ಸಚಿವ ಜಮೀರ್ ಅಹಮದ್ ಮನೆಯಲ್ಲೇ ಕೈಚಳಕ: 1.13 ಕೋಟಿ ಮೌಲ್ಯದ ಚಿನ್ನ ಕದ್ದಿದ್ದ ಸಂಬಂಧಿಕನ ಬಂಧನ!

ಬೆಂಗಳೂರು: ಸಚಿವ ಜಮೀರ್ ಅಹಮದ್ ಖಾನ್ ಅವರ ಮನೆಯಲ್ಲಿ ನಂಬಿಕಸ್ಥರೇ ದ್ರೋಹ ಬಗೆದಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಹಲವು ವರ್ಷಗಳಿಂದ ಮನೆಯಲ್ಲೇ ಗುಟ್ಟಾಗಿ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಸಚಿವರ ತಾಯಿಯ ಸಂಬಂಧಿಯನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ. ಸಚಿವರ ಮನೆಯಿಂದ ಸುಮಾರು 1.13 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು.

ಈ ಕೃತ್ಯ ಎಸಗಿದ್ದು ಬೇರೆ ಯಾರೂ ಅಲ್ಲ, ಸಚಿವರ ತಾಯಿಯ ಸಂಬಂಧಿಯಾದ ಸೈಯದ್ ಅಮೀರ್ ಎಂಬಾತ. ಪ್ರಕರಣದ ಸುಳಿವು ಬೆನ್ನತ್ತಿದ ಶಿವಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಯುವ ಕಾಂಗ್ರೆಸ್ ನಾಯಕನ ಬರ್ಬರ ಹತ್ಯೆ: ಧಾರವಾಡದಲ್ಲಿ ನಡುರಾತ್ರಿ ನಡೆದಿದ್ದೇನು?

ಬಂಧಿತ ಆರೋಪಿಯಿಂದ 1 ಕೆಜಿಗೂ ಹೆಚ್ಚು ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವರ್ಷಗಳಿಂದ ಮನೆಯಲ್ಲೇ ಇದ್ದು ನೌಟಂಕಿ ಆಟವಾಡುತ್ತಾ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯ ಅಸಲಿಯತ್ತು ಈಗ ಬಯಲಾಗಿದ್ದು, ಸಚಿವರ ಆಪ್ತ ವಲಯದಲ್ಲಿ ಆಘಾತ ಮೂಡಿಸಿದೆ.

ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *