‘ಚಾಮುಂಡಿ ದೈವ’ದ ವ್ಯಂಗ್ಯ ಅನುಕರಣೆ ಪ್ರಕರಣ ಇತ್ಯರ್ಥ: ದೇವರ ಮುಂದೆ ನಿಂತು ರಣವೀರ್ ಸಿಂಗ್ ಕ್ಷಮಾಪಣೆಗೆ ಕರ್ನಾಟಕ ಹೈಕೋರ್ಟ್ ಡೆಡ್ ಲೈನ್

ಬೆಂಗಳೂರು: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ನಟ ರಣವೀರ್ ಸಿಂಗ್ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ಯರ್ಥಪಡಿಸಿದೆ.

ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ, ರಣವೀರ್ ಸಲ್ಲಿಸಿದ ಕ್ಷಮಾಪಣೆಯನ್ನು ಪರಿಗಣಿಸಿ, ನಾಲ್ಕು ವಾರಗಳೊಳಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವಂತೆ ಸೂಚಿಸಿದೆ.
ಕಳೆದ ವರ್ಷ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಚಾಮುಂಡಿ ದೈವದ ಕುರಿತು ರಣವೀರ್ ನೀಡಿದ ಹೇಳಿಕೆ ಮತ್ತು ವ್ಯಂಗ್ಯ ರೀತಿಯ ಅನುಕರಣೆ ವಿವಾದಕ್ಕೆ ಕಾರಣವಾಗಿ ಪ್ರಕರಣ ದಾಖಲಾಗಿತ್ತು. ಬಳಿಕ ಅವರು ಕ್ಷಮೆಯಾಚಿಸಿ ಪ್ರಕರಣ ರದ್ದುಪಡಿಸುವಂತೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ನಟ ಅಕ್ಷಯ್‌ ಕುಮಾರ್‌ ಮಗಳ ಅಶ್ಲೀಲ ಫೋಟೋ ಕೇಳಿದ ಆರೋಪಿ ಅರೆಸ್ಟ್

ನ್ಯಾಯಾಲಯದಿಂದ ಎಚ್ಚರಿಕೆ

ದೂರುದಾರರ ಪರ ವಕೀಲ ಪ್ರಶಾಂತ್ ಮೆಥಲ್ ವಾದ ಮಂಡಿಸಿ, ಸಾರ್ವಜನಿಕ ವ್ಯಕ್ತಿಗಳ ಹೇಳಿಕೆಗಳು ಸಮಾಜದ ಮೇಲೆ ಪರಿಣಾಮ ಬೀರುವುದರಿಂದ ಇಂತಹ ಘಟನೆ ಮರುಕಳಿಸದಂತೆ ನ್ಯಾಯಾಲಯ ಕಠಿಣ ಎಚ್ಚರಿಕೆ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗಪ್ರಸನ್ನ, ಆದೇಶದಲ್ಲೇ ಅಗತ್ಯ ಎಚ್ಚರಿಕೆಯನ್ನು ದಾಖಲಿಸುವುದಾಗಿ ತಿಳಿಸಿದರು.

ರಣವೀರ್ ಪರ ವಕೀಲರು ದೇವಸ್ಥಾನ ಭೇಟಿ ಮೂಲಕ ಗೌರವ ಸಲ್ಲಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ, ಅಫಿಡವಿಟ್ ಸ್ವೀಕರಿಸಿದ ನ್ಯಾಯಾಲಯ ಅರ್ಜಿಯನ್ನು ಇತ್ಯರ್ಥಪಡಿಸಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು