ಐತಿಹಾಸಿಕ ತೀರ್ಪು: 13 ವರ್ಷಗಳಿಂದ ಕೋಮಾದಲ್ಲಿದ್ದ ವ್ಯಕ್ತಿಗೆ ದಯಾಮರಣಕ್ಕೆ ಸುಪ್ರೀಂ ಅನುಮತಿ!

ದೆಹಲಿ: ಕಳೆದ 13 ವರ್ಷಗಳಿಂದ ಚಲನವಲನವಿಲ್ಲದೆ ಕೋಮಾದಲ್ಲಿದ್ದ (Persistent Vegetative State) 32 ವರ್ಷದ ಹರೀಶ್ ರಾಣಾ ಅವರಿಗೆ ‘ಗೌರವಯುತವಾಗಿ ಸಾಯುವ ಹಕ್ಕು’ (Right to die with dignity) ನೀಡುವ ಮೂಲಕ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಇದು ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲೇ ನಿಷ್ಕ್ರಿಯ ದಯಾಮರಣಕ್ಕೆ ನ್ಯಾಯಾಲಯ ನೀಡಿದ ಮೊದಲ ಅಧಿಕೃತ ಅನುಮತಿಯಾಗಿದೆ.ಹರಿಯಾಣ ಮೂಲದ ಹರೀಶ್ ರಾಣಾ 2013ರಲ್ಲಿ ಚಂಡೀಗಢದಲ್ಲಿ ಓದುತ್ತಿದ್ದಾಗ ಪಿಜಿ ಕಟ್ಟಡದ ನಾಲ್ಕನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಈ ಅಪಘಾತದ ನಂತರ ಹರೀಶ್ 100% ಪಾರ್ಶ್ವವಾಯು ಪೀಡಿತರಾಗಿ ಕೋಮಾಗೆ ಜಾರಿದ್ದರು. ಅವರ ಪೋಷಕರು ಚಿಕಿತ್ಸೆಗಾಗಿ ತಮ್ಮ ಮನೆಯನ್ನೇ ಮಾರಾಟ ಮಾಡಿದ್ದರು. ಯಾವುದೇ ಸುಧಾರಣೆ ಕಂಡುಬರದಿದ್ದಾಗ, ಮಗ ಅನುಭವಿಸುತ್ತಿರುವ ಅಸಹನೀಯ ನೋವನ್ನು ಕೊನೆಗಾಣಿಸಲು ದಯಾಮರಣ ಕೋರಿ ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದರು.ನ್ಯಾಯಮೂರ್ತಿಗಳಾದ ಜೆ. ಬಿ. ಪಾರ್ದಿವಾಲಾ ಮತ್ತು ಕೆ. ವಿ. ವಿಶ್ವನಾಥನ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ. “ನಾವು ಈ ಯುವಕನನ್ನು ಇಂತಹುದೇ ಸ್ಥಿತಿಯಲ್ಲಿ ಶಾಶ್ವತವಾಗಿ ಇರಿಸಲು ಸಾಧ್ಯವಿಲ್ಲ” ಎಂದು ಪೀಠವು ಭಾವುಕವಾಗಿ ನುಡಿಯಿತು.

Advertisement

ಇದನ್ನೂ ಓದಿ: ಮಂಗಳೂರು ಜನರ ಗಮನಕ್ಕೆ ಈ ಹೋಟೆಲ್​​ನಲ್ಲಿ ಮಧ್ಯಾಹ್ನದ ಊಟ ಇರುವುದಿಲ್ಲ

ಪೋಷಕರು ಮತ್ತು ವೈದ್ಯಕೀಯ ಮಂಡಳಿಯ ವರದಿಯನ್ನು ಆಧರಿಸಿ, ಹರೀಶ್ ಅವರಿಗೆ ನೀಡಲಾಗುತ್ತಿರುವ ಕೃತಕ ಪೋಷಕಾಂಶ ಮತ್ತು ವೈದ್ಯಕೀಯ ನೆರವನ್ನು (Life Support) ಹಿಂಪಡೆಯಲು ನ್ಯಾಯಾಲಯ ಅನುಮತಿ ನೀಡಿದೆ.ಈ ಪ್ರಕ್ರಿಯೆಯನ್ನು ಎಐಐಎಂಎಸ್ (AIIMS) ನ ಪಾಲಿಯೇಟಿವ್ ಕೇರ್ ವಿಭಾಗದಲ್ಲಿ ಅತ್ಯಂತ ಗೌರವಯುತವಾಗಿ ಮತ್ತು ನೋವಿಲ್ಲದಂತೆ ನಿರ್ವಹಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು