ಪಾರ್ಶ್ವವಾಯು ಪೀಡಿತ ಜಿನ್ನಪ್ಪ ನಾಯ್ಕರಿಗೆ ಅರುಣ ಸಾರಥಿ ಚಾಲಕರ ಸಂಘಟನೆಯಿಂದ ನೆರವು

aruna-sarathi-drivers-association-financial-help-jinnappa-naik-kunjurpanja

ಪುತ್ತೂರು: ಕುಂಜೂರುಪಂಜ ನಿವಾಸಿ ಜಿನ್ನಪ್ಪ ನಾಯ್ಕ ಅವರು ಪಾರ್ಶ್ವವಾಯು ಖಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಸಹಾಯದ ಕೈ ನೀಡುವ ಉದ್ದೇಶದಿಂದ “ಅರುಣ ಸಾರಥಿ” ಚಾಲಕರ ಸಂಘಟನೆಯ ವತಿಯಿಂದ 10,000 ಧನಸಹಾಯ ಹಸ್ತಾಂತರಿಸಲಾಯಿತು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ ಜಿನ್ನಪ್ಪ ನಾಯ್ಕ ಅವರಿಗೆ ಹಸ್ತಾಂತರಿಸಲಾಯಿತು.

ಸಮಾಜದಲ್ಲಿರುವ ಅಶಕ್ತರು ಮತ್ತು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು, ಈವರೆಗೆ ಒಟ್ಟು 1,80,000 ಧನಸಹಾಯವನ್ನು ವಿವಿಧ ಅಗತ್ಯವಿರುವವರಿಗೆ ನೀಡಲಾಗಿದೆ.

Advertisement

ಇದನ್ನೂ ಓದಿ: ಎಲ್‌ಪಿಜಿ ಕೊರತೆ ತೀವ್ರ: ಕರಾವಳಿಯಲ್ಲಿ ಹೋಟೆಲ್‌ಗಳು ಬಂದ್‌, ಮದುವೆ ಮಂದಿರಗಳಿಗೆ ಸಂಕಷ್ಟ

ಕಾರ್ಯಕ್ರಮದಲ್ಲಿ ಸಂಘಟನೆಯ ಸದಸ್ಯರಾದ ಸಂದೇಶ್ ನಾಯ್ಕ ಕೆಯ್ಯೂರು, ಯೋಗೀಶ್ ಸಂಪ್ಯ, ಗಣರಾಜ್ ಭಟ್ (ಖುಷಿ) ಮುಕ್ರಂಪಾಡಿ, ಶ್ರೀಕಾಂತ್ ಆಚಾರ್ ಹಿಂದಾರ್, ಪ್ರವೀಣ್ ಭಂಡಾರಿ, ಸಚಿನ್ ವಳತ್ತಡ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು