ಕಾನ್ಪುರ: ಭಕ್ತಿಯಿಂದ ದೇವಿಯ ದರ್ಶನ ಪಡೆದು ಪುನೀತರಾದ ದಂಪತಿಗಳ ಬದುಕಿನಲ್ಲಿ ವಿಧಿಯಾಟ ಆಘಾತಕಾರಿ ತಿರುವು ನೀಡಿದೆ. ಕಾನ್ಪುರದ ಮುಸಾನಗರದ ಮುಕ್ತಾ ದೇವಿ ದೇವಸ್ಥಾನಕ್ಕೆ ಹರಕೆ ತೀರಿಸಲು ಬಂದಿದ್ದ ಕುಟುಂಬವೊಂದರಲ್ಲಿ ಶೋಕ ಮಡುಗಟ್ಟಿದೆ. ಯಮುನಾ ನದಿಯಲ್ಲಿ ಸ್ನಾನ ಮಾಡುವಾಗ ಯುವಕನೊಬ್ಬ ಪತ್ನಿಯ ಕಣ್ಣೆದುರೇ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದಾನೆ.
ಮೋಹಿತ್ ಎಂಬ ಯುವಕ ತನ್ನ ಪತ್ನಿಯೊಂದಿಗೆ ಮುಕ್ತಾ ದೇವಿಯ ಆಶೀರ್ವಾದ ಪಡೆಯಲು ಆಗಮಿಸಿದ್ದನು. ದರ್ಶನದ ನಂತರ ಪವಿತ್ರ ಸ್ನಾನಕ್ಕಾಗಿ ಯಮುನಾ ನದಿಗೆ ಇಳಿದಾಗ ಈ ದುರ್ಘಟನೆ ಸಂಭವಿಸಿದೆ. ಮೋಹಿತ್ ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದಾಗ, ದಡದಲ್ಲಿದ್ದ ಪತ್ನಿ ಅಸಹಾಯಕಳಾಗಿ ಕಿರುಚಾಡುತ್ತಾ ನೆರವಿಗಾಗಿ ಮೊರೆ ಇಟ್ಟಿದ್ದಾಳೆ. ಆದರೆ ಯುವಕ ಕ್ಷಣಮಾತ್ರದಲ್ಲಿ ನೀರಿನ ಅಲೆಗಳ ನಡುವೆ ಕಣ್ಮರೆಯಾಗಿದ್ದಾನೆ.
ಇದನ್ನೂ ಓದಿ ಪ್ರಧಾನಿ ಮೋದಿ ನೀಡಿದ ಮಂತ್ರಗಳ ಹಿಂದಿನ ರಹಸ್ಯವೇನು? ದೇಶಕ್ಕೆ ಎದುರಾಗಿದೆಯೇ ಆರ್ಥಿಕ ವಿಪತ್ತು?
ಇಲ್ಲಿದೆ ನೋಡಿ ವಿಡಿಯೋ:
दर्शन के बाद दर्दनाक अंत पत्नी के सामने ही डूब गया पति पत्नी चिल्लाती रही लेकिन तब तक देर हो चुकी थी।
कानपुर के मुसानगर में मुक्ता देवी के दर्शन करने गए परिवार की खुशियाँ मातम में बदल गई।
यमुना नदी में स्नान के दौरान युवक मोहित अचानक डूबने लगा बेबस पत्नी बचाने के लिए गुहार… pic.twitter.com/NuAgtOfeK8
— 𝗠𝗮𝗿𝗶𝘆𝗮𝗺_𝗠𝗕𝗗 (@Mariyam_MBD) May 13, 2026
ಸ್ಥಳೀಯರು ಮತ್ತು ರಕ್ಷಣಾ ತಂಡಗಳು ತಕ್ಷಣವೇ ಕಾರ್ಯಾಚರಣೆ ನಡೆಸಿದರೂ ಮೋಹಿತ್ ಪತ್ತೆಯಾಗಿಲ್ಲ. ದೇವರ ದರ್ಶನದ ಸಂತೋಷದಲ್ಲಿದ್ದ ಕುಟುಂಬ ಈಗ ಆಳವಾದ ಶೋಕದಲ್ಲಿ ಮುಳುಗಿದೆ.
ದೇಶದ ಸುದ್ದಿ ಮತ್ತಷ್ಟೂ ಓದಲು ಇಲ್ಲಿ ಕ್ಲಿಕ್ ಮಾಡಿ


