ಬೆಂಗಳೂರು: ರಾಜ್ಯದಾದ್ಯಂತ ಇರುವ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು ಹಾಗೂ ಹೈಕೋರ್ಟ್‌ಗೆ ಮಾರ್ಚ್ 19ರಿಂದ ಸತತ ನಾಲ್ಕು ದಿನಗಳ ಕಾಲ ರಜೆ ಲಭ್ಯವಾಗಲಿದೆ. ಹಬ್ಬ ಹಾಗೂ ಸರಣಿ ರಜೆಗಳ ಹಿನ್ನೆಲೆಯಲ್ಲಿ ನ್ಯಾಯಾಂಗ ಅಧಿಕಾರಿಗಳು, ಸಿಬ್ಬಂದಿ ಮತ್ತು ವಕೀಲರಿಗೆ ಸುದೀರ್ಘ ವಾರಾಂತ್ಯದ ವಿಶ್ರಾಂತಿ ದೊರೆತಿದೆ. ಯುಗಾದಿ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆ ನೀಡಲಾಗಿದೆ.
ಕರ್ನಾಟಕ ಹೈಕೋರ್ಟ್ ಈ ದಿನವನ್ನು ‘ಲಿಂಕಿಂಗ್ ಹಾಲಿಡೇ’ (Linking Holiday) ಎಂದು ಘೋಷಿಸಿದೆ. ಆದರೆ, ಈ ದಿನದ ರಜೆಯನ್ನು ಸರಿದೂಗಿಸಲು ಮಾರ್ಚ್ ತಿಂಗಳ ನಾಲ್ಕನೇ ಶನಿವಾರವನ್ನು ಕೆಲಸದ ದಿನವನ್ನಾಗಿ ಪರಿಗಣಿಸಲಾಗುತ್ತದೆ. ಮಾರ್ಚ್ 21 (ಶನಿವಾರ) ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್ (ಈದ್-ಉಲ್-ಫಿತರ್) ಪ್ರಯುಕ್ತ ರಜೆ. ಮಾರ್ಚ್ 22 (ಭಾನುವಾರ) ವಾರದ ರಜೆ ನೀಡಲಾಗಿದೆ.

ಇದನ್ನೂ ಓದಿ: ಅಪರೂಪದಲ್ಲಿ ಅಪರೂಪ! 25 ವರ್ಷದ ಗರ್ಭಿಣಿ ಜನ್ಮ ನೀಡಿದ ಮಗುವಿನ ಕೆಜಿ ಎಷ್ಟು ಗೊತ್ತಾ?
ಅಲ್ಲದೆ, ಮಾರ್ಚ್ ತಿಂಗಳ ಅಂತ್ಯದಲ್ಲಿಯೂ ಅಂದರೆ ಮಾರ್ಚ್ 29ರಿಂದ 31ರ ವರೆಗೆ ಸತತ ಮೂರು ದಿನಗಳ ಕಾಲ ರಜೆ ಸಿಗಲಿದೆ. ಮಾರ್ಚ್ 30ರಂದು ಹೈಕೋರ್ಟ್ ಮತ್ತೊಂದು ಲಿಂಕಿಂಗ್ ಹಾಲಿಡೇ ಘೋಷಿಸಿರುವುದರಿಂದ ವಕೀಲರು ಹಾಗೂ ನ್ಯಾಯಾಂಗ ಸಿಬ್ಬಂದಿಗೆ ರಜೆಯ ಸುಗ್ಗಿ ಉಂಟಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

