ದಕ್ಷಿಣ ಕನ್ನಡ
MGNREGA : ಎರಡು ದಿನಗಳ ವಿಶೇಷ ಅಧಿವೇಶನ ಕರೆಯಲು ಮುಂದಾದ ಕರ್ನಾಟಕ ಕಾಂಗ್ರೆಸ್ ಸರ್ಕಾರ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಂಬಂಧಿತ ವಿಷಯಗಳನ್ನು ಚರ್ಚಿಸಲು ಕರ್ನಾಟಕ ವಿಧಾನಸಭೆಯು ಎರಡು ದಿನಗಳ ವಿಶೇಷ ಅಧಿವೇಶನವನ್ನು ನಡೆಸಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶುಕ್ರವಾರ ಮಾಧ್ಯಮದೊಂದಿಗೆ ತಿಳಿಸಿದರು.
Read Moreಉಪ್ಪಿನಂಗಡಿ: ಶ್ರೀರಾಮ ಶಾಲೆಯಲ್ಲಿ ಇಂಟರ್ ಆಕ್ಟಿವ್ ಸ್ಮಾರ್ಟ್ ಕ್ಲಾಸ್ ಪ್ರಾರಂಭ
ಉಪ್ಪಿನಂಗಡಿಯ ಶ್ರೀರಾಮ ಶಾಲೆಗೆ ಯುವ ಬೆಂಗಳೂರು ಟ್ರಸ್ಟ್ ಇವರು ನೀಡಿರುವ ಇಂಟರ್ ಆಕ್ಟಿವ್ ಸ್ಮಾರ್ಟ್ ಕ್ಲಾಸ್ ಇದರ ಉದ್ಘಾಟನೆಯನ್ನು ಜ.8 ರಂದು ನಡೆಸಲಾಯಿತು.
Read MoreMangalore : ‘ಹಕ್ಕಿ ಹಬ್ಬ’ ಪಕ್ಷಿ ಉತ್ಸವ : ಜ.9 ರಿಂದ ಮಂಗಳೂರಿನಲ್ಲಿ ಹಕ್ಕಿಗಳ ಚಿಲಿಪಿಲಿ ಸದ್ದು
ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಜನವರಿ 9ರಿಂದ 11ರವರೆಗೆ ಹಕ್ಕಿ ಹಬ್ಬ (ಪಕ್ಷಿ ಉತ್ಸವ) 12ನೇ ಆವೃತ್ತಿ ಮಂಗಳೂರಿನಲ್ಲಿ ನಡೆಯಲಿದೆ.
ಬುಧವಾರದಂದು, ಮಂಗಳೂರು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡಳಿ ಅಧ್ಯಕ್ಷೆ ಶಲೆಟ್ ಪಿಂಟೋ, ಅಳಿವಿನ ಅಂಚಿನಲ್ಲಿರುವ ಅನೇಕ ಪಕ್ಷಿ ಜಾತಿಗಳನ್ನು ಒಳಗೊಂಡಂತೆ ರಾಜ್ಯದ ಶ್ರೀಮಂತ ಪಕ್ಷಿ ವೈವಿಧ್ಯತೆ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವುದು ಹಬ್ಬದ ಮುಖ್ಯ ಉದ್ದೇಶ ಎಂದು ಹೇಳಿದರು.
Alcohol : ಹಣ ವಸೂಲಿಗೆ ಇಳಿದ ಮದ್ಯದಂಗಡಿಗಳಿಗೆ ದಂಡ : 12 ಕೋಟಿ ಸಂಗ್ರಹ
ಗ್ರಾಹಕರ ರಕ್ಷಣೆಯೊಂದಿಗೆ ಅಕ್ರಮ ಲಾಭಾಸಕ್ತಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ಅಬಕಾರಿ ಇಲಾಖೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ತಪಾಸಣಾ ಕಾರ್ಯಾಚರಣೆ ನಡೆಸಿದ್ದು, ಗರಿಷ್ಠ ಚಿಲ್ಲರೆ ಬೆಲೆ (ಎಂಆರ್ಪಿ) ಮೀರಿ ಮದ್ಯ ಮಾರಾಟ ಮಾಡಿದ ಪ್ರಕರಣಗಳಲ್ಲಿ ಸುಮಾರು ₹12 ಕೋಟಿ ದಂಡ ವಸೂಲಿ ಮಾಡಲಾಗಿದೆ. ಜೊತೆಗೆ 736 ಮದ್ಯ ಅಂಗಡಿಗಳ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ.
Read MorePuttur : ಜ.12-13ರಂದು ವಿವೇಕಾನಂದ ಕಾಲೇಜಿನಲ್ಲಿ ವಿವೇಕ ಜಯಂತಿ, ಶತ ಜಯಘೋಷ ಪಥಸಂಚಲನ
ವಿವೇಕಾನಂದ ವಿದ್ಯಾವರ್ಧಕ ಸಂಘದ ನೆಹರುನಗರದಲ್ಲಿರುವ ಕಾಲೇಜು ಆವರಣದಲ್ಲಿ ಜ.12 ರಂದು ವಿವೇಕಾನಂದ ಜಯಂತಿ ಕಾರ್ಯಕ್ರಮ ಆಯೊಜಿಸಲಾಗಿದ್ದು, ಜ.13 ರಂದು ಶತ ಜಯಘೋಷ ಪಥ ಸಂಚಲನ ನಡೆಯಲಿದೆ.
ವಿವೇಕಾನಂದ ಜಯಂತಿ ಪ್ರಯುಕ್ತ 12 ರಂದು ಬೆಳಗ್ಗೆ 9:39ರಿಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬೆಂಗಳೂರು ದಕ್ಷಿಣ ಕ್ಷೇತ್ರಸ ಸಂಸದ ತೇಜಸ್ವಿ ಸೂರ್ಯ ಅವರು ಆಗಮಿಸಲಿದ್ದಾರೆ.
Sullia : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ : ಖಂಡನೆ
ಬಿಲ್ಲವ ಸಮುದಾಯದ ಸಂದೇಶ್ ಎಂಬ ವ್ಯಕ್ತಿಯೊಬ್ಬ ಫೇಸ್ಬುಕ್ ನಲ್ಲಿ ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ರ ಭಾವಚಿತ್ರ ಹಾಕಿ ಶ್ರದ್ಧಾಂಜಲಿ ಎಂದು ಹಾಕಿರುತ್ತಾರೆ. ಈ ವಿಷಯವಾಗಿ ಹಲವಾರು ಜನರು ಸಾಮಾಜಿಕ ಜಾಲತಾಣದಲ್ಲಿ ಖಂಡನೆಯನ್ನು ವ್ಯಕ್ತಪಡಿಸುತ್ತಿರುವುದು ವರದಿಯಾಗಿದೆ.
Read MoreDL : ರಾಜ್ಯದಲ್ಲಿ 5947 ಡ್ರೈವಿಂಗ್ ಲೈಸೆನ್ಸ್ ರದ್ದು, ಇನ್ನೂ ಬಾಕಿ ಇವೆ ಪ್ರಕರಣಗಳು
ವಾಹನ ಚಾಲನೆ ಇಂದಿನ ಜೀವನದ ಅವಿಭಾಜ್ಯ ಭಾಗವಾಗಿದ್ದು, ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆಗಾಗಿ ಚಾಲನಾ ಪರವಾನಗಿ/ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವಾಗಿದೆ. ಚಾಲನಾ ಪರವಾನಗಿ ಎಂದರೆ ವ್ಯಕ್ತಿಯು ಸಾರ್ವಜನಿಕ ರಸ್ತೆಯಲ್ಲಿ ಕಾನೂನುಬದ್ಧವಾಗಿ ವಾಹನ ಚಲಾಯಿಸಲು ಅರ್ಹನಾಗಿದ್ದಾನೆ ಎಂಬುದಕ್ಕೆ ಸರ್ಕಾರ ನೀಡುವ ಅಧಿಕೃತ ದಾಖಲೆಯಾಗಿರುತ್ತದೆ.
Read Moreವಾಹನ ಕಳ್ಳತನದ ಕ್ಲೇಮ್ ಪಾವತಿಸಲು ವಿಮಾ ಕಂಪನಿಗೆ ಗ್ರಾಹಕ ನ್ಯಾಯಾಲಯ ಆದೇಶ
ವಾಹನ ಕಳ್ಳತನ ವಿಮಾ ಕ್ಲೇಮ್ ವಿವಾದದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯವು ಶ್ರೀರಾಮ್ ಜನರಲ್ ಇನ್ಶುರೆನ್ಸ್ ಕಂಪನಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ನ್ಯಾಯಾಲಯವು ದಂಡ ವಿಧಿಸಿದೆ.
Read MoreDakshina Kannada : ಕರಾವಳಿಗರ ಹೆಮ್ಮೆಯ ಕಂಬಳಕ್ಕೆ ಅಧಿಕೃತ ಕ್ರೀಡಾ ಸ್ಥಾನಮಾನ
ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆಗಳಿಗೆ ಮಹತ್ವದ ಉತ್ತೇಜನವಾಗಿ, ರಾಜ್ಯ ಸರ್ಕಾರ ಕಂಬಳಕ್ಕೆ ಅಧಿಕೃತ ಕ್ರೀಡಾ ಸ್ಥಾನಮಾನ ನೀಡಿದ್ದು, ಜೊತೆಗೆ ಹೈಕೋರ್ಟ್ ಮುಂದಿನ ಋತುವಿನಿಂದ ರಾಜ್ಯದಾದ್ಯಂತ ಕಂಬಳ ಆಯೋಜನೆಗೆ ಅನುಮತಿ ನೀಡಿದೆ. ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರು, ಈ ನಿರ್ಧಾರಗಳು ಶತಮಾನಗಳ ಇತಿಹಾಸವಿರುವ ಗ್ರಾಮೀಣ ಕ್ರೀಡೆಗೆ ಮಹತ್ವದ ತಿರುವಾಗಿವೆ ಎಂದು ಹೇಳಿದರು.
Read MoreKollamogru : ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರ ವಿಲೀನಕ್ಕೆ ವಿರೋಧ
ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್ಸಿ)ವು ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಅಡಿಪಾಯವಾಗಿದ್ದು, ಗ್ರಾಮೀಣ ಮತ್ತು ಕಡಿಮೆ ಜನರಿರುವ ಅರೆ ನಗರ ಪ್ರದೇಶಗಳ ಜನರಿಗೆ ಮೂಲಭೂತ ಆರೋಗ್ಯ ಸೇವೆಗಳನ್ನು ಒದಗಿಸುವ ಪ್ರಮುಖ ಸಂಸ್ಥೆಯಾಗಿದೆ. ಸಾಮಾನ್ಯವಾಗಿ 20,000–30,000 ಜನಸಂಖ್ಯೆಯನ್ನು ಒಳಗೊಂಡ ಪ್ರದೇಶಕ್ಕೆ ಒಂದು ಪಿಎಚ್ಸಿ ಕಾರ್ಯನಿರ್ವಹಿಸುತ್ತದೆ. ಆರೋಗ್ಯ ಸೇವೆಗಳು ಎಲ್ಲರಿಗೂ ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಮತ್ತು ಸಮಯಕ್ಕೆ ಸರಿಯಾಗಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಪಿಎಚ್ಸಿಗಳನ್ನು ಸ್ಥಾಪಿಸಲಾಗಿದೆ.
Read More
