ಶೃಂಗೇರಿ ಅಖಾಡದಲ್ಲಿ ಬಿಜೆಪಿಗೆ ಭರ್ಜರಿ ಜಯ: 52 ಮತಗಳ ಅಂತರದಿಂದ ಡಿ.ಎನ್. ಜೀವರಾಜ್ ವಿಜೇತ!

ಚಿಕ್ಕಮಗಳೂರು: ಹೈಕೋರ್ಟ್ ಆದೇಶದ ಮೇರೆಗೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಐತಿಹಾಸಿಕ ಜಯ ಸಾಧಿಸಿದ್ದಾರೆ. ಕೇವಲ 52 ಮತಗಳ ಅಂತರದಿಂದ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರನ್ನು ಸೋಲಿಸುವ ಮೂಲಕ, ಕ್ಷೇತ್ರವನ್ನು ಮತ್ತೆ ಬಿಜೆಪಿ ತೆಕ್ಕೆಗೆ ತಂದಿದ್ದಾರೆ.

2023ರ ಚುನಾವಣಾ ಫಲಿತಾಂಶದ ನಂತರ ಸುದೀರ್ಘ ಕಾನೂನು ಹೋರಾಟ ನಡೆಸಿದ್ದ ಜೀವರಾಜ್ ಅವರಿಗೆ ಈಗ ನ್ಯಾಯ ಸಿಕ್ಕಂತಾಗಿದೆ. ಅಂಚೆ ಮತಗಳ ಮರು ಪರಿಶೀಲನೆಯಲ್ಲಿ ಜೀವರಾಜ್ ಅವರು ಮುನ್ನಡೆ ಸಾಧಿಸಿದ್ದಾರೆ. ವಿಜಯದ ಅಧಿಕೃತ ಘೋಷಣೆಯ ಬೆನ್ನಲ್ಲೇ ಚುನಾವಣಾಧಿಕಾರಿಗಳು ಡಿ.ಎನ್. ಜೀವರಾಜ್ ಅವರಿಗೆ ಶಾಸಕ ಸ್ಥಾನದ ಪ್ರಮಾಣಪತ್ರವನ್ನು ಹಸ್ತಾಂತರಿಸಿದ್ದಾರೆ.

Advertisement

ಇದನ್ನೂ ಓದಿ: ಮಿನಿ ಸಮರಕ್ಕೆ ಇಂದು ಮಹಾ ಕ್ಲೈಮ್ಯಾಕ್ಸ್: ಕರ್ನಾಟಕದ ಎರಡು ಕ್ಷೇತ್ರ ಸೇರಿ ಪಂಚರಾಜ್ಯಗಳ ರಿಸಲ್ಟ್ ಔಟ್; ದೇಶದ ಚಿತ್ತ ಇಂದಿನ ಫಲಿತಾಂಶದತ್ತ!

ಹಾಲಿ ಶಾಸಕ ಟಿ.ಡಿ. ರಾಜೇಗೌಡ ಅವರ ಶಾಸಕ ಸ್ಥಾನ ಈಗ ಕೈತಪ್ಪಿದ್ದು, ಮರು ಎಣಿಕೆಯಲ್ಲಿನ ತಾಂತ್ರಿಕ ಬದಲಾವಣೆಗಳು ಫಲಿತಾಂಶವನ್ನು ಅದಲುಬದಲು ಮಾಡಿವೆ.

Advertisement

ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು