ಮದುವೆಯ ಸಂದರ್ಭದಲ್ಲಿ ಮಂತ್ರಘೋಷಗಳ ನಡುವೆ ಪತಿ ಕಟ್ಟುವ ಮಾಂಗಲ್ಯಕ್ಕೆ ವಿಶೇಷ ಶಕ್ತಿಯಿದೆ ಎಂದು ನಂಬಲಾಗಿದೆ. ಹಾಗಾಗಿ, ಸಕಾರಣವಿಲ್ಲದೆ ಅದನ್ನು ಬದಲಾಯಿಸುವುದು ಅಥವಾ ಕಳಚುವುದು ಶುಭಕರವಲ್ಲ ಎಂಬುದು ಹಿಂದೂ ಶಾಸ್ತ್ರಗಳ ಅಭಿಮತ.
ಬದಲಾವಣೆಗೆ ಇರುವ ನಿಯಮಗಳೇನು?

ಕನಿಷ್ಠ ಅವಧಿ: ಮದುವೆಯಾದ ಮೇಲೆ ಸಾಮಾನ್ಯವಾಗಿ ಕನಿಷ್ಠ ಒಂದು ವರ್ಷದಿಂದ ಮೂರು ವರ್ಷಗಳವರೆಗೆ ಮೂಲ ಮಾಂಗಲ್ಯ ಮತ್ತು ದಾರವನ್ನು ಬದಲಾಯಿಸಬಾರದು ಎಂದು ಹಿರಿಯರು ಸಲಹೆ ನೀಡುತ್ತಾರೆ.
ಶುಭ ಮುಹೂರ್ತ: ಒಂದು ವೇಳೆ ಮಾಂಗಲ್ಯದ ದಾರ ಸವೆದಿದ್ದರೆ ಅಥವಾ ಸರಕ್ಕೆ ಬದಲಾಯಿಸುವ ಅನಿವಾರ್ಯತೆ ಇದ್ದರೆ, ಶುಕ್ರವಾರ ಅಥವಾ ಪೂರ್ಣಿಮೆಯಂತಹ ಶುಭ ದಿನದಂದೇ ಬದಲಾಯಿಸಬೇಕು.

ಪೂಜಾ ವಿಧಾನ: ಹೊಸ ಸರ ಅಥವಾ ಮಾಂಗಲ್ಯವನ್ನು ಧರಿಸುವ ಮುನ್ನ ಅದನ್ನು ದೇವಸ್ಥಾನದಲ್ಲಿ ಅಥವಾ ಮನೆಯ ದೇವರ ಕೋಣೆಯಲ್ಲಿಟ್ಟು ಪೂಜಿಸಿ, ಹಿರಿಯರ ಸಮ್ಮುಖದಲ್ಲಿ ಧರಿಸುವುದು ಶ್ರೇಯಸ್ಕರ.
ಇದನ್ನೂ ಓದಿ: ರಾತ್ರಿಯ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚು: ದೇಶದ ಹಲವು ಭಾಗಗಳಲ್ಲಿ ಉಷ್ಣತೆ ಏರಿಕೆ
ಅನಿವಾರ್ಯತೆ: ಕೇವಲ ಫ್ಯಾಷನ್ ಅಥವಾ ಸೌಂದರ್ಯಕ್ಕಾಗಿ ಪದೇ ಪದೇ ಮಾಂಗಲ್ಯ ಬದಲಿಸುವುದು ದಾಂಪತ್ಯದ ದೃಷ್ಟಿಯಿಂದ ಮಂಗಳಕರವಲ್ಲ ಎಂದು ಹೇಳಲಾಗುತ್ತದೆ.
ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

