ಬೆಂಗಳೂರು : ಕಳೆದ ಕೆಲವು ದಿನಗಳಿಂದ ಸಣ್ಣ ಮಟ್ಟದ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ನಾಗಾಲೋಟ ಮುಂದುವರಿಸಿದೆ. ಮಂಗಳವಾರ ಗ್ರಾಮ್‌ಗೆ 75 ರೂಪಾಯಿಯಷ್ಟು ಇಳಿಕೆ ಕಂಡಿದ್ದ ಬೆಲೆ, ಇಂದು ಬುಧವಾರ ಗ್ರಾಮ್‌ಗೆ ಬರೊಬ್ಬರಿ 365 ರೂಪಾಯಿ ಏರಿಕೆಯಾಗಿದೆ. ಹಬ್ಬಗಳ ಸೀಸನ್ ಆರಂಭವಾಗುತ್ತಿರುವ ಈ ಸಮಯದಲ್ಲಿ ಬೆಲೆ ಏರಿಕೆ ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
ಇಂದಿನ ಮಾರುಕಟ್ಟೆ ದರಗಳು:

ಆಭರಣ ಚಿನ್ನ (22 ಕ್ಯಾರೆಟ್): ನಿನ್ನೆ 13,735 ರೂಪಾಯಿ ಇದ್ದ ಒಂದು ಗ್ರಾಮ್ ಚಿನ್ನದ ಬೆಲೆ ಇಂದು 14,100 ರೂಪಾಯಿಗೆ ತಲುಪಿದೆ.
ಅಪರಂಜಿ ಚಿನ್ನ (24 ಕ್ಯಾರೆಟ್): ಹೂಡಿಕೆದಾರರ ನೆಚ್ಚಿನ 24 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಮ್‌ಗೆ 15,328 ರೂಪಾಯಿ ಆಗಿದೆ.

ಬೆಳ್ಳಿ ಬೆಲೆ: ಬೆಳ್ಳಿ ದರವು ಗ್ರಾಮ್‌ಗೆ 10 ರೂಪಾಯಿ ಏರಿಕೆಯಾಗಿದ್ದು, ಬೆಂಗಳೂರು ಮತ್ತು ಮುಂಬೈನಲ್ಲಿ 260 ರೂಪಾಯಿ ತಲುಪಿದೆ. ಚೆನ್ನೈನಲ್ಲಿ ಇಂದು ಬೆಳ್ಳಿ ದರ ಗ್ರಾಮ್‌ಗೆ 265 ರೂಪಾಯಿ ಇದೆ.
ಇದನ್ನೂ ಓದಿ: ಆರ್‌ಬಿಐ ಹಣಕಾಸು ನೀತಿ 2026: ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ!

ಬೆಲೆ ಏರಿಕೆಗೆ ಕಾರಣವೇನು?
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತ ಮತ್ತು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೇಲೆ ಹೂಡಿಕೆದಾರರು ಆಸಕ್ತಿ ತೋರುತ್ತಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

