ತಮಿಳುನಾಡಿಗೆ ಏಕೆ ಹೋಗಬೇಕು? ಪುತ್ತೂರಿನ ಈ ನೂತನ ಮಳಿಗೆಯಲ್ಲೂ ಕಾಂಚೀಪುರಂ ಸಾರಿ ಲಭ್ಯ

'Tamanvi Silks' new store to open on Feb. 5 at Bappalige Tower on Bypass Road, Puttur

ಪುತ್ತೂರು: ನಾರಿಗೂ ಸಾರಿಗೂ ಏನೋ ನಂಟು, ನಾರಿಯರಿಗೆ ಸೀರೆ ಅಂದ್ರೆ ಏನೋ ಪ್ರೀತಿ, ಅದರಲ್ಲೂ ರೇಷ್ಮೆ ಸೀರೆ ಅಂದ್ರೆ ಸ್ವಲ್ಪ ವ್ಯಾಮೋಹ ಹೆಚ್ಚು. ನೀರೆಯರ ನೆಚ್ಚಿನ ಸೀರೆ ಅಂದ್ರೆ ಅದು ರೇಷ್ಮೆ ಸೀರೆ. ರೇಷ್ಮೆ ಸೀರೆಗೆ ಮನಸೋಲದ ಹೆಂಗಳೆಯರೇ ಇಲ್ಲ. ರೇಷ್ಮೆ ಬಟ್ಟೆಗಳು ನಮ್ಮ ಪ್ರತಿಷ್ಠೆಯ ಪ್ರತೀಕ. ರೇಷ್ಮೆ ಸೀರೆ ಅಥವಾ ಇತರ ಉಡುಗೆಗಳ ಫ್ಯಾಷನ್‌ ಹಿಂದಿನಿಂದಲೂ ಇದೆ. ಇದು ಔಟ್‌ ಆಫ್‌ ಫ್ಯಾಷನ್‌ ಆಗುವ ಮಾತೇ ಇಲ್ಲ.

ರೇಷ್ಮೆ ಸೀರೆಗಳಲ್ಲಿ ಕಾಂಚೀಪುರಂ ಸೀರೆಗಳು ಇಂದಿಗೂ ತಮ್ಮ ಪ್ರಸಿದ್ಧಿಯನ್ನು ಹಾಗೆಯೇ ಉಳಿಸಿಕೊಂಡಿದೆ. ಶುದ್ಧ ರೇಷ್ಮೆ ಮತ್ತು ಬೆಳ್ಳಿಯ ನೆಯ್ಗೆಯೊಂದಿಗೆ ಕಂಗೊಳಿಸುವ ರೇಷ್ಮೆ ಸೀರೆಗಳನ್ನು ಉಟ್ಟುಕೊಂಡರೆ ಅದಕ್ಕಿರುವ ಶೋಭೆಯೇ ಬೇರೆ. ಸೀರೆಗಳ ಬಗ್ಗೆ ಹೆಣ್ಣು ಮಕ್ಕಳಿಗಿಂತ ಹೆಚ್ಚಾಗಿ ಬೇರೆಯವರಿಗೆ ತಿಳಿದಿರಲು ಸಾಧ್ಯವಿಲ್ಲ. ನಾವು ಸೀರೆ ಖರೀದಿಗೆ ತೆರಳಿದಾಗ ನಮಗೊಪ್ಪುವ ಸಾರಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಸ್ವಲ್ಪ ಕನ್ಪ್ಯೂಸ್‌ ಆಗಬಹುದು. ಈ ವೇಳೆ ಮಳಿಗೆಯಲ್ಲಿರುವವರ ಸಲಹೆ ಅಗತ್ಯವಾಗಿರುತ್ತದೆ. ಈ ವಿಚಾರದಲ್ಲಿ ಗೊಂದಲವೇ ಬೇಡ ನಾವೀಗ ತಿಳಿಸ ಹೊರಟಿರುವ ಮಳಿಗೆಗೆ ನೀವು ಭೇಟಿ ನೀಡಿದರೆ ನಿಮಗೆ ಕನ್ಪ್ಯೂಸ್‌ ಆಗುವ ಪ್ರಮೇಯವೇ ಬರುವುದಿಲ್ಲ.. ಯಾಕಂದ್ರೆ ಈ ವಸ್ತ್ರ ಮಳಿಗೆಯನ್ನು ಮುನ್ನಡೆಸುತ್ತಿರುವವರು ಕೂಡ ಓರ್ವ ಮಹಿಳೆ.

Advertisement

ಮುತ್ತಿನ ನಗರಿ ಪುತ್ತೂರಿನಲ್ಲಿ ಖ್ಯಾತಿ ಪಡೆದಿರುವ ಮಾಲಾಶ್ರೀ ವಿಜೇತ್ ಅವರ ಮಾಲಕತ್ವದ, ಪಾರಂಪರ್ಯ, ನಂಬಿಕೆ ಮತ್ತು ಗುಣಮಟ್ಟದ ಸಮಾಗಮವಾಗಿರುವ ‘ತಮನ್ವಿ ಸಿಲ್ಕ್ಸ್’ ನೂತನ ಮಳಿಗೆ ಫೆ.5ರಂದು ಪುತ್ತೂರು ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನ ನೆಲ ಅಂತಸ್ತಿನಲ್ಲಿ ಉದ್ಘಾಟನೆಗೊಳ್ಳಲಿದೆ.

ಸಮಾರಂಭದ ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತಿಲ ಪರಿವಾರದ ಸ್ಥಾಪಕಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ಪುತ್ತೂರು ನಗರಸಭೆಯ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಪುತ್ತೂರು ಕುಂದರ ಅಸ್ಪರುದ್ದೀನ್ ಜಮಾತ್ ಕಮಿಟಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹೆಮಾನ್ ಅಜಾದ್ ದರ್ಬೆ, ಕೋಟಿ-ಚೆನ್ನಯ ಜೋಡುಕರೆ ಕಂಬಳದ ಅಧ್ಯಕ್ಷ ಎನ್. ಚಂದ್ರಹಾಸ್ ಶೆಟ್ಟಿ ಆಗಮಿಸಲಿದ್ದಾರೆ.

Advertisement

ಇದನ್ನೂ ಓದಿ: ವಿಬಿ ಜಿ ರಾಮ್‌ಜಿ ಕಾಯ್ದೆ: ಸಿಎಂ ಹೇಳಿಕೆಗೆ ಸದನದಲ್ಲಿ ಭಾರಿ ಗದ್ದಲ

ಅಲ್ಲದೆ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಯು.ಆರ್ ಪ್ರಾಪರ್ಟೀಸ್ ಎಂ.ಡಿ ಉಜ್ವಲ್ ಪ್ರಭು, ವಿಜಯ ಸಾಮ್ರಾಟ್ ಸ್ಥಾಪಕಾಧ್ಯಕ್ಷರಾದ ಸಹಜ್ ರೈ, ಅಕ್ಷಯ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಜಯಂತ್ ನಡುಬೈಲು, ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಮಾಜಿ ಜಿಲ್ಲಾ ಗವರ್ನರ್ ಡಾ. ಗೀತಾಪ್ರಕಾಶ್ ಎ ಎಂ.ಬಿ.ಬಿ.ಎಸ್., ಡಿ.ಜಿ.ಒ, ವಿಟ್ಲ ಸುರಕ್ಷಾ ಹಾಸ್ಪಿಟಲ್ ನ ಡಾ. ಗಾಯತ್ರಿ ‘ಗೀತಾ ಪ್ರಕಾಶ್’ ಎಂ.ಬಿ.ಬಿ.ಎಸ್., ಪುತ್ತೂರು ಒಕ್ಕಲಿಗ ಯುವ ಸಂಘದ ಅಧ್ಯಕ್ಷರಾದ ಅಮರನಾಥ ಗೌಡ, ವಕೀಲರಾದ ಮಹೇಶ್ ಕಜೆ, ಶೈಲಜಾ ಅಮರನಾಥ್,  ಪುತ್ತೂರು ನಗರಸಭೆ ಮಾಜಿ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ, ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಖ್ಯಾತ ಜ್ಯೋತಿಷ್ಯ ಗಣೇಶ್ ಭಟ್ ಕೋಲ್ಪೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯ, ಐಶ್ವರ್ಯ ಬ್ಯೂಟಿ ಪಾರ್ಲರ್‌ನ ಐಶ್ವರ್ಯ ಚಂದ್ರಶೇಖರ್, ಎಸ್.ಡಿ.ಪಿ ರೆಮೆಡಿಸ್ ಮತ್ತು ರಿಸರ್ಚ್ ಸೆಂಟರ್‌ನ ಮ್ಯಾನೇಜಿಂಗ್ ಪಾರ್ಟ್ನರ್ ರೂಪಲೇಖ, ಸೈಕಾಲಜಿಸ್ಟ್ ಮತ್ತು ಆರ್ಟಿಸ್ಟ್ ಅದಿತಿ ಎಂ.ಎಸ್ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕಿ ಮಾಲಾಶ್ರೀ ವಿಜೇತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಳಿಗೆಯಲ್ಲಿ ಲಭ್ಯವಿರುವ ಉಡುಪುಗಳು

ವಿಶೇಷವಾಗಿ ಮದುವೆ ಹಾಗೂ ಇನ್ನಿತರ ಶುಭ-ಸಮಾರಂಭಗಳಿಗೆ ಬೇಕಾಗುವ ರೇಷ್ಮೆ ಹಾಗೂ ಜರಿ ಸೀರೆಗಳ ಅಮೋಘ ಸಂಗ್ರಹ ಲಭ್ಯವಿದ್ದು, ಕಾಂಚೀಪುರಂ ಸೀರೆಗಳನ್ನು ತಮಿಳುನಾಡಿನ ಕಾಂಚೀಪುರಂ ಪ್ರದೇಶದಿಂದಲೇ ಖರೀದಿಸಿ ತಂದು ಗ್ರಾಹಕರಿಗೆ ನೀಡಲಾಗುತ್ತಿದೆ. ಬನಾರಸಿ, ಮೈಸೂರು ಸಿಲ್ಕ್, ಡೈಲಿ ವೇರ್ ಸಾರೀಸ್, ಪಾರ್ಟಿ ವೇರ್ಸ್ ಹಾಗೂ ಇನ್ನೂ ಹಲವಾರು ವಿಭಿನ್ನ ಬಗೆಯ ಸೀರೆಗಳು ಹಾಗೂ ವಸ್ತ್ರಗಳು ಇಲ್ಲಿ ಲಭ್ಯವಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು