ವರ್ಷಗಳ ಹೋರಾಟಕ್ಕೆ ಫಲ: ಮೈಕ್ರೋ ಇನ್ಶೂರೆನ್ಸ್ ಪೀಡಿತರಿಗೆ ಪರಿಹಾರ

ಉಡುಪಿ : ಎಲ್‌ಐಸಿ ಮೈಕ್ರೋ ಇನ್ಶೂರೆನ್ಸ್ ಹಗರಣ ಪ್ರಕರಣದಲ್ಲಿ ಸಾವಿರಾರು ಪಾಲಿಸಿಧಾರಕರಿಗೆ ದೀರ್ಘಕಾಲದ ಹೋರಾಟದ ನಂತರ ಮಹತ್ವದ ಪರಿಹಾರ ದೊರೆತಿದೆ.

ಚಿಕ್ಕಮಗಳೂರು ಜಿಲ್ಲೆಯ ಸುಮಾರು 57,000ಕ್ಕೂ ಹೆಚ್ಚು ಜನರು ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ದರು. ಆದರೆ ಎಲ್‌ಐಸಿ ನೇಮಿಸಿದ ಮಧ್ಯವರ್ತಿ ಸಂಸ್ಥೆಗಳ ಮೂಲಕ ಸಂಗ್ರಹಿಸಿದ ಪ್ರೀಮಿಯಂ ಹಣವನ್ನು ಸಂಸ್ಥೆಗೆ ಜಮಾ ಮಾಡದೇ ದುರುಪಯೋಗಪಡಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ ಮಣಿಪುರದಲ್ಲಿ ಮತ್ತೆ ನೆತ್ತರು: ಬಾಂಬ್ ದಾಳಿಗೆ ಇಬ್ಬರು ಪುಟಾಣಿಗಳು ಬಲಿ, ತಾಯಿ ಸ್ಥಿತಿ ಗಂಭೀರ!

ನ್ಯಾಯಾಲಯದ ಆದೇಶದಂತೆ, ಈಗ ಎಲ್ಲಾ ಪೀಡಿತರಿಗೆ ಅವರು ಪಾವತಿಸಿದ ಪ್ರೀಮಿಯಂ ಹಣ, ನ್ಯಾಯಾಂಗ ವೆಚ್ಚ ಹಾಗೂ ಪ್ರತಿ ವ್ಯಕ್ತಿಗೆ ರೂ.3,000 ಪರಿಹಾರ ನೀಡಲಾಗಿದೆ.

ಈ ಯೋಜನೆ 2005ರಲ್ಲಿ ಗ್ರಾಮೀಣ ಬಡಜನರಿಗೆ ಅನುಕೂಲವಾಗುವಂತೆ ಆರಂಭಿಸಲಾಗಿದ್ದು, ಕಡಿಮೆ ಪ್ರೀಮಿಯಂನಲ್ಲಿ ವಿಮೆ ನೀಡಲಾಗುತ್ತಿತ್ತು. ಅಂಗನವಾಡಿ ಕಾರ್ಯಕರ್ತರ ಮೂಲಕ ಹಣ ಸಂಗ್ರಹಿಸಲಾಗುತ್ತಿತ್ತು. ಆದರೆ 2009-10ರ ಅವಧಿಯಲ್ಲಿ ಸಂಗ್ರಹಿಸಿದ ಹಣವನ್ನು ಮೂರು ಮಧ್ಯವರ್ತಿ ಸಂಸ್ಥೆಗಳು ದುರುಪಯೋಗಪಡಿಸಿಕೊಂಡು ಪರಾರಿಯಾಗಿದ್ದವು.

2013ರಲ್ಲಿ ಒಂದು ಮರಣ ವಿಮಾ ಕ್ಲೈಮ್ ತಿರಸ್ಕೃತವಾದಾಗ ಈ ಮೋಸ ಬೆಳಕಿಗೆ ಬಂತು. ನಂತರ ಸಾವಿರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಅಂಗನವಾಡಿ ಕಾರ್ಯಕರ್ತರ ಮೇಲೂ ದೋಷಾರೋಪಣೆ ನಡೆಯಿತು.

2016ರಲ್ಲಿ ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನದ ಹಸ್ತಕ್ಷೇಪದಿಂದ ಪ್ರಕರಣಕ್ಕೆ ವೇಗ ದೊರೆತು, ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಯಿತು. ಬಳಿಕ ರಾಜ್ಯ ಗ್ರಾಹಕ ಆಯೋಗದ ಮಟ್ಟದಲ್ಲಿ ಹೋರಾಟ ಮುಂದುವರಿದು, ಕೊನೆಗೆ ಎಲ್‌ಐಸಿ ಪರಿಹಾರ ನೀಡಲು ಒಪ್ಪಿಕೊಂಡಿತು.

ಈ ತೀರ್ಪು ಮೂಲಕ ದೀರ್ಘಕಾಲದಿಂದ ನ್ಯಾಯಕ್ಕಾಗಿ ಕಾಯುತ್ತಿದ್ದ ಸಾವಿರಾರು ಬಾಧಿತರಿಗೆ ನೆಮ್ಮದಿ ದೊರೆತಿದ್ದು, ತಪ್ಪಾಗಿ ಆರೋಪ ಎದುರಿಸಿದ ಅಂಗನವಾಡಿ ಕಾರ್ಯಕರ್ತರಿಗೂ ನಿರಾಳತೆ ಸಿಕ್ಕಿದೆ.

ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು