ಮಧ್ಯಪ್ರದೇಶ: ಧಾರ್ಮಿಕ ಆಚರಣೆಯೊಂದರ ಭಾಗವಾಗಿ ನರ್ಮದಾ ನದಿಗೆ ಬರೋಬ್ಬರಿ 11,000 ಲೀಟರ್ ಹಾಲು ಸುರಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ನರ್ಮದಾ ನದಿಯ ದಂಡೆಯ ಮೇಲೆ ನೆರೆದಿರುವ ಭಕ್ತರು ಟ್ಯಾಂಕರ್ ಮೂಲಕ ಸಾವಿರಾರು ಲೀಟರ್ ಹಾಲನ್ನು ನದಿಗೆ ಸುರಿಯುತ್ತಿರುವುದು ಕಂಡುಬಂದಿದೆ. ಇದು ನದಿಯ ‘ಶುದ್ಧೀಕರಣ’ ಅಥವಾ ಧಾರ್ಮಿಕ ಹರಕೆಯ ಭಾಗವಾಗಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಇಲ್ಲಿದೆ ನೋಡಿ ವಿಡಿಯೋ:
Stupidity in the name of religion
Is there any sense in this?
11,000 liters of milk were poured into the Narmada River. pic.twitter.com/Hj2nULIyGc
— Bhavesh Makwana (@Bhaveshmakwana_) April 9, 2026
“ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಮೂರ್ಖತನವಿದು” ಎಂದು ಅನೇಕರು ಕಿಡಿಕಾರಿದ್ದಾರೆ. “ಒಂದೆಡೆ ಬಡ ಮಕ್ಕಳಿಗೆ ಕುಡಿಯಲು ಹಾಲಿಲ್ಲದೆ ಪರದಾಡುತ್ತಿದ್ದರೆ, ಇನ್ನೊಂದೆಡೆ ಇಷ್ಟು ದೊಡ್ಡ ಪ್ರಮಾಣದ ಹಾಲನ್ನು ನದಿಗೆ ಸುರಿದು ವ್ಯರ್ಥ ಮಾಡಲಾಗುತ್ತಿದೆ” ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಪ್ರಾಣಿ ಪ್ರೇಮಕ್ಕೆ ಸಾಕ್ಷಿಯಾದ ಅಪರೂಪದ ಘಟನೆ: ಅಜ್ಜಿಯ ಅಗಲಿಕೆಗೆ ಕಂಬನಿ ಮಿಡಿದ ಮಂಗ!
ಪರಿಸರ ತಜ್ಞರ ಪ್ರಕಾರ, ಹಾಲಿನಂತಹ ಸಾವಯವ ಪದಾರ್ಥಗಳನ್ನು ನದಿಗೆ ಸುರಿಯುವುದು ಜಲಚರಗಳಿಗೆ ಹಾನಿಕಾರಕ. ಹಾಲು ಕೊಳೆಯುವಾಗ ನೀರಿನಲ್ಲಿರುವ ಆಮ್ಲಜನಕದ ಮಟ್ಟವನ್ನು (Oxygen level) ಕಡಿಮೆ ಮಾಡುತ್ತದೆ, ಇದು ಮೀನುಗಳು ಮತ್ತು ಇತರ ಜಲಚರಗಳ ಸಾವಿಗೆ ಕಾರಣವಾಗಬಹುದು. ಅಲ್ಲದೆ, ಇದು ನದಿಯ ನೈಸರ್ಗಿಕ ಸಮತೋಲನವನ್ನು ತಪ್ಪಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



