ಬೆಳಿಗ್ಗೆ ಬೆನ್ನುನೋವು ಸಾಮಾನ್ಯವಲ್ಲ: ಗಂಭೀರ ಕಾಯಿಲೆಯ ಸೂಚನೆ!

ಬೆಳಿಗ್ಗೆ ಎದ್ದಾಗ ಕಾಣಿಸುವ ಬೆನ್ನುನೋವು ಸಾಮಾನ್ಯವೆಂದು ನಿರ್ಲಕ್ಷ್ಯ ಮಾಡಬಾರದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಇಂತಹ ಲಕ್ಷಣಗಳು ಕೆಲವೊಮ್ಮೆ ಗಂಭೀರವಾದ ಅಂಕೈಲೋಸಿಂಗ್ ಸ್ಪಾಂಡಿಲೈಟಿಸ್  ಕಾಯಿಲೆಗಳ ಸೂಚನೆ ಆಗಿರಬಹುದು ಎಂದು ವರದಿ ತಿಳಿಸಿದೆ.

ತಜ್ಞರ ಪ್ರಕಾರ, ಬೆಳಿಗ್ಗೆ ಬೆನ್ನುನೋವು 30 ರಿಂದ 60 ನಿಮಿಷಕ್ಕಿಂತ ಹೆಚ್ಚು ಕಾಲ ಮುಂದುವರಿದರೆ, ಪ್ರತಿದಿನ ಮರುಕಳಿಸಿದರೆ ಮತ್ತು ವಿಶ್ರಾಂತಿಯಿಂದ ಕಡಿಮೆಯಾಗದೆ ಚಲನೆಯಿಂದ ಮಾತ್ರ ಕಡಿಮೆಯಾದರೆ, ಇದು ಸಾಮಾನ್ಯ ಸಮಸ್ಯೆಯಲ್ಲ ಎಂದು ಪರಿಗಣಿಸಬೇಕು.

Advertisement

ಇದನ್ನೂ ಓದಿ ಯುವಕರಲ್ಲಿ ಸದ್ದಿಲ್ಲದೆ ಹೆಚ್ಚುತ್ತಿದೆ ಭಯಾನಕ ರೋಗ! : ತಜ್ಞರ ಎಚ್ಚರಿಕೆ

ಈ ಸ್ಥಿತಿ ದೀರ್ಘಕಾಲದ  ಕಾಯಿಲೆಯಾಗಿರುವ ಅಂಕೈಲೋಸಿಂಗ್ ಸ್ಪಾಂಡಿಲೈಟಿಸ್‌ಗೆ ಸಂಬಂಧಿಸಿದಿರಬಹುದು. ಇದು ಬೆನ್ನುಹುರಿ ಮತ್ತು ಸಂಧಿಗಳಲ್ಲಿ ಉರಿಯೂತ ಉಂಟುಮಾಡಿ ದೈನಂದಿನ ಚಲನೆಯನ್ನು ಕಷ್ಟಪಡಿಸುತ್ತದೆ.

Advertisement

ಇದಕ್ಕೆ ಪರಿಹಾರವಾಗಿ ಹೊಸದಾಗಿ ಗಮನ ಸೆಳೆಯುತ್ತಿರುವ ಚಿಕಿತ್ಸೆ ವಿಧಾನವೇ ಕ್ರಯೋಥೆರಪಿ. ಈ ವಿಧಾನದಲ್ಲಿ ದೇಹವನ್ನು ಕಡಿಮೆ ತಾಪಮಾನದಲ್ಲಿ ಇಡುವ ಮೂಲಕ ಉರಿಯೂತವನ್ನು ಕಡಿಮೆ ಮಾಡಿ ನೋವನ್ನು ತಗ್ಗಿಸಲು ಪ್ರಯತ್ನಿಸಲಾಗುತ್ತದೆ. ಇದು ಬೆಳಿಗ್ಗೆ ಸ್ನಾಯುಗಳ ಗಟ್ಟಿತನ ಕಡಿಮೆ ಮಾಡಲು ಸಹಾಯ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ ಬೆಳಿಗ್ಗೆ ಎದ್ದ ತಕ್ಷಣ ಇವುಗಳನ್ನು ತಿನ್ನಬೇಡಿ: ನಿಮ್ಮ ಆರೋಗ್ಯಕ್ಕೆ ಇದುವೇ ದೊಡ್ಡ ಶತ್ರು!

Advertisement

ಆದರೆ, ಕ್ರಯೋಥೆರಪಿ ಸಂಪೂರ್ಣ ಚಿಕಿತ್ಸೆ ಅಲ್ಲ. ಇದು ಕೇವಲ ಪೂರಕ ಚಿಕಿತ್ಸೆ ಆಗಿದ್ದು, ವೈದ್ಯರ ಸಲಹೆಯೊಂದಿಗೆ ಮಾತ್ರ ಪಡೆಯಬೇಕು.  ಹೃದಯ ಸಮಸ್ಯೆಗಳು ಅಥವಾ ರಕ್ತದೊತ್ತಡ ಇರುವವರು ಮೊದಲು ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಸೂಚಿಸಿದ್ದಾರೆ.

ಬೆಳಿಗ್ಗೆ ಬೆನ್ನುನೋವು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯಕ. ಹೊಸ ಕ್ರಯೋಥೆರಪಿ ವಿಧಾನ ಸಹಾಯಕವಾಗಬಹುದು, ಆದರೆ ವೈದ್ಯಕೀಯ ಸಲಹೆ ಮುಖ್ಯವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಹೆಚ್ಚಿನ ಆರೋಗ್ಯ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು