ರಕ್ಷಿತ್ ಶೆಟ್ಟಿಗೆ ದೆಹಲಿ ಹೈಕೋರ್ಟ್ ಶಾಕ್: ‘ಬ್ಯಾಚುಲರ್ ಪಾರ್ಟಿ’ ಕಾಪಿರೈಟ್ ಕೇಸ್‌ನಲ್ಲಿ 25 ಲಕ್ಷ ರೂ. ದಂಡ!

ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ಮತ್ತು ಅವರ ನಿರ್ಮಾಣ ಸಂಸ್ಥೆ ಪರಮ್ವಃ ಸ್ಟುಡಿಯೋಸ್‌ಗೆ ದೆಹಲಿ ಹೈಕೋರ್ಟ್ ಭಾರೀ ಮೊತ್ತದ ದಂಡ ವಿಧಿಸಿದೆ. ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಹಳೆಯ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಿದ್ದಕ್ಕಾಗಿ 25 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಿದೆ.

‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಎಂ.ಆರ್.ಸಿ (MRC) ಕಂಪನಿಗೆ ಸೇರಿದ ಕೆಲವು ಹಳೆಯ ಸಿನಿಮಾಗಳ ಹಾಡುಗಳ ತುಣುಕುಗಳನ್ನು ಬಳಸಲಾಗಿತ್ತು. ಆದರೆ, ಈ ಹಾಡುಗಳ ಬಳಕೆಗಾಗಿ ಅಧಿಕೃತವಾಗಿ ಕಾಪಿರೈಟ್ ಅನುಮತಿಯನ್ನು ಪಡೆದಿರಲಿಲ್ಲ ಎಂದು ಎಂ.ಆರ್.ಸಿ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿತ್ತು.

Advertisement

ಇದನ್ನೂ ಓದಿ: ನಿರ್ಮಾಪಕರ ಜೊತೆ ಮಲಗಲು ಡಿಮ್ಯಾಂಡ್: ಚಿತ್ರರಂಗದ ಕಾಸ್ಟಿಂಗ್ ಕೌಚ್ ಜಾಲ ಬಿಚ್ಚಿಟ್ಟ ‘ವಡಾ ಪಾವ್ ಗರ್ಲ್’ ಚಂದ್ರಿಕಾ ದೀಕ್ಷಿತ್!

ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಕಾಪಿರೈಟ್ ನಿಯಮಗಳ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಪರಮ್ವಃ ಸ್ಟುಡಿಯೋಸ್‌ಗೆ 20 ಲಕ್ಷ ರೂಪಾಯಿ ದಂಡ ಮತ್ತು ಎಂ.ಆರ್.ಸಿ ಸಂಸ್ಥೆಗೆ ಕಾನೂನು ಹೋರಾಟದ ವೆಚ್ಚವಾಗಿ 5 ಲಕ್ಷ ರೂಪಾಯಿ ಸೇರಿದಂತೆ ಒಟ್ಟು 25 ಲಕ್ಷ ರೂಪಾಯಿಗಳನ್ನು ಪಾವತಿಸಲು ಸೂಚಿಸಿದೆ. ಅಲ್ಲದೆ, ಅನುಮತಿ ಇಲ್ಲದ ಹಾಡುಗಳನ್ನು ಸಿನಿಮಾದಿಂದ ತೆಗೆದುಹಾಕಲು ಅಥವಾ ಪರವಾನಗಿ ಪಡೆಯಲು ಆದೇಶಿಸಿದೆ.

Advertisement

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Advertisement

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು