ಚಾಣಕ್ಯರ ಪ್ರಕಾರ, ಸ್ವಾರ್ಥಿಗಳಿಗೆ ಭಾವನೆಗಳಿಗಿಂತ ‘ಅಗತ್ಯ’ವೇ ಮುಖ್ಯ. ಇವರು ತಮ್ಮ ಕೆಲಸ ಆಗುವವರೆಗೆ ಮಾತ್ರ ನಿಮ್ಮೊಂದಿಗೆ ಆತ್ಮೀಯವಾಗಿರುತ್ತಾರೆ. ಕೆಲಸ ಮುಗಿದ ತಕ್ಷಣ ನಿಮ್ಮನ್ನು ಗುರುತಿಸುವುದೂ ಇಲ್ಲ. ಇಂತಹವರು ಕೇವಲ ಅವಕಾಶಕ್ಕಾಗಿ ನಿಮ್ಮ ಸ್ನೇಹ ಬಳಸಿಕೊಳ್ಳುತ್ತಾರೆ ಎಂಬುದು ನೆನಪಿರಲಿ.ಎಂತಹ ಉತ್ತಮ ಸಂದರ್ಭದಲ್ಲೂ ಕೊರತೆಗಳನ್ನೇ ಹುಡುಕುವ ಮತ್ತು ಸದಾ ದೂರು ನೀಡುವ ವ್ಯಕ್ತಿಗಳಿಂದ ದೂರವಿರಿ. ಇವರ ನಕಾರಾತ್ಮಕ ಶಕ್ತಿಯು ನಿಮ್ಮ ಉತ್ಸಾಹವನ್ನು ಕುಗ್ಗಿಸಿ, ಕೆಲಸದ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇದು ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು.
ಯಾರು ಇತರರ ಬಗ್ಗೆ ನಿಮ್ಮ ಮುಂದೆ ಕೆಟ್ಟದಾಗಿ ಮಾತನಾಡುತ್ತಾರೋ, ಅವರು ಖಂಡಿತವಾಗಿಯೂ ನಿಮ್ಮ ಬಗ್ಗೆಯೂ ಇತರರ ಮುಂದೆ ಮಾತನಾಡುತ್ತಾರೆ. ಚಾಣಕ್ಯರ ಪ್ರಕಾರ, ನಿಮ್ಮ ವೃತ್ತಿಪರ ರಹಸ್ಯಗಳನ್ನು ಇಂತಹವರ ಮುಂದೆ ಬಿಟ್ಟುಕೊಡುವುದು ನಿಮ್ಮನ್ನೇ ಸಂಕಷ್ಟಕ್ಕೆ ಸಿಲುಕಿಸಬಹುದು.

ಇದನ್ನೂ ಓದಿ: ದಿನ ಭವಿಷ್ಯ ಏಪ್ರಿಲ್ 7: ಇಂದು ಈ ರಾಶಿಯವರಿಗೆ ಧನಲಾಭದ ಯೋಗ; ನಿಮ್ಮ ರಾಶಿಯ ಫಲ ಇಲ್ಲಿದೆ ನೋಡಿ!
ಸಮಯಕ್ಕೆ ಬೆಲೆ ನೀಡದ ಮತ್ತು ಕೆಲಸವನ್ನು ನಾಳೆಗೆ ಮುಂದೂಡುವವರ ಸ್ನೇಹ ನಿಮ್ಮ ವೃತ್ತಿಪರ ಇಮೇಜ್ (Professional Image) ಹಾಳುಮಾಡುತ್ತದೆ. ಶಿಸ್ತು ಇಲ್ಲದವರ ಸಹವಾಸದಿಂದ ನಿಮ್ಮ ಗುರಿ ತಲುಪುವುದು ವಿಳಂಬವಾಗಬಹುದು. ನಿಮ್ಮ ಯಶಸ್ಸನ್ನು ಕಂಡು ಮನಸ್ಸಿನಲ್ಲೇ ಅಸೂಯೆ ಪಡುವವರು ಹೊರನೋಟಕ್ಕೆ ಸ್ನೇಹಿತರಂತೆ ಕಂಡರೂ, ಸಮಯ ಸಿಕ್ಕಾಗ ನಿಮ್ಮ ಕಾಲೆಳೆಯಲು ಪ್ರಯತ್ನಿಸುತ್ತಾರೆ. ಇವರು ನಿಮ್ಮ ಬೆನ್ನ ಹಿಂದೆ ಸಂಚು ರೂಪಿಸುವ ಸಾಧ್ಯತೆ ಹೆಚ್ಚು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


