ಶಾಲೆಯೋ ಅಥವಾ ಜೈಲೋ? 2 ನಿಮಿಷ ತಡವಾಗಿದ್ದಕ್ಕೆ 2 ಗಂಟೆ ಶಿಕ್ಷೆ! ಬೆಂಗಳೂರಿನ ಶಾಲೆಯ ಅಮಾನವೀಯ ಕೃತ್ಯ

ಬೆಂಗಳೂರು: ಶಿಸ್ತಿನ ಹೆಸರಿನಲ್ಲಿ ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದು ಮೊದಲನೇ ತರಗತಿಯ ಪುಟ್ಟ ಬಾಲಕನಿಗೆ ಅಮಾನವೀಯ ಶಿಕ್ಷೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಸಂಚಾರ ದಟ್ಟಣೆಯಿಂದಾಗಿ ಕೇವಲ 2 ನಿಮಿಷ ತಡವಾಗಿ ಬಂದಿದ್ದಕ್ಕೆ ಮಗುವನ್ನು ಸುಮಾರು 2 ಗಂಟೆಗಳ ಕಾಲ ಸುಡುವ ಬಿಸಿಲಿನಲ್ಲಿ ನಿಲ್ಲಿಸುವ ಮೂಲಕ ಶಾಲಾ ಮಂಡಳಿ ತನ್ನ ಅಹಂಕಾರ ಪ್ರದರ್ಶಿಸಿದೆ.

ಮಧ್ಯಾಹ್ನದ ಹೊತ್ತಿನಲ್ಲಿ ತಾಪಮಾನ ಹೆಚ್ಚಿರುವಾಗ, ಮಗುವನ್ನು ಮೈದಾನದಲ್ಲಿ ನಿಲ್ಲಿಸಲಾಗಿದೆ. 6 ವರ್ಷದ ಮಗುವಿನ ದೈಹಿಕ ಸಾಮರ್ಥ್ಯವನ್ನು ಪರಿಗಣಿಸದೆ ಶಾಲಾ ಸಿಬ್ಬಂದಿ ಈ ಶಿಕ್ಷೆ ನೀಡಿದ್ದಾರೆ.ಮಗುವಿನ ಸ್ಥಿತಿಯನ್ನು ಕಂಡು ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಿದಾಗ, ಆಡಳಿತ ಮಂಡಳಿಯು ಕನಿಷ್ಠ ಸೌಜನ್ಯವಿಲ್ಲದೆ ವರ್ತಿಸಿದೆ. ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಬದಲು ಪೋಷಕರ ಮೇಲೆಯೇ ಉದ್ಧಟತನದ ಉತ್ತರ ನೀಡಿದ್ದಾರೆ.

Advertisement

ಇದನ್ನೂ ಓದಿ: Big News: ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾಗೆ ಮುಸ್ಲಿಂ ಯುವಕನೊಂದಿಗೆ ಲವ್: ಪೊಲೀಸರ ಮೊರೆ ಹೋದ ಜೋಡಿ

ಬಿಸಿಲಿನಲ್ಲಿ ನಿಂತಿದ್ದರಿಂದ ಮಗು ದೈಹಿಕವಾಗಿ ಅಸ್ವಸ್ಥಗೊಂಡಿರುವುದಲ್ಲದೆ, ಇಡೀ ಶಾಲೆಯ ಮುಂದೆ ಶಿಕ್ಷೆಗೆ ಗುರಿಯಾಗಿದ್ದರಿಂದ ಮಾನಸಿಕವಾಗಿಯೂ ಆಘಾತಕ್ಕೊಳಗಾಗಿದೆ.ಮಕ್ಕಳ ಮೇಲೆ ಯಾವುದೇ ರೀತಿಯ ದೈಹಿಕ ಶಿಕ್ಷೆ ಅಥವಾ ಮಾನಸಿಕ ಕಿರುಕುಳ ನೀಡುವುದನ್ನು RTE ಕಾಯ್ದೆ 2009 ಸಂಪೂರ್ಣವಾಗಿ ನಿಷೇಧಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು