ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ವೇಳಾಪಟ್ಟಿ ಪ್ರಕಟ: ನವೆಂಬರ್ 22ರಂದು ರೋಚಕ ಭಾರತ-ಪಾಕ್ ಹೈವೋಲ್ಟೇಜ್ ಕದನ

ದೋಹಾ:ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಪುರುಷರ ‘ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026’ (Asia Cup Rising Stars 2026) ಟೂರ್ನಿಯ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಟೂರ್ನಿಯ ಎರಡನೇ ಆವೃತ್ತಿಗೆ ಕತಾರ್ (Qatar) ಆತಿಥ್ಯ ವಹಿಸಲಿದ್ದು, ಮುಂಬರುವ ನವೆಂಬರ್ 19ರಿಂದ 29ರವರೆಗೆ ದೋಹಾದ ಎರಡು ಪ್ರಮುಖ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಕಳೆದ ವರ್ಷ ನಡೆದ ಮೊದಲ ಆವೃತ್ತಿಯಲ್ಲಿ ಪಾಕಿಸ್ತಾನ ‘ಎ’ ತಂಡ ಚಾಂಪಿಯನ್ ಆಗಿದ್ದು, ಈ ಬಾರಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕಿಳಿಯಲಿದೆ.

ಮಾದರಿಯಲ್ಲಿ ಮಹತ್ವದ ಬದಲಾವಣೆ ಮತ್ತು ಗುಂಪುಗಳ ವಿಂಗಡಣೆ:

ಕಳೆದ ಆವೃತ್ತಿಯನ್ನು ಟಿ20 (T20) ಮಾದರಿಯಲ್ಲಿ ನಡೆಸಲಾಗಿತ್ತು. ಆದರೆ, ಈ ಬಾರಿ ಯುವ ಆಟಗಾರರ ಸಾಮರ್ಥ್ಯ ಪರೀಕ್ಷಿಸಲು ಪಂದ್ಯಾವಳಿಯನ್ನು 50 ಓವರ್‌ಗಳ (ODI) ಮಾದರಿಯಲ್ಲಿ ನಡೆಸಲಾಗುತ್ತಿದೆ. ಒಟ್ಟು 8 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಅವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ:

  • ಗುಂಪು ‘ಎ’: ಶ್ರೀಲಂಕಾ ‘ಎ’, ಬಾಂಗ್ಲಾದೇಶ ‘ಎ’, ಅಫ್ಘಾನಿಸ್ತಾನ ‘ಎ’, ಹಾಂಗ್ ಕಾಂಗ್.

  • ಗುಂಪು ‘ಬಿ’: ಭಾರತ ‘ಎ’, ಪಾಕಿಸ್ತಾನ ‘ಎ’, ನೇಪಾಳ, ಯುಎಇ (UAE).

ಲೀಗ್ ಹಂತದಲ್ಲಿ ಪ್ರತಿ ತಂಡವು ತನ್ನ ಗುಂಪಿನ ಉಳಿದ ಮೂರು ತಂಡಗಳ ವಿರುದ್ಧ ತಲಾ ಒಂದು ಪಂದ್ಯ ಆಡಲಿದ್ದು, ಒಟ್ಟು 12 ಲೀಗ್ ಪಂದ್ಯಗಳು ಜರುಗಲಿವೆ. ಎರಡೂ ಗುಂಪುಗಳಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ಸ್‌ಗೆ ಅರ್ಹತೆ ಪಡೆಯಲಿವೆ.

ಭಾರತ-ಪಾಕ್ ಹೈವೋಲ್ಟೇಜ್ ಮಹಾಮುಕಾಮುಖಿ:

ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ‘ಎ’ ಮತ್ತು ಪಾಕಿಸ್ತಾನ ‘ಎ’ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯವು ನವೆಂಬರ್ 22ರಂದು ಮಧ್ಯಾಹ್ನ 3:30ಕ್ಕೆ ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದನ್ನೂ ಓದಿ; ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್‌ಗೆ ಹೊಸ ನಾಯಕಿ!: ಹರ್ಮನ್‌ಪ್ರೀತ್ ಕೌರ್ ರಾಜೀನಾಮೆ, ಸ್ಮೃತಿ ಮಂಧನ ಕ್ಯಾಪ್ಟನ್

ಭಾರತ ‘ಎ’ ತಂಡದ ಲೀಗ್ ಪಂದ್ಯಗಳ ವೇಳಾಪಟ್ಟಿ:

  • ನವೆಂಬರ್ 20: ಭಾರತ ‘ಎ’ vs ನೇಪಾಳ (ಮಧ್ಯಾಹ್ನ 3:30)

  • ನವೆಂಬರ್ 22: ಭಾರತ ‘ಎ’ vs ಪಾಕಿಸ್ತಾನ ‘ಎ’ (ಮಧ್ಯಾಹ್ನ 3:30)

  • ನವೆಂಬರ್ 24: ಭಾರತ ‘ಎ’ vs ಯುಎಇ (ಬೆಳಗ್ಗೆ 11:30)

ಸಂಪೂರ್ಣ ವೇಳಾಪಟ್ಟಿ (Schedule):

  • ನವೆಂಬರ್ 19: ಬಾಂಗ್ಲಾದೇಶ ‘ಎ’ vs ಹಾಂಗ್ ಕಾಂಗ್ (ಬೆಳಗ್ಗೆ 11:30)

  • ನವೆಂಬರ್ 19: ಶ್ರೀಲಂಕಾ ‘ಎ’ vs ಅಫ್ಘಾನಿಸ್ತಾನ ‘ಎ’ (ಮಧ್ಯಾಹ್ನ 3:30)

  • ನವೆಂಬರ್ 20: ಪಾಕಿಸ್ತಾನ ‘ಎ’ vs ಯುಎಇ (ಬೆಳಗ್ಗೆ 11:30)

  • ನವೆಂಬರ್ 20: ಭಾರತ ‘ಎ’ vs ನೇಪಾಳ (ಮಧ್ಯಾಹ್ನ 3:30)

  • ನವೆಂಬರ್ 21: ಶ್ರೀಲಂಕಾ ‘ಎ’ vs ಹಾಂಗ್ ಕಾಂಗ್ (ಬೆಳಗ್ಗೆ 11:30)

  • ನವೆಂಬರ್ 21: ಬಾಂಗ್ಲಾದೇಶ ‘ಎ’ vs ಅಫ್ಘಾನಿಸ್ತಾನ ‘ಎ’ (ಮಧ್ಯಾಹ್ನ 3:30)

  • ನವೆಂಬರ್ 22: ಯುಎಇ vs ನೇಪಾಳ (ಬೆಳಗ್ಗೆ 11:30)

  • ನವೆಂಬರ್ 22: ಭಾರತ ‘ಎ’ vs ಪಾಕಿಸ್ತಾನ ‘ಎ’ (ಮಧ್ಯಾಹ್ನ 3:30)

  • ನವೆಂಬರ್ 23: ಅಫ್ಘಾನಿಸ್ತಾನ ‘ಎ’ vs ಹಾಂಗ್ ಕಾಂಗ್ (ಬೆಳಗ್ಗೆ 11:30)

  • ನವೆಂಬರ್ 23: ಶ್ರೀಲಂಕಾ ‘ಎ’ vs ಬಾಂಗ್ಲಾದೇಶ ‘ಎ’ (ಮಧ್ಯಾಹ್ನ 3:30)

  • ನವೆಂಬರ್ 24: ಭಾರತ ‘ಎ’ vs ಯುಎಇ (ಬೆಳಗ್ಗೆ 11:30)

  • ನವೆಂಬರ್ 24: ಪಾಕಿಸ್ತಾನ ‘ಎ’ vs ನೇಪಾಳ (ಮಧ್ಯಾಹ್ನ 3:30)

  • ನವೆಂಬರ್ 26: ಮೊದಲ ಸೆಮಿಫೈನಲ್ – A1 vs B2 (ಮಧ್ಯಾಹ್ನ 3:30)

  • ನವೆಂಬರ್ 27: ಎರಡನೇ ಸೆಮಿಫೈನಲ್ – B1 vs A2 (ಮಧ್ಯಾಹ್ನ 3:30)

  • ನವೆಂಬರ್ 29: ಮಹಾ ಫೈನಲ್ ಪಂದ್ಯ (ಮಧ್ಯಾಹ್ನ 3:30)

ಕ್ರಿಕೆಟ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ