ಶಿರಸಿ (ಉತ್ತರ ಕನ್ನಡ): ಯೋಗದ ಕಠಿಣ ಭಂಗಿಗಳಲ್ಲಿ ಒಂದಾದ ಶೀರ್ಷಾಸನದಲ್ಲಿ ನಿಂತು, ಭಕ್ತಿಯ ಪರಮೋಚ್ಚ ಸ್ತೋತ್ರವಾದ ‘ಶಿವ ತಾಂಡವ ಸ್ತೋತ್ರ’ವನ್ನು ಪಠಿಸುವ ಮೂಲಕ ಶಿರಸಿಯ 8 ವರ್ಷದ ಬಾಲಕ ಓಂ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾನೆ. ಈತನ ಈ ವಿಶಿಷ್ಟ ಸಾಹಸಕ್ಕೆ ಈಗ ‘ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ (International Book of Records) ಸಂಸ್ಥೆಯು ವಿಶ್ವ ದಾಖಲೆಯ ಮಾನ್ಯತೆ ನೀಡಿದೆ.
ಕೇವಲ 8 ವರ್ಷದ ಈ ಬಾಲಕ ಶೀರ್ಷಾಸನ ಭಂಗಿಯಲ್ಲಿ (ತಲೆ ಕೆಳಗಾಗಿ ನಿಂತು) ಸ್ತೋತ್ರ ಪಠಿಸಿದ್ದಾನೆ. ಅತ್ಯಂತ ಕಠಿಣವಾದ ಶಿವ ತಾಂಡವ ಸ್ತೋತ್ರವನ್ನು ಕೇವಲ 3 ನಿಮಿಷ 47 ಸೆಕೆಂಡುಗಳಲ್ಲಿ ಪಠಿಸಿ ಮುಗಿಸಿದ್ದಾನೆ.

ಇದನ್ನೂ ಓದಿ: Viral: ಮುಂಬೈಯಲ್ಲಿ ಪಾನಿಪೂರಿ ಸವಿದ ಯುಎಸ್‌ಎ ಕ್ರಿಕೆಟ್ ಆಟಗಾರರು
ಬಾಲಕನ ಏಕಾಗ್ರತೆ ಮತ್ತು ದೈಹಿಕ ಸಾಮರ್ಥ್ಯವನ್ನು ಗುರುತಿಸಿದ ಅಂತರಾಷ್ಟ್ರೀಯ ಸಂಸ್ಥೆಯು ವಿಶ್ವ ದಾಖಲೆ ಪ್ರಶಸ್ತಿ ನೀಡಿ ಗೌರವಿಸಿದೆ.ಶಿರಸಿಯ ಪುಟ್ಟ ಬಾಲಕನ ಈ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

