ಅಂಬಿಕಾ ಕಾಲೇಜು: ಸನಾತನ ವಿಚಾರಧಾರೆಗಳನ್ನು ಎಳೆಯರಿಗೆ ತಿಳಿಸಿಕೊಡುವುದು ಅಗತ್ಯ: ಬಾಲಕೃಷ್ಣ ಬೋರ್ಕರ್

puttur ambika school shankara vijaya event sringeri mutt
ಪುತ್ತೂರು: ಸನಾತನ ಹಿಂದೂ ಧರ್ಮದ ಮೇಲೆ ಇತಿಹಾಸದಲ್ಲಿ ರಾಜಕೀಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ದಾಳಿಗಳು ನಡೆದಿರುವುದು ಸತ್ಯ. ಅದರ ಪರಿಣಾಮಗಳನ್ನು ಹಿಂದೂ ಸಮಾಜ ಇಂದಿಗೂ ಅನುಭವಿಸುತ್ತಿದೆ. ನಮ್ಮ ಮೂಲಗಳನ್ನು ಮರೆತು ಬದುಕುವ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ, ಸನಾತನ ವಿಚಾರಧಾರೆಗಳನ್ನು ಎಳೆಯರಿಗೆ ಪರಿಚಯಿಸುವುದು ಅಗತ್ಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್ ಹೇಳಿದರು.

ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್‌ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಆವರಣದಲ್ಲಿ, ಶೃಂಗೇರಿ ಶ್ರೀ ಶಾರದಾಪೀಠದ ವತಿಯಿಂದ ಶ್ರೀ ಶಂಕರ ಭಗವತ್ಪಾದರ ಜನ್ಮಜಯಂತಿ ಅಂಗವಾಗಿ ಆಯೋಜಿಸಲಾದ ‘ಶಂಕರ ವಿಜಯ’ ಸ್ಪರ್ಧೆಗಳನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟಿಷರ ಆಡಳಿತ ಕಾಲದಲ್ಲಿಯೇ ನಮ್ಮ ವಿಚಾರಧಾರೆಗಳನ್ನು ಅರಿಯಲು ಸಂಸ್ಕೃತ ಭಾಷೆ ಪ್ರಮುಖ ಮಾಧ್ಯಮವಾಗಿತ್ತು. ಆದರೆ ಸ್ವಾತಂತ್ರ್ಯಾನಂತರ ಸಂಸ್ಕೃತದ ಆದ್ಯತೆ ಕುಸಿದ ಪರಿಣಾಮ, ಸನಾತನ ಮೌಲ್ಯಗಳ ಅರಿವು ಕಡಿಮೆಯಾಗುತ್ತಿದೆ. ಭಾರತೀಯರು ತಮ್ಮದೇ ಸಂಸ್ಕೃತಿಯ ಬಗ್ಗೆ ಆಸಕ್ತಿ ತೋರದಿದ್ದರೆ, ಸಮಾಜದ ಸಮಗ್ರ ಬೆಳವಣಿಗೆ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಅವರು ಎತ್ತಿದರು.

Advertisement

ಇದನ್ನೂ ಓದಿ: ಅಂಬಿಕಾ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ: ಸರ್ಕಾರಿ ಶಾಲೆಗಳ ಒಟ್ಟು 10 ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣ ಘೋಷಣೆ

ಕಾರ್ಯಕ್ರಮದಲ್ಲಿ ಪ್ರಸ್ತಾವನೆಗೈದ ಶೃಂಗೇರಿ ಮಠದ ಶಾಂಕರ ತತ್ವ ಪ್ರಸಾರ ಅಭಿಯಾನದ ರಾಜ್ಯ ಸಂಚಾಲಕ ವಿದ್ವಾನ್ ತೇಜಶಂಕರ ಸೋಮಯಾಜಿ ಮಾತನಾಡಿ, ಆದಿ ಶಂಕರಾಚಾರ್ಯರ ತತ್ವಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಅವಶ್ಯಕ. ಈ ಉದ್ದೇಶದಿಂದ ವಿವಿಧ ಸ್ಪರ್ಧೆಗಳು ಆಯೋಜಿಸಲಾಗಿದೆ ಎಂದು ತಿಳಿಸಿದರು.

Advertisement

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ. ಉಪಸ್ಥಿತರಿದ್ದರು. ಉಪನ್ಯಾಸಕಿ ಕುಸುಮಾ ಸ್ವಾಗತಿಸಿ, ಶಿಕ್ಷಕಿ ಗೌರಿ ವಂದಿಸಿದರು. ಕಾರ್ಯಕ್ರಮವನ್ನು ಶಿಕ್ಷಕರು ನಿರ್ವಹಿಸಿದರು.

ವಿವಿಧ ತಾಲೂಕುಗಳಿಂದ ಸ್ಪರ್ಧಿಗಳು ಭಾಗಿ

ಸಭೆಯ ಬಳಿಕ ವಿವಿಧ ಸ್ಪರ್ಧೆಗಳು ನಡೆಯಿತು. ಪುತ್ತೂರು, ಬಂಟ್ವಾಳ, ಸುಳ್ಯ, ಕಡಬ, ಮಂಜೇಶ್ವರ ಹಾಗೂ ಕಾಸರಗೋಡು ತಾಲೂಕುಗಳ ಸ್ಪರ್ಧಾರ್ಥಿಗಳು ಭಾಗವಹಿಸಿದರು. ಎಳೆಯ ಮಕ್ಕಳಿಗೆ ಸ್ತೋತ್ರ ಕಂಠಪಾಠ, ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ಭಾಷಣ ಸ್ಪರ್ಧೆ, ಹಾಗೂ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆಗಳು ನಡೆಯಿತು.

ಸುಮಾರು ರೂ. 2.5 ಲಕ್ಷ ಮೌಲ್ಯದ ಬಹುಮಾನಗಳು, ಲ್ಯಾಪ್‌ಟಾಪ್ ಹಾಗೂ ಟ್ಯಾಬ್‌ಗಳನ್ನು ಒಳಗೊಂಡಿವೆ. ವಿಜೇತರಿಗೆ ಮೇ 7ರಂದು ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ನಡೆಯುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಗಳು ಬಹುಮಾನ ವಿತರಿಸಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು