ದೆಹಲಿ: ಭಾರತದ ಮೂರು ಪ್ರಮುಖ ರಾಜ್ಯಗಳಾದ ಅಸ್ಸಾಂ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ನಾಳೆ (ಏಪ್ರಿಲ್ 9, 2026) ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಅಭ್ಯರ್ಥಿಗಳ ಎದಬಡಿತ ಹೆಚ್ಚಾಗಿದೆ.
ಮತದಾನದ ವಿವರಗಳು:

ದಿನಾಂಕ: ಏಪ್ರಿಲ್ 9, 2026 (ಗುರುವಾರ)
ಸಮಯ: ಬೆಳಿಗ್ಗೆ 7:00 ರಿಂದ ಸಂಜೆ 6:00 ರವರೆಗೆ.

ರಾಜ್ಯಗಳು: ಅಸ್ಸಾಂ (ಮೂರನೇ ಹಂತ), ಕೇರಳ ಮತ್ತು ಪುದುಚೇರಿ (ಏಕ ಹಂತದ ಮತದಾನ).
ಇದನ್ನೂ ಓದಿ: ಬಂಗಾರ ಪ್ರಿಯರಿಗೆ ಶಾಕ್: ಇಂದು ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ; ಬೆಳ್ಳಿ ದರವೂ ತುಟ್ಟಿ!

ಒಟ್ಟು 140 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಮತದಾನ ನಡೆಯಲಿದೆ. ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಬಿಜೆಪಿ ಕೂಡ ಈ ಬಾರಿ ಗಮನಾರ್ಹ ಪ್ರಭಾವ ಬೀರಲು ಸಜ್ಜಾಗಿದೆ.ಅಸ್ಸಾಂನಲ್ಲಿ ಇದು ಅಂತಿಮ ಹಂತದ ಮತದಾನವಾಗಿದ್ದು, ಬ್ರಹ್ಮಪುತ್ರ ಕಣಿವೆಯ ಪ್ರಮುಖ ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.30 ವಿಧಾನಸಭಾ ಕ್ಷೇತ್ರಗಳಿರುವ ಪುದುಚೇರಿಯಲ್ಲಿ ಸಣ್ಣ ಮಟ್ಟದ ಘರ್ಷಣೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ.
ಚುನಾವಣಾ ಆಯೋಗದ ಸಿದ್ಧತೆ:
ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳು ಮತ್ತು ವಯಸ್ಸಾದವರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ಡ್ರೋನ್ ಮೂಲಕ ಕಣ್ಗಾವಲು ಇಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

