ಬೆಂಗಳೂರು: ರಾಜ್ಯಾದ್ಯಂತ ಸೂರ್ಯನ ತಾಪಮಾನ ಏರುತ್ತಲೇ ಇದೆ. ಈ ಸುಡುವ ಬಿಸಿಲಿನಲ್ಲಿ ದೇಹವನ್ನು ತಂಪಾಗಿರಿಸುವುದು ಮತ್ತು ಚರ್ಮದ ಆರೋಗ್ಯ ಕಾಪಾಡುವುದು ಬಹಳ ಮುಖ್ಯ. ನಾವು ಧರಿಸುವ ಬಟ್ಟೆಗಳು ನಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಾಗಾದರೆ ಈ ಬೇಸಿಗೆಗೆ ಯಾವ ರೀತಿಯ ಬಟ್ಟೆಗಳು ಸೂಕ್ತ? ಇಲ್ಲಿದೆ ಮಾಹಿತಿ ಇಲ್ಲಿದೆ.
ಕಾಟನ್ (ಹತ್ತಿ) ಬಟ್ಟೆಗಳಿಗೆ ಮೊದಲ ಆದ್ಯತೆ:
ಬೇಸಿಗೆಯಲ್ಲಿ ಹತ್ತಿ ಬಟ್ಟೆಗಳು ಅತ್ಯುತ್ತಮ. ಇವು ಬೆವನನ್ನು ಹೀರಿಕೊಳ್ಳುತ್ತವೆ ಮತ್ತು ಗಾಳಿಯಾಡಲು ಅನುವು ಮಾಡಿಕೊಡುತ್ತವೆ (Breathable). ಇದು ಚರ್ಮದ ತುರಿಕೆ ಮತ್ತು ಬೆವರಿನ ಗುಳ್ಳೆಗಳನ್ನು ತಡೆಯುತ್ತದೆ.
ತಿಳಿ ಬಣ್ಣದ ಬಟ್ಟೆಗಳನ್ನೇ ಆಯ್ಕೆ ಮಾಡಿ:
ಕಪ್ಪು ಅಥವಾ ಗಾಢ ಬಣ್ಣದ ಬಟ್ಟೆಗಳು ಸೂರ್ಯನ ಶಾಖವನ್ನು ಅತಿ ಹೆಚ್ಚು ಹೀರಿಕೊಳ್ಳುತ್ತವೆ. ಆದ್ದರಿಂದ ಬಿಳಿ, ತಿಳಿ ನೀಲಿ, ಗುಲಾಬಿ ಅಥವಾ ಲೈಟ್ ಗ್ರೀನ್ ಬಣ್ಣದ ಬಟ್ಟೆಗಳನ್ನು ಧರಿಸುವುದು ಉತ್ತಮ. ಇವು ಶಾಖವನ್ನು ಪ್ರತಿಫಲಿಸಿ (Reflect) ದೇಹವನ್ನು ತಂಪಾಗಿಡುತ್ತವೆ.
ಇದನ್ನೂ ಓದಿ; Health Tips: ಈ 5 ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಿದರೆ ಅಪಾಯ
ಸಡಿಲವಾದ ಬಟ್ಟೆ ಧರಿಸಿ
ಬಿಗಿಯಾದ ಬಟ್ಟೆಗಳು ಗಾಳಿಯಾಡುವುದನ್ನು ತಡೆಯುತ್ತವೆ ಮತ್ತು ಚರ್ಮದ ಕಿರಿಕಿರಿಗೆ ಕಾರಣವಾಗುತ್ತವೆ. ಆದ್ದರಿಂದ ಬೇಸಿಗೆಯಲ್ಲಿ ಸಡಿಲವಾದ ಕುರ್ತಾ, ಪೈಜಾಮಾ ಅಥವಾ ಕಾಟನ್ ಟೀ ಶರ್ಟ್‌ಗಳನ್ನು ಬಳಸಿ.
ಲಿನನ್ ಮತ್ತು ಖಾದಿ ಬಟ್ಟೆಗಳು:
ಹತ್ತಿಯಂತೆಯೇ ಲಿನನ್ ಮತ್ತು ಖಾದಿ ಬಟ್ಟೆಗಳು ಕೂಡ ಬೇಸಿಗೆಗೆ ತುಂಬಾ ಹಿತಕರ. ಇವು ನೈಸರ್ಗಿಕವಾಗಿದ್ದು, ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ.
ಸನ್ ಗ್ಲಾಸ್ ಮತ್ತು ಟೋಪಿ ಮರೆಯದಿರಿ:
ಕಣ್ಣುಗಳ ರಕ್ಷಣೆಗೆ ಯುವಿ (UV) ಪ್ರೊಟೆಕ್ಷನ್ ಇರುವ ಕನ್ನಡಕ ಮತ್ತು ತಲೆಯ ರಕ್ಷಣೆಗೆ ಅಗಲವಾದ ಹ್ಯಾಟ್ ಅಥವಾ ಟೋಪಿ ಬಳಸುವುದು ಅವಶ್ಯಕ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


