ದಕ್ಷಿಣ ಕನ್ನಡ
Aramboor : ಅರಂಬೂರಿನ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿ ಮೃತ್ಯು
ಬೈಕ್ ಅಪಘಾತದಲ್ಲಿ ಗಂಭೀತ ಗಾಯಗೊಂಡ ವ್ಯಕ್ತಿ ಸಾವನ್ನಪ್ಪಿರುವುದು ವರದಿಯಾಗಿದೆ. ಬೈಕ್ ಚಲಾಯಿಸಿಕೊಂಡು ಅರಂಬೂರು ರಸ್ತೆಯಲ್ಲಿ ಹೋಗುತ್ತಿದ್ದಾಗ, ರಸ್ತೆ ಬದಿ ತಡೆಬೇಲಿಗೆ ಗುದ್ದಿ ರಸ್ತೆಗೆ ಎಸೆಯಲ್ಪಟ್ಟರೆನ್ನಲಾಗಿದೆ. ಪರಿಣಾಮ ಬೈಕ್ ಪಲ್ಟಿಯಾಗಿ ಸಲ್ಮಾನ್ ರಿಗೆ ತಲೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
Read Moreವಿವಿಧ ಕ್ಷೇತ್ರಗಳಲ್ಲಿನ ಸಾಧನೆಗೆ ಸಹಕಾರ ರತ್ನ ಎಸ್ಆರ್ ಸತೀಶ್ಚಂದ್ರರಿಗೆ ಸನ್ಮಾನ
ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರ ಎಸ್.ಆರ್.ಸತೀಶ್ಚಂದ್ರ ಅವರನ್ನು ಆಡಳಿತ ಮಂಡಳಿ ಸದಸ್ಯರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
Read Moreಅಖಿಲ ಭಾರತ ಗೇರು ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಗಂಗಾಧರ ನಾಯಕ್ ಆಯ್ಕೆ
ಅಖಿಲ ಭಾರತ ಗೇರು ಬೆಳೆಗಾರರ ಸಂಘದ (AICGA) ಅಧ್ಯಕ್ಷರನ್ನಾಗಿ ಗಂಗಾಧರ ನಾಯಕ್ ಎಂ. ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿಯನ್ನಾಗಿ ವಿಶ್ವ ಕೇಶವ ಕುರುವೇರಿ ಅವರನ್ನು ಆಯ್ಕೆ ಮಾಡಲಾಗಿದೆ.
Read Moreಕುಕ್ಕಾಜೆಯಲ್ಲಿ ಇಂದಿರಾ ದರ್ಶಿನಿ ಸಹಕಾರಿ ಸಂಘ ಉದ್ಘಾಟನೆ
ಮಂಚಿ ಗ್ರಾಮದ ಕುಕ್ಕಾಜೆ ಸಮೀಪದ ಪತ್ತುಮುಡಿಯ ಅಲೀಮಾ ಪ್ಲಾಝ ಸಂಕೀರ್ಣದಲ್ಲಿ ಬಂಟ್ವಾಳ, ಉಳ್ಳಾಲ ಹಾಗೂ ಮಂಗಳೂರು ವ್ಯಾಪ್ತಿಗೊಳಪಟ್ಟು ಸ್ಥಾಪಿಸಲಾದ ಇಂದಿರಾ ದರ್ಶಿನಿ ಸಹಕಾರಿ ಸಂಘವನ್ನು ಜ.4 ರಂದು ಉದ್ಘಾಟಿಸಲಾಯಿತು.
Read Moreಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ ಸಂಪನ್ನ
ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ ಜನವರಿ ೩ ರಂದು ನಡೆಯಿತು. ಮುಂಜಾನೆ ರಾಷ್ಟ್ರ ವಿಜಯ ಯಜ್ಞ, ಮಧ್ಯಾಹ್ನ ಶ್ರೀ ದೇವಿಗೆ ಮಹಾಮಂಗಳಾರತಿ ನಡೆಯಿತು. ಸಂಜೆ ಭಜನಾ ಕಮ್ಮಟ, ರಾತ್ರಿ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.
Read MoreBantwal : ರಾಷ್ಟ್ರ ರಕ್ಷಣೆಗಾಗಿ ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಾಷ್ಟ್ರ ವಿಜಯ ಯಜ್ಞ
ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇಶದ ಸುರಕ್ಷತೆಗಾಗಿ ಜ.3 ರಂದು ರಾಷ್ಟ್ರ ವಿಜಯ ಯಜ್ಞ ನಡೆಯಿತು. ಲೋಕ ಕಲ್ಯಾಣ, ರಾಷ್ಟ್ರ, ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಸೇನೆ ಸೇರಿದಂತೆ ದೇಶವಾಸಿಗಳ ರಕ್ಷಣೆಗಾಗಿ ದೇವಾಲಯದ ಪ್ರತಿಷ್ಠಾ ವರ್ಧಂತಿ ಉತ್ಸವದ ದಿನವಾದ ಇಂದು ರಾಷ್ಟ್ರ ವಿಜಯ ಯಾಗ ನಡೆಸಲಾಯಿತು. ಯಾಗದ ಬಳಿಕ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಮಹಾಮಂಗಳಾರತಿ ; ಬೆಳಗ್ಗೆ 7 ಗಂಟೆಗೆ ರಾಷ್ಟ್ರ ವಿಜಯ ಯಾಗ ಆರಂಭವಾಯಿತು. ದೇವಾಲಯದ ಆಡಳಿತ ಮಂಡಳಿಯ ಮಾಜಿ
Read MoreSullia : ಈ ಜಾತ್ರೆಯ ಪ್ರಮುಖ ಆಕರ್ಷಣೆಯೇ ರಥೋತ್ಸವ : ಊರ ಪರವೂರಿನಿಂದಲೂ ಜನಸಾಗರ
ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸಲಾಗುವ ಸುಳ್ಯ ಜಾತ್ರೆ ಕರಾವಳಿ ಕರ್ನಾಟಕದ ಪ್ರಮುಖ ಜನಪರಂಪರೆಯ ಹಬ್ಬಗಳಲ್ಲಿ ಒಂದಾಗಿದೆ. ಈ ಜಾತ್ರೆ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲದೆ, ಸ್ಥಳೀಯ ಸಂಸ್ಕೃತಿ, ಜನಜೀವನ ಮತ್ತು ಸಾಮಾಜಿಕ ಏಕತೆಯ ಪ್ರತೀಕವಾಗಿಯೂ ಗುರುತಿಸಿಕೊಂಡಿದೆ. ಊರ ಪರವೂರಿನಿಂದಲೂ ಸುಳ್ಯ ಜಾತ್ರೆಗೋಸ್ಕರ ಜನಸಾಗರವೇ ಬರುವುದು. ಜಾತ್ರೆಯ ಪ್ರಮುಖ ಆಕರ್ಷಣೆ ರಥೋತ್ಸವ ; ಈ ಸುಳ್ಯ ಜಾತ್ರೆಯ ಕೇಂದ್ರಬಿಂದುವಾಗಿರುವುದು ಪ್ರಸಿದ್ಧ ಸುಳ್ಯ ಶ್ರೀ ಚೆನ್ನಕೇಶವ ದೇವಾಲಯ. ದೇವಾಲಯದಲ್ಲಿ ನಡೆಯುವ ವಿಶೇಷ
Read Moreರಾಜ್ಯಾದ್ಯಂತ ದೇವಸ್ಥಾನಗಳ ಆದಾಯದ ಏರಿಕೆ ಪಟ್ಟಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಅಗ್ರಸ್ಥಾನ
ಮಂಗಳೂರು : ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟಗಳ ಮಧ್ಯೆ ನೆಲೆಸಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿ ಖ್ಯಾತಿಯಾಗಿದ್ದು, ನೈಸರ್ಗಿಕ ಸೌಂದರ್ಯ, ಪೌರಾಣಿಕ ಹಿನ್ನೆಲೆ ಮತ್ತು ವಿಶಿಷ್ಟ ಆಚರಣೆಗಳಿಂದ ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದೆ. ಅಲ್ಲದೇ, ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ರಾಜ್ಯದ ದೇವಸ್ಥಾನಗಳ ಆದಾಯದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನವಾಗಿ
Read Moreಬಂಟ್ವಾಳ: ಮಂಚಿ ಗ್ರಾಮ ಮಟ್ಟದ ಟೈಲರಿಂಗ್ ತರಬೇತಿ ಉದ್ಘಾಟನೆ
ಬಂಟ್ವಾಳ ತಾಲೂಕಿನ ಮಂಚಿ ಗ್ರಾಮ ಮಟ್ಟದ ಟೈಲರಿಂಗ್ ತರಬೇತಿ ಕಾರ್ಯಕ್ರಮವು ಜ. ೨ ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.
Read Moreಮಾಣಿ: ಸಾವಿತ್ರಿಬಾಯಿ ಬಾ ಪುಲೆ ಜನ್ಮದಿನ ಪೂರ್ವಚಾರಣೆ ಕಾರ್ಯಕ್ರಮ
ಮಾಣಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಮಹಿಳಾ ಬಂಧುತ್ವ ವೇದಿಕೆ, ಚಿತ್ತಾರ ಮಹಿಳಾ ಮಂಡಳಿ, ಸಾವಿತ್ರಿ ಬಾಯಿ ಬಾ ಫುಲೆ ಮಹಿಳಾ ಕೌಶಲ್ಯ ಕೇಂದ್ರ ಸಹಾಭಾಗಿತ್ವದಲ್ಲಿ ಸಾವಿತ್ರಿ ಬಾಯಿ ಫುಲೆ ಜನ್ಮದಿನ ಪೂರ್ವಚಾರಣೆ ಕಾರ್ಯಕ್ರಮ ನಡೆಯಿತು.
Read More
