ಚಿಕ್ಕಮಗಳೂರು: ಹೈಕೋರ್ಟ್ ಆದೇಶದ ಮೇರೆಗೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಐತಿಹಾಸಿಕ ಜಯ ಸಾಧಿಸಿದ್ದಾರೆ. ಕೇವಲ 52 ಮತಗಳ ಅಂತರದಿಂದ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರನ್ನು ಸೋಲಿಸುವ ಮೂಲಕ, ಕ್ಷೇತ್ರವನ್ನು ಮತ್ತೆ ಬಿಜೆಪಿ ತೆಕ್ಕೆಗೆ ತಂದಿದ್ದಾರೆ.
2023ರ ಚುನಾವಣಾ ಫಲಿತಾಂಶದ ನಂತರ ಸುದೀರ್ಘ ಕಾನೂನು ಹೋರಾಟ ನಡೆಸಿದ್ದ ಜೀವರಾಜ್ ಅವರಿಗೆ ಈಗ ನ್ಯಾಯ ಸಿಕ್ಕಂತಾಗಿದೆ. ಅಂಚೆ ಮತಗಳ ಮರು ಪರಿಶೀಲನೆಯಲ್ಲಿ ಜೀವರಾಜ್ ಅವರು ಮುನ್ನಡೆ ಸಾಧಿಸಿದ್ದಾರೆ. ವಿಜಯದ ಅಧಿಕೃತ ಘೋಷಣೆಯ ಬೆನ್ನಲ್ಲೇ ಚುನಾವಣಾಧಿಕಾರಿಗಳು ಡಿ.ಎನ್. ಜೀವರಾಜ್ ಅವರಿಗೆ ಶಾಸಕ ಸ್ಥಾನದ ಪ್ರಮಾಣಪತ್ರವನ್ನು ಹಸ್ತಾಂತರಿಸಿದ್ದಾರೆ.

ಹಾಲಿ ಶಾಸಕ ಟಿ.ಡಿ. ರಾಜೇಗೌಡ ಅವರ ಶಾಸಕ ಸ್ಥಾನ ಈಗ ಕೈತಪ್ಪಿದ್ದು, ಮರು ಎಣಿಕೆಯಲ್ಲಿನ ತಾಂತ್ರಿಕ ಬದಲಾವಣೆಗಳು ಫಲಿತಾಂಶವನ್ನು ಅದಲುಬದಲು ಮಾಡಿವೆ.

ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

