500 ಕೋಟಿ ಊಟದ ಮೈಲಿಗಲ್ಲು: ಅಕ್ಷಯಪಾತ್ರದ ಬೆಳ್ಳಿ ಹಬ್ಬಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಶ್ಲಾಘನೆ

ನವದೆಹಲಿ: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸುವ ಮೂಲಕ ಹಸಿವು ಮುಕ್ತ ಭಾರತಕ್ಕಾಗಿ ಶ್ರಮಿಸುತ್ತಿರುವ ಅಕ್ಷಯಪಾತ್ರ ಫೌಂಡೇಶನ್, ಇತ್ತೀಚೆಗೆ 500 ಕೋಟಿ (5 ಬಿಲಿಯನ್) ಊಟಗಳನ್ನು ವಿತರಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದೆ. ನವದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಸಂಸ್ಥೆಯ ಬೆಳ್ಳಿ ಹಬ್ಬ (25 ವರ್ಷ) ಸಂಭ್ರಮಾಚರಣೆಯಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಭಾಗವಹಿಸಿ ಈ ಸಾಧನೆಯನ್ನು ಶ್ಲಾಘಿಸಿದರು.

ರಾಷ್ಟ್ರಪತಿಗಳು ಸಾಂಕೇತಿಕವಾಗಿ 500ನೇ ಕೋಟಿಯ ಊಟವನ್ನು ಬಡಿಸುವ ಮೂಲಕ ಸಂಸ್ಥೆಯ ನಿರಂತರ ಸೇವೆಯನ್ನು ಗೌರವಿಸಿದರು.2000ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಕೇವಲ 1500 ಮಕ್ಕಳಿಗೆ ಊಟ ನೀಡುವ ಮೂಲಕ ಆರಂಭವಾದ ಈ ಪಯಣ, ಇಂದು ದೇಶದಾದ್ಯಂತ ಲಕ್ಷಾಂತರ ಮಕ್ಕಳ ಹಸಿವು ನೀಗಿಸುತ್ತಿದೆ.

Advertisement

ಇದನ್ನೂ ಓದಿ: ಆಮ್ ಆದ್ಮಿ ಪಾರ್ಟಿಗೆ ಬಿಗ್ ಶಾಕ್: ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ರಾಘವ್ ಚಡ್ಡಾ ಮತ್ತು ಪ್ರಮುಖ ಸಂಸದರು!

ಸುಪೋಷಿತ ಮತ್ತು ಸುಶಿಕ್ಷಿತ ಭಾರತದಿಂದ ವಿಕಸಿತ ಭಾರತದತ್ತ’ ಎಂಬ ಆಶಯದೊಂದಿಗೆ ಈ ಸಂಭ್ರಮವನ್ನು ಆಚರಿಸಲಾಯಿತು.

Advertisement

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು