ಹೋಟೆಲ್ ರೂಮ್‌ನಲ್ಲಿ ಮಗಳು-ಬಾಯ್‌ಫ್ರೆಂಡ್: ರೆಡ್ ಹ್ಯಾಂಡ್ ಆಗಿ ಹಿಡಿದ ತಾಯಿ! ವಿಡಿಯೋ ವೈರಲ್

ದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಈಗ ಹೊಸ ವಿವಾದ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ. ತನ್ನ ಮಗಳು ತನ್ನ ಪ್ರಿಯಕರನೊಂದಿಗೆ ಹೋಟೆಲ್ ರೂಮ್‌ನಲ್ಲಿದ್ದಾಗ ಆಕೆಯ ತಾಯಿ ದಿಢೀರ್ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.ವೈರಲ್ ಆಗಿರುವ ವಿಡಿಯೋದ ಪ್ರಕಾರ, ಮಗಳು ಮತ್ತು ಆಕೆಯ ಗೆಳೆಯ ಹೋಟೆಲ್ ರೂಮ್‌ನಲ್ಲಿ ಸಮಯ ಕಳೆಯುತ್ತಿದ್ದರು. ಮಗಳ ಮೇಲೆ ಅನುಮಾನ ಬಂದ ತಾಯಿ, ನೇರವಾಗಿ ಹೋಟೆಲ್‌ಗೆ ತೆರಳಿ ರೂಮ್ ಬಾಗಿಲು ತಟ್ಟಿದ್ದಾರೆ.

ಬಾಗಿಲು ತೆರೆದ ಕೂಡಲೇ ಮಗಳನ್ನು ನೋಡಿ ತಾಯಿ ಆಕ್ರೋಶಗೊಂಡಿದ್ದು, ಅಲ್ಲಿ ನಡೆದ ಹೈಡ್ರಾಮಾ ದಾರಿಯಲ್ಲಿ ಹೋಗುವವರ ಗಮನ ಸೆಳೆದಿದೆ. ತಾಯಿ ತನ್ನ ಮಗಳ ನಡವಳಿಕೆಯನ್ನು ಖಂಡಿಸಿ ಹೋಟೆಲ್ ಆವರಣದಲ್ಲೇ ಗದ್ದಲ ನಡೆಸಿದ್ದಾರೆ.

Advertisement

ಇದನ್ನೂ ಓದಿ: ಹೈದರಾಬಾದ್‌: ಸೊಳ್ಳೆ ಪರದೆ ಒಳಗೆ ಕುಳಿತುಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್; ವಿಡಿಯೋ ವೈರಲ್

ಇಲ್ಲಿದೆ ನೋಡಿ ವಿಡಿಯೋ:

Advertisement

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ಗುಂಪುಗಳಾಗಿ ವಿಭಜನೆಯಾಗಿದ್ದಾರೆ. ಕೆಲವರು “ಮಕ್ಕಳ ಮೇಲೆ ಪೋಷಕರ ನಿಗಾ ಇರಲೇಬೇಕು, ತಾಯಿ ಮಾಡಿದ್ದು ಸರಿ” ಎನ್ನುತ್ತಿದ್ದರೆ, ಇನ್ನೂ ಕೆಲವರು “ಇದು ವ್ಯಕ್ತಿಯ ಖಾಸಗಿತನದ (Privacy) ಉಲ್ಲಂಘನೆ. ಸಾರ್ವಜನಿಕವಾಗಿ ಮಗಳನ್ನು ಈ ರೀತಿ ಅವಮಾನಿಸುವುದು ತಪ್ಪು” ಎಂದು ವಾದಿಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು