ಐಟಿ ವಲಯದಲ್ಲಿ ನಡುಕ: ಒರಾಕಲ್‌ನಿಂದ ಭಾರತದಲ್ಲಿ 12,000 ಸೇರಿದಂತೆ ಜಗತ್ತಿನಾದ್ಯಂತ 30,000 ಉದ್ಯೋಗಿಗಳ ವಜಾ?

ಬೆಂಗಳೂರು: ಜಾಗತಿಕ ಸಾಫ್ಟ್‌ವೇರ್ ದೈತ್ಯ ಒರಾಕಲ್ (Oracle) ಕಂಪನಿಯು ತನ್ನ ಉದ್ಯೋಗಿಗಳಿಗೆ ಭಾರಿ ಶಾಕ್ ನೀಡಲು ಮುಂದಾಗಿದೆ ಎಂಬ ವರದಿಗಳು ಹೊರಬಿದ್ದಿವೆ. ಭಾರತದಲ್ಲಿ ಸುಮಾರು 12,000 ಉದ್ಯೋಗಿಗಳು ಮತ್ತು ಜಾಗತಿಕವಾಗಿ ಒಟ್ಟು 30,000 ಸಿಬ್ಬಂದಿಯನ್ನು ವಜಾಗೊಳಿಸಲು ಕಂಪನಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಒರಾಕಲ್ ಭಾರತದಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆ ಹೊಂದಿದ್ದು, ಇಲ್ಲಿನ ಸುಮಾರು 12,000 ಮಂದಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ವಿಶ್ವದಾದ್ಯಂತ ಒಟ್ಟು 30,000 ಉದ್ಯೋಗಿಗಳನ್ನು ಲೇ-ಆಫ್ (Layoff) ಮಾಡಲು ಕಂಪನಿ ಯೋಜಿಸಿದೆ ಎನ್ನಲಾಗಿದೆ.

Advertisement

ಇದನ್ನೂ ಓದಿ: ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಬೃಹತ್ ನೇಮಕಾತಿ: 3806 ಹುದ್ದೆಗಳಿಗೆ ಅರ್ಜಿ ಆಹ್ವಾನ; ದೇಶಸೇವೆಯ ಸುವರ್ಣಾವಕಾಶ!

ಈ ಬೃಹತ್ ಉದ್ಯೋಗ ಕಡಿತದ ಬಗ್ಗೆ ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದ್ದರೂ, ಒರಾಕಲ್ ಕಂಪನಿಯಿಂದ ಈವರೆಗೆ ಯಾವುದೇ ಅಧಿಕೃತ ದೃಢೀಕರಣ ಹೊರಬಿದ್ದಿಲ್ಲ. ವೆಚ್ಚ ಕಡಿತ ಅಥವಾ ಕಂಪನಿಯ ಆಂತರಿಕ ಪುನರ್ರಚನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದು ನಿಜವಾದಲ್ಲಿ, ಇತ್ತೀಚಿನ ವರ್ಷಗಳಲ್ಲಿ ಐಟಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅತಿದೊಡ್ಡ ಲೇ-ಆಫ್‌ಗಳಲ್ಲಿ ಒಂದಾಗಲಿದೆ.

Advertisement

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Advertisement

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು