ಕಬ್ಬಿನ ಹಾಲು ಅಥವಾ ಕಲ್ಲಂಗಡಿ ಜ್ಯೂಸ್: ಈ ಬೇಸಿಗೆಯಲ್ಲಿ ದೇಹಕ್ಕೆ ಅತಿ ಹೆಚ್ಚು ತಂಪು ನೀಡುವ ಪಾನೀಯ ಯಾವುದು?

ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಾಗುವುದು ಸಾಮಾನ್ಯ. ಈ ಸಮಯದಲ್ಲಿ ದಾಹ ತಣಿಸಲು ನಾವು ಹೆಚ್ಚಾಗಿ ಮೊರೆ ಹೋಗುವುದು ಕಬ್ಬಿನ ಹಾಲು ಅಥವಾ ಕಲ್ಲಂಗಡಿ ಜ್ಯೂಸ್‌ಗೆ. ಆದರೆ ಇವೆರಡರಲ್ಲಿ ನಿಮ್ಮ ದೇಹಕ್ಕೆ ಯಾವುದು ಹೆಚ್ಚು ಸೂಕ್ತ? ಇದರಲ್ಲಿ ನೈಸರ್ಗಿಕ ಸಕ್ಕರೆ, ಎಲೆಕ್ಟ್ರೋಲೈಟ್ಸ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. 100 ಮಿಲಿ ಕಬ್ಬಿನ ಹಾಲಿನಲ್ಲಿ ಸುಮಾರು 40-45 ಕ್ಯಾಲೋರಿ ಇರುತ್ತದೆ.

ಬಿಸಿಲಿನಲ್ಲಿ ಅಲೆದಾಡಿ ಸುಸ್ತಾದಾಗ ತಕ್ಷಣದ ಶಕ್ತಿ (Instant Energy) ನೀಡಲು ಇದು ಅತ್ಯುತ್ತಮ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಯಕೃತ್ತಿನ (Liver) ಆರೋಗ್ಯಕ್ಕೆ ಒಳ್ಳೆಯದು. ಕಠಿಣ ದೈಹಿಕ ಶ್ರಮ ಪಡುವವರಿಗೆ ಅಥವಾ ತಕ್ಷಣದ ಎನರ್ಜಿ ಬೇಕಾದವರಿಗೆ ಇದು ರಾಮಬಾಣ.

Advertisement

ಕಲ್ಲಂಗಡಿಯಲ್ಲಿ ಶೇ. 90-92 ರಷ್ಟು ನೀರಿನಂಶವಿದೆ. ಇದರಲ್ಲಿ ವಿಟಮಿನ್ ಎ, ಸಿ ಮತ್ತು ಲೈಕೋಪೀನ್ ಎಂಬ ಶಕ್ತಿಯುತ ಆಂಟಿಆಕ್ಸಿಡೆಂಟ್ ಇದೆ. ದೇಹದಲ್ಲಿ ನೀರಿನಂಶವನ್ನು ಸಮತೋಲನದಲ್ಲಿಡಲು (Hydration) ಇದು ಪ್ರಬಲವಾಗಿದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಚರ್ಮವನ್ನು ಕಾಂತಿಯುತವಾಗಿರಿಸುತ್ತದೆ. ದೇಹವನ್ನು ತಂಪಾಗಿರಿಸಲು ಮತ್ತು ಹೈಡ್ರೇಶನ್ ಬಯಸುವವರಿಗೆ ಇದು ಬೆಸ್ಟ್ ಆಯ್ಕೆ.

ಇದನ್ನೂ ಓದಿ: ಬೆಳಗ್ಗೆ ಒಟ್ಟಾರೆ ಹಲ್ಲು ಉಜ್ಜದಿರಿ, ಈ ವಿಧಾನಗಳನ್ನು ಅನುಸರಿಸಿ

ನಿಮಗೆ ತಕ್ಷಣದ ಶಕ್ತಿ ಬೇಕಿದ್ದರೆ ಮತ್ತು ಸುಸ್ತು ನಿವಾರಣೆಯಾಗಬೇಕಿದ್ದರೆ ಕಬ್ಬಿನ ಹಾಲು ಕುಡಿಯಿರಿ. ಕೇವಲ ದೇಹವನ್ನು ತಂಪಾಗಿಸಲು ಮತ್ತು ನೀರಿನಂಶ ಹೆಚ್ಚಿಸಿಕೊಳ್ಳಲು ಬಯಸಿದರೆ ಕಲ್ಲಂಗಡಿ ಜ್ಯೂಸ್ ಅತ್ಯುತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು