ಭಾರತದ ಕ್ರಿಕೆಟ್ ಇತಿಹಾಸದ ಅತ್ಯಂತ ಪ್ರಭಾವಿ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಯುವರಾಜ್ ಸಿಂಗ್, ತಮ್ಮ ಅಂತಿಮ ದಿನಗಳ ಕುರಿತು ಮಹತ್ವದ ಬಹಿರಂಗ ಹೇಳಿಕೆ ನೀಡಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ. ನಿವೃತ್ತಿಯಾದ ಬಳಿಕವೂ ತಂಡದ ನಿರ್ವಹಣೆಯಿಂದ ತಮಗೆ “ಸ್ಪಷ್ಟತೆ ಇರಲಿಲ್ಲ” ಎಂಬ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ.
SportsTak ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಯುವರಾಜ್, ತಮ್ಮ ಅಂತಿಮ ಹಂತದಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA), ನಾಯಕತ್ವ ಹಾಗೂ ಕೋಚಿಂಗ್ ಸಿಬ್ಬಂದಿಯಿಂದ ಯಾವುದೇ ಸ್ಪಷ್ಟ ಮಾಹಿತಿ ದೊರಕಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ನಾನು 36-37ರ ವಯಸ್ಸಿನಲ್ಲಿ ಏನು ಮಾಡಬೇಕು ಎಂದು ಅರ್ಥವಾಗದೆ ಇದ್ದೆ. ಕ್ಯಾಪ್ಟನ್, ಕೋಚ್ ಯಾರಿಂದಲೂ ಸ್ಪಷ್ಟತೆ ಇರಲಿಲ್ಲ. ಇಷ್ಟು ವರ್ಷ ದೇಶಕ್ಕಾಗಿ ಆಡಿದವರಿಗೆ ಕನಿಷ್ಠ ಗೌರವ ಕೊಡಬೇಕು,” ಎಂದು ಯುವರಾಜ್ ಹೇಳಿದ್ದಾರೆ.
ನಾಯಕತ್ವದ ಮೇಲೆ ಪ್ರಶ್ನೆ
ಯುವರಾಜ್ ಮಾತುಗಳಲ್ಲಿ ಅಂದಿನ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಕಾಲದ ನಿರ್ವಹಣೆಯ ಬಗ್ಗೆ ಪರೋಕ್ಷ ಟೀಕೆ ವ್ಯಕ್ತವಾಗಿದೆ. ಹಿರಿಯ ಆಟಗಾರರೊಂದಿಗೆ ಸರಿಯಾದ ಸಂವಹನದ ಕೊರತೆ ಇದ್ದಿತೇ ಎಂಬ ಪ್ರಶ್ನೆ ಮತ್ತೆ ಎದ್ದಿದೆ.

ಇದನ್ನೂ ಓದಿ: ಹಳೆಯ ಸಂಬಂಧ ನೆನಪಿಸಿಕೊಂಡು ಬಿಸಿಸಿಐಗೆ ಪತ್ರ ಬರೆದ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್
ಇತರ ದಿಗ್ಗಜರಿಗೂ ಇದೇ ಅನುಭವ
ಯುವರಾಜ್ ಮಾತ್ರವಲ್ಲದೆ, ವಿರೇಂದ್ರ ಸೆಹ್ವಾಗ್, ಜಹೀರ್ ಖಾನ್ ಹಾಗೂ ಹರ್ಭಜನ್ ಸಿಂಗ್ ಮುಂತಾದ ದಿಗ್ಗಜ ಆಟಗಾರರು ಕೂಡ ಇದೇ ರೀತಿಯ “ಸೈಲೆಂಟ್ ಎಕ್ಸಿಟ್” ಅನುಭವಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಧೋನಿ ನೀಡಿದ ಸ್ಪಷ್ಟತೆ
ಈ ಗೊಂದಲದ ನಡುವೆ ಮಹೇಂದ್ರ ಸಿಂಗ್ ಧೋನಿ ನೀಡಿದ ಫೋನ್ ಕಾಲ್ ಯುವರಾಜ್‌ಗೆ ನಿರ್ಧಾರ ಕೈಗೊಳ್ಳಲು ಸಹಾಯ ಮಾಡಿತು. “ಧೋನಿ ನನಗೆ ಸರಿಯಾದ ದೃಷ್ಟಿಕೋನ ನೀಡಿದರು. ಅವರು ಕ್ಯಾಪ್ಟನ್ ಆಗಿರಲಿಲ್ಲ, ಆದರೂ ನಿಜ ಹೇಳಲು ಹಿಂದೇಟು ಹಾಕಲಿಲ್ಲ,” ಎಂದು ಯುವರಾಜ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ನಾಳೆ ಆರ್‌ಸಿಬಿ-ಸಿಎಸ್‌ಕೆ ಫೈಟ್: ಅಭಿಮಾನಿಗಳಿಗೆ ಪೊಲೀಸ್ ಕಮಿಷನರ್ ಕಟ್ಟುನಿಟ್ಟಿನ ಎಚ್ಚರಿಕೆ
ಫಿಟ್ನೆಸ್ ಟೆಸ್ಟ್ ವಿವಾದ
ಫಿಟ್ನೆಸ್ ಟೆಸ್ಟ್ ಪಾಸ್ ಆಗದಿದ್ದರೆ ನಿವೃತ್ತಿ ತೆಗೆದುಕೊಳ್ಳಿ ಎಂಬ ಒತ್ತಡವಿತ್ತು ಎಂಬುದನ್ನು ಯುವರಾಜ್ ಬಹಿರಂಗಪಡಿಸಿದರು. ಆದರೆ ಅವರು ಅದನ್ನು ತಿರಸ್ಕರಿಸಿ, “ನನ್ನ ನಿವೃತ್ತಿಯನ್ನು ನಾನು ತೀರ್ಮಾನಿಸುತ್ತೇನೆ” ಎಂದು ಹೇಳಿ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ್ದಾರೆ.
ಇಂದಿನ ನಾಯಕತ್ವಕ್ಕೆ ಯುವರಾಜ್ ಸ್ಪಷ್ಟ ಸಂದೇಶ ನೀಡಿದ್ದಾರೆ. “ಕ್ಯಾಪ್ಟನ್, ಕೋಚ್ ಅಥವಾ ಸೆಲೆಕ್ಟರ್ ಯಾರೇ ಆಗಿರಲಿ, ಆಟಗಾರರೊಂದಿಗೆ ಕುಳಿತು ನೇರವಾಗಿ ಮಾತನಾಡಬೇಕು. ಅದು ಕಠಿಣವಾದರೂ, ಅಗತ್ಯವಾದದ್ದು” ಎಂದಿದ್ದಾರೆ.
ಯುವರಾಜ್ ಸಿಂಗ್ ಅವರ ಈ ಹೇಳಿಕೆಗಳು ಭಾರತೀಯ ಕ್ರಿಕೆಟ್ ವ್ಯವಸ್ಥೆಯಲ್ಲಿ ಹಿರಿಯ ಆಟಗಾರರ ನಿರ್ವಹಣೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿವೆ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

