ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ತಮ್ಮ ಸರಳತೆ ಮತ್ತು ನೇರ ಮಾತುಗಳಿಗೆ ಹೆಸರುವಾಸಿ. ಇತ್ತೀಚೆಗೆ ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಭರ್ಜರಿ ಬ್ಯಾಚುಲರ್ಸ್’ಗೆ ಅತಿಥಿಯಾಗಿ ಆಗಮಿಸಿದ್ದ ಅವರು, ತಮ್ಮ ಜೀವನದ ಅತ್ಯಂತ ವೈಯಕ್ತಿಕ ಮತ್ತು ನೋವಿನ ಸಂಗತಿಯಾದ ‘ಬ್ರೇಕಪ್’ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.
ಪದವಿ ಓದುತ್ತಿರುವಾಗಲೇ ರಾಜ್ ಒಂದು ಹುಡುಗಿಯನ್ನು ಗಾಢವಾಗಿ ಪ್ರೀತಿಸುತ್ತಿದ್ದರು. ಇವರಿಬ್ಬರ ಸಂಬಂಧ ಸುಮಾರು 6 ವರ್ಷಗಳ ಕಾಲ ಮುಂದುವರಿದಿತ್ತು. “ಅವಳು ನನ್ನನ್ನು ಬಿಟ್ಟು ಹೋಗದಿದ್ದರೆ ನಾನು ಇಂದಿಗೂ ಒಬ್ಬ ಕೆಟ್ಟ ಮನುಷ್ಯನಾಗಿಯೇ ಉಳಿಯುತ್ತಿದ್ದೆ. ಅವಳು ನನ್ನನ್ನು ಬಿಟ್ಟು ಹೋದ ಮೇಲೆ ನಾನು ಎಷ್ಟು ಕೆಟ್ಟವನು ಎಂಬುದು ನನಗೆ ಅರ್ಥವಾಯಿತು. ನಾನು ಯೋಗ್ಯನಲ್ಲ ಎಂಬುದನ್ನು ಅವಳು ತೋರಿಸಿ ಹೋದಳು” ಎಂದು ರಾಜ್ ಭಾವುಕರಾಗಿ ನುಡಿದ್ದಾರೆ.

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಅಬ್ಬರ: 250 ಕೋಟಿ ರೂಪಾಯಿ ಗಳಿಕೆಯತ್ತ ಚಿತ್ರ
ಬ್ರೇಕಪ್ ಆದರೂ ಆಕೆಯ ಮೇಲೆ ತನಗೆ ಯಾವುದೇ ದ್ವೇಷವಿಲ್ಲ, ಬದಲಾಗಿ ಗೌರವವಿದೆ ಎಂದು ರಾಜ್ ಹೇಳಿದ್ದಾರೆ. ಆಕೆ ಹೋದ ನಂತರವೇ ತಾನು ವ್ಯಕ್ತಿಯಾಗಿ ಮತ್ತು ವೃತ್ತಿಪರವಾಗಿ ಬೆಳೆಯಲು ಸಾಧ್ಯವಾಯಿತು ಎಂಬುದು ಅವರ ಅಭಿಪ್ರಾಯ.ಮದುವೆಯ ಬಗ್ಗೆ ಮಾತನಾಡುತ್ತಾ, ಅರೇಂಜ್ಡ್ ಮ್ಯಾರೇಜ್‌ಗಿಂತ ಲವ್ ಮ್ಯಾರೇಜ್ ಉತ್ತಮ ಎಂದು ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

