ಇರಾನ್ ನಾಯಕ ಮೊಜ್ತಬಾ ಖಮೇನಿ ಬದುಕುಳಿದಿದ್ದಾರೆಯೇ? ವೈರಲ್ ವಿಡಿಯೋ ಬೆನ್ನಲ್ಲೇ ಶುರುವಾಯ್ತು ಜಾಗತಿಕ ಚರ್ಚೆ

ಟೆಹ್ರಾನ್: ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಯುದ್ಧದ ನಡುವೆ, ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಸ್ಥಿತಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಮತ್ತು ಆತಂಕ ಸೃಷ್ಟಿಯಾಗಿದೆ. ಇಸ್ರೇಲ್ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಊಹಾಪೋಹಗಳ ಬೆನ್ನಲ್ಲೇ, ಇರಾನ್ ಸರ್ಕಾರವು ಅವರ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೊಜ್ತಬಾ ಖಮೇನಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ, ಅವರ ಎರಡು ಕಾಲುಗಳು ಕಟ್ ಆಗಿವೆ ಮತ್ತು ಅವರು ಬದುಕುಳಿಯುವುದು ಕಷ್ಟ ಎಂದು ಅಮೆರಿಕ ಮತ್ತು ಇಸ್ರೇಲ್ ಮೂಲಗಳು ಸಂಶಯ ವ್ಯಕ್ತಪಡಿಸಿದ್ದವು.ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯಲು ಇರಾನ್‌ನ ಅಧಿಕೃತ ಪ್ರಸಾರ ಸಂಸ್ಥೆ (IRIB), ಮೊಜ್ತಬಾ ಖಮೇನಿ ಅವರು ಧಾರ್ಮಿಕ ವಿದ್ಯಾರ್ಥಿಗಳಿಗೆ ಪ್ರವಚನ ನೀಡುತ್ತಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

Advertisement

ಇದನ್ನೂ ಓದಿ: ರಷ್ಯಾದಿಂದ ಚೀನಾಕ್ಕೆ ಹೋಗುತ್ತಿದ್ದ ಕಚ್ಚ ತೈಲಾ ಹೊತ್ತ ಹಡಗು ಭಾರತಕ್ಕೆ ಯೂಟರ್ನ್

ಇಲ್ಲಿದೆ ನೋಡಿ ವಿಡಿಯೋ: 

ಆದರೆ, ಈ ವಿಡಿಯೋ ಯಾವಾಗ ಚಿತ್ರೀಕರಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಹೊಸ ಅನುಮಾನಕ್ಕೆ ಕಾರಣವಾಗಿದೆ. ಇದು ಮೊಜ್ತಬಾ ಅವರು ಸರ್ವೋಚ್ಚ ನಾಯಕರಾಗುವ ಮೊದಲೇ ಚಿತ್ರೀಕರಿಸಿದ ‘ಆರ್ಕೈವ್ಡ್’ (Archived) ವಿಡಿಯೋ ಆಗಿರಬಹುದು ಎಂದು ವಿಶ್ಲೇಷಕರು ಶಂಕಿಸಿದ್ದಾರೆ.ಈ ವಿಡಿಯೋ ಬಿಡುಗಡೆಯಿಂದ ಅವರ ನಿಖರ ತಾಣವು ಶತ್ರು ರಾಷ್ಟ್ರಗಳಿಗೆ ತಿಳಿಯಬಹುದು ಮತ್ತು ಮುಂದಿನ ದಾಳಿಗೆ ದಾರಿಯಾಗಬಹುದು ಎಂದು ಅವರ ಬೆಂಬಲಿಗರು ಕಳವಳ ವ್ಯಕ್ತಪಡಿಸಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು