ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್ ನೇತೃತ್ವದ ಎನ್ಡಿಎ ಮೈತ್ರಿಕೂಟವು ಮತ್ತೊಂದು ಅವಧಿಗೆ ಅಧಿಕಾರ ಪಡೆಯುವತ್ತ ದಾಪುಗಾಲು ಹಾಕಿದೆ. ಈ ಐತಿಹಾಸಿಕ ಗೆಲುವಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪುದುಚೇರಿಯ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.
ಎಕ್ಸ್ (X) ಪೋಸ್ಟ್ ಮೂಲಕ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ಈ ಜನಾದೇಶವು ಸಿಎಂ ಎನ್. ರಂಗಸಾಮಿ ಅವರ ಸರ್ಕಾರದ ಅತ್ಯುತ್ತಮ ಆಡಳಿತ ಸಾಧನೆಗಳಿಗೆ ಸಿಕ್ಕ ಜಯವಾಗಿದೆ” ಎಂದು ಶ್ಲಾಘಿಸಿದ್ದಾರೆ. ಈ ಗೆಲುವು ಉತ್ತಮ ಆಡಳಿತವನ್ನು ಬಲಪಡಿಸಲು ಹೊಸ ಪ್ರಚೋದನೆ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಎಂ ಎನ್. ರಂಗಸಾಮಿ ಅವರು ತಮ್ಮ ತಟ್ಟಂಚವಾಡಿ ಕ್ಷೇತ್ರದಿಂದ ಭರ್ಜರಿ ಜಯ ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ದೃಢಪಡಿಸಿದೆ. ಒಟ್ಟು 30 ಸ್ಥಾನಗಳ ಪೈಕಿ ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್ ನೇತೃತ್ವದ ಎನ್ಡಿಎ ಮೈತ್ರಿಕೂಟ ಒಟ್ಟು 16 ಸ್ಥಾನಗಳನ್ನು ಪಡೆದುಕೊಂಡಿದೆ. ಹಾಗೂ ಟಿವಿಕೆ 2 ಸ್ಥಾನ, ಕಾಂಗ್ರೆಸ್ 1 ಸ್ಥಾನವನ್ನು ಪಡೆದುಕೊಂಡಿದೆ. ಡಿಎಂಕೆ 5, ಎಲ್ಜೆಕೆ 1, ಇತರೆ 5 ಸ್ಥಾನವನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಬಂಗಾಳದಲ್ಲಿ ಬಿಜೆಪಿ ದಿಗ್ವಿಜಯ; ಸಿಎಂ ಕುರ್ಚಿಗೆ ಭಾರಿ ಪೈಪೋಟಿ! ಮಮತಾ ಬ್ಯಾನರ್ಜಿಗೆ ಭಾರೀ ಮುಖಭಂಗ
ಈ ಬಾರಿಯ ಚುನಾವಣೆಯಲ್ಲಿ ಪುದುಚೇರಿಯು ಐತಿಹಾಸಿಕ 91.23% ಮತದಾನಕ್ಕೆ ಸಾಕ್ಷಿಯಾಗಿದೆ. ವಿಶೇಷವೆಂದರೆ, ಪುರುಷರಿಗಿಂತ (88.09%) ಮಹಿಳೆಯರೇ (91.33%) ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ.
ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

