ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಧಾರ್ಮಿಕ ಸಾಮರಸ್ಯದ ಅಪೂರ್ವ ಘಟನೆಯೊಂದು ಮರುಕಳಿಸಿದೆ. ಅರಸರ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಪರಂಪರೆಯಂತೆ, ಮಂಜದಗೋಳಿ ಜಾತ್ರೆಯ ಅಂಗವಾಗಿ ದೈವದ ಭಂಡಾರವು ಮಸೀದಿಯ ಮೆಟ್ಟಿಲೇರಿ ಭಕ್ತರು ನೀಡಿದ ‘ಸೀಯಾಳ’ ಸ್ವೀಕರಿಸುವ ಮೂಲಕ ಭಾವೈಕ್ಯತೆ ಮೆರೆದಿದೆ.
ನಂದಾವರ ಕೇಂದ್ರ ಜುಮಾ ಮಸೀದಿಯ ಮುಂಭಾಗದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಮಂಜದಗೋಳಿ ಜಾತ್ರೆಯ ಸಂದರ್ಭದಲ್ಲಿ ಈ ವಿಶಿಷ್ಟ ಪದ್ಧತಿ ಅನುಸರಿಸಲಾಗುತ್ತದೆ.ಸಜೀಪನಡು ಮೂಲಸ್ಥಾನದಿಂದ ಹೊರಟ ದೈವದ ಭಂಡಾರವು ಮಂಜದಗೋಳಿ ಕ್ಷೇತ್ರಕ್ಕೆ ಸಾಗುವ ಹಾದಿಯಲ್ಲಿ ಮಸೀದಿಯ ನಾಲ್ಕು ಮೆಟ್ಟಿಲುಗಳನ್ನು ಹತ್ತಿ ಸೀಯಾಳ ಸ್ವೀಕರಿಸುವುದು ಅನಾದಿಕಾಲದ ಸಂಪ್ರದಾಯ.

ಇದನ್ನೂ ಓದಿ: ಎಂ.ಫಾರ್ಮ್ ಪರೀಕ್ಷೆಯಲ್ಲಿ ಪುತ್ತೂರಿನ ಸ್ವಸ್ತಿಕಾರಿಗೆ ಪ್ರಥಮ ರ್ಯಾಂಕ್
ಇಲ್ಲಿದೆ ನೋಡಿ ವಿಡಿಯೋ:
View this post on Instagram
ಮಾರ್ಚ್ 17ರಂದು ನಡೆದ ಉತ್ಸವದಲ್ಲಿ ಮಸೀದಿ ಪ್ರಮುಖರು ದೈವಕ್ಕೆ ಭಕ್ತಿಯಿಂದ ಎಳನೀರು ಸಮರ್ಪಿಸಿದರು. ಈ ದೃಶ್ಯವು ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಸಾಕ್ಷಿಯಾಯಿತು. ಈ ಆಚರಣೆಯು ಕೇವಲ ಧಾರ್ಮಿಕ ವಿಧಿ ವಿಧಾನವಲ್ಲ, ಬದಲಿಗೆ ಶತಮಾನಗಳಿಂದ ಬೆಳೆದು ಬಂದಿರುವ ಸಹಬಾಳ್ವೆಯ ಕೊಂಡಿಯಾಗಿದೆ ಎಂದು ಸ್ಥಳೀಯರು ಹೆಮ್ಮೆಯಿಂದ ಸ್ಮರಿಸುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

