9,175 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ!

ಉದ್ಯೋಗಾಕಾಂಕ್ಷಿಗಳಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಿಹಿ ಸುದ್ದಿಯೊಂದನ್ನು ನೀಡಿದೆ. 2026ನೇ ಸಾಲಿನಲ್ಲಿ ಕಾನ್ಸ್‌ಟೇಬಲ್ (ತಾಂತ್ರಿಕ ಮತ್ತು ಟ್ರೇಡ್ಸ್‌ಮನ್) ಸೇರಿದಂತೆ ವಿವಿಧ ವಿಭಾಗಗಳ ಒಟ್ಟು 9,175 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಹುದ್ದೆಗಳ ವಿವರ:

Advertisement

ಒಟ್ಟು 9,175 ಹುದ್ದೆಗಳಲ್ಲಿ ಕಾನ್ಸ್‌ಟೇಬಲ್ ಡ್ರೈವರ್, ಮೋಟರ್ ಮೆಕ್ಯಾನಿಕ್, ಟೈಲರ್, ಕುಕ್ ಸೇರಿದಂತೆ ಹಲವು ಟ್ರೇಡ್ಸ್‌ಮನ್ ಹುದ್ದೆಗಳಿವೆ.

ದಕ್ಷಿಣ ಭಾರತ: ಆಂಧ್ರಪ್ರದೇಶಕ್ಕೆ 504 ಮತ್ತು ತೆಲಂಗಾಣಕ್ಕೆ 353 ಹುದ್ದೆಗಳನ್ನು ಮೀಸಲಿಡಲಾಗಿದೆ.

Advertisement

ಮಹಿಳಾ ಅಭ್ಯರ್ಥಿಗಳು: ದೇಶಾದ್ಯಂತ ಮಹಿಳೆಯರಿಗಾಗಿ 79 ಹುದ್ದೆಗಳು ಲಭ್ಯವಿವೆ.

ಇದನ್ನೂ ಓದಿ: UPSC CSE Results 2025: ಅನುಜ್ ಅಗ್ನಿಹೋತ್ರಿ ದೇಶಕ್ಕೆ ಮೊದಲಿಗ; 958 ಅಭ್ಯರ್ಥಿಗಳು ನಾಗರಿಕ ಸೇವೆಗೆ ಆಯ್ಕೆ!

ಅರ್ಹತೆ ಮತ್ತು ವಯೋಮಿತಿ:

ವಿದ್ಯಾರ್ಹತೆ: ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು ಅಥವಾ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ (ITI) ಮುಗಿಸಿರಬೇಕು. ಚಾಲಕ ಹುದ್ದೆಗಳಿಗೆ ಹೆವಿ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ.

ವಯೋಮಿತಿ: ಸಾಮಾನ್ಯ ಹುದ್ದೆಗಳಿಗೆ 18-23 ವರ್ಷ. ಚಾಲಕ ಹುದ್ದೆಗಳಿಗೆ 21-27 ವರ್ಷ. (ಮೀಸಲಾತಿ ಅನ್ವಯ ವಯೋಮಿತಿ ಸಡಿಲಿಕೆ ಇರುತ್ತದೆ).

ಆಯ್ಕೆಯು ಅತ್ಯಂತ ಕಟ್ಟುನಿಟ್ಟಾಗಿ ನಡೆಯಲಿದ್ದು, ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:

ದೈಹಿಕ ಪರೀಕ್ಷೆ (PET/PST): ಪುರುಷರು 170 ಸೆಂ.ಮೀ, ಮಹಿಳೆಯರು 157 ಸೆಂ.ಮೀ ಎತ್ತರವಿರಬೇಕು.

ಲಿಖಿತ ಪರೀಕ್ಷೆ (CBT): 100 ಅಂಕಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆ. (ನೆಗೆಟಿವ್ ಮಾರ್ಕಿಂಗ್ 0.25).

ಟ್ರೇಡ್ ಟೆಸ್ಟ್ ಮತ್ತು ವೈದ್ಯಕೀಯ ಪರೀಕ್ಷೆ: ಕೌಶಲ್ಯ ಪರೀಕ್ಷೆಯ ನಂತರ ದಾಖಲೆ ಪರಿಶೀಲನೆ ನಡೆಯಲಿದೆ.

ವೇತನ ಮತ್ತು ಅರ್ಜಿ ಸಲ್ಲಿಕೆ:

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಸುಮಾರು 40,000 ರೂ. ವರೆಗೆ ವೇತನ (ಭತ್ಯೆಗಳೂ ಸೇರಿ) ಸಿಗಲಿದೆ. ಆಸಕ್ತರು ಮೇ 19, 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು