಥಾಪನೆಗೆ ಪೂರಕವಾಗಿ ಈಗಾಗಲೇ ತಾಲೂಕು ಕಚೇರಿ, ಕಾರಾಗೃಹ ಸೇರಿದಂತೆ ಸುತ್ತಮುತ್ತಲಿನ 5.16 ಎಕರೆ ಸರ್ಕಾರಿ ಜಾಗವನ್ನು ಗುರುತಿಸಲಾಗಿದೆ. ಇದು ಜನರ ಸಂಚಾರಕ್ಕೆ ಮತ್ತು ತುರ್ತು ಚಿಕಿತ್ಸೆಗೆ ಅತ್ಯಂತ ಅನುಕೂಲಕರವಾದ ಜಾಗವಾಗಿದೆ.ಸೇಡಿಯಾಪಿಯಲ್ಲಿರುವ ಜಾಗವು ರಕ್ಷಿತಾರಣ್ಯಕ್ಕೆ ಸೇರಿದ್ದಾಗಿದೆ ಎಂಬ ಆತಂಕವಿದೆ. ಅಲ್ಲಿಗೆ ಆಸ್ಪತ್ರೆ ಸ್ಥಳಾಂತರಗೊಂಡರೆ ಸಾಮಾನ್ಯ ಜನರಿಗೆ ತೊಂದರೆಯಾಗಲಿದೆ ಎಂದು ರಾಜೇಶ್ ಬನ್ನೂರು ತಿಳಿಸಿದರು.

ಇದನ್ನೂ ಓದಿ:

ಮೆಡಿಕಲ್ ಕಾಲೇಜು ಮಂಜೂರಾತಿ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದಿರುವಾಗ, ಇರುವ ಆಸ್ಪತ್ರೆಯನ್ನು ನಗರದಿಂದ ದೂರ ಕೊಂಡೊಯ್ಯುವ ಹುನ್ನಾರ ನಡೆಯುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗಾಗಿ ಜಾಗ ಮಂಜೂರು ಮಾಡುವಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಪಾತ್ರ ದೊಡ್ಡದಿದೆ ಎಂದು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ವಿದ್ಯಾಗೌರಿ, ಯುವರಾಜ್ ಪಿರಿಯತ್ತೋಡಿ ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು