ಮೊದಲ ಸಂಪುಟ ಸಭೆಯಲ್ಲೇ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ ಸೇರಿದಂತೆ 6 ಮಹತ್ವದ ಘೋಷಣೆ!

ಬೆಂಗಳೂರು: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ (DK Shivakumar) ಅವರು ಇಂದು ತಮ್ಮ ಮೊದಲ ಸಚಿವ ಸಂಪುಟ ಸಭೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಅಧಿಕಾರ ವಹಿಸಿಕೊಂಡ ಮೊದಲ ದಿನವೇ ರಾಜ್ಯದ ಜನತೆಗೆ ಭರ್ಜರಿ ಕೊಡುಗೆ ನೀಡಿರುವ ನೂತನ ಸಿಎಂ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಉದ್ಯೋಗ ಸೃಷ್ಟಿ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬೂಸ್ಟರ್ ಡೋಸ್ ನೀಡುವ ಪ್ರಮುಖ 6 ಗ್ಯಾರಂಟಿ ಮಾದರಿಯ ಮಹತ್ವದ ಘೋಷಣೆಗಳನ್ನು ಪ್ರಕಟಿಸಿದ್ದಾರೆ.

ಮೊದಲ ಕ್ಯಾಬಿನೆಟ್ ಸಭೆಯ ಪ್ರಮುಖ 6 ಐತಿಹಾಸಿಕ ಘೋಷಣೆಗಳು:

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಭರಪೂರ ಕೊಡುಗೆ: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಬಸ್ ಪಾಸ್ (Free Bus Pass) ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಇದರಿಂದಾಗಿ ಉನ್ನತ ವ್ಯಾಸಂಗಕ್ಕಾಗಿ ಬೇರೆ ಊರುಗಳಿಗೆ ಪ್ರಯಾಣಿಸುವ ಬಡ ಹಾಗೂ ಮಧ್ಯಮ ವರ್ಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಭಾರಿ ಅನುಕೂಲವಾಗಲಿದೆ.

ರಸ್ತೆಗಳ ನಿರ್ಮಾಣಕ್ಕೆ 2,000 ಕೋಟಿ ರೂ.: ರಾಜ್ಯದ ಮೂಲಸೌಕರ್ಯ ಹಾಗೂ ಸಂಪರ್ಕ ಕ್ರಾಂತಿಗೆ ವೇಗ ನೀಡಲು ರಸ್ತೆಗಳ ಅಭಿವೃದ್ಧಿಗಾಗಿ ಬರೋಬ್ಬರಿ 2,000 ಕೋಟಿ ರೂಪಾಯಿಗಳ ಬೃಹತ್ ಪ್ಯಾಕೇಜ್ ಪ್ರಕಟಿಸಿದ್ದಾರೆ.

ಮನೆ ಕಟ್ಟುವವರಿಗೆ ಬಿಗ್ ರಿಲೀಫ್ (2,500 ಚದರ ಅಡಿ ಒಸಿ ವಿನಾಯಿತಿ): ಮಧ್ಯಮ ವರ್ಗದ ಮನೆ ಮಾಲೀಕರಿಗೆ ದೊಡ್ಡ ನಿರಾಳತೆ ಸಿಕ್ಕಿದೆ. 2,500 ಚದರ ಅಡಿವರೆಗಿನ ವಿಸ್ತೀರ್ಣದ ಕಟ್ಟಡಗಳಿಗೆ ಒಸಿ (Occupancy Certificate) ಪಡೆಯುವುದರಿಂದ ವಿನಾಯಿತಿ ನೀಡಲಾಗಿದ್ದು, ಅರ್ಜಿ ಹಾಕಿದವರಿಗೆ ತಕ್ಷಣದ ರಿಲೀಫ್ ಸಿಗಲಿದೆ.

ಬಿ-ಖಾತಾದಿಂದ ಎ-ಖಾತೆ ಯೋಜನೆ ಇಡೀ ರಾಜ್ಯಕ್ಕೆ ವಿಸ್ತರಣೆ: ಇದುವರೆಗೆ ಕೇವಲ ಸಿಲಿಕಾನ್ ಸಿಟಿ ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಪ್ರಭಾವಿ ‘ಬಿ-ಖಾತಾದಿಂದ ಎ-ಖಾತೆ’ (B Khata to A Khata) ಮಾಡಿಕೊಡುವ ಜನಪರ ಯೋಜನೆಯನ್ನು ಈಗ ಇಡೀ ಕರ್ನಾಟಕ ರಾಜ್ಯಾದ್ಯಂತ ವಿಸ್ತರಿಸುವುದಾಗಿ ಡಿಕೆಶಿ ಘೋಷಿಸಿದ್ದಾರೆ. ಇದರಿಂದ ಆಸ್ತಿ ಮಾಲೀಕರ ದಶಕಗಳ ಸಮಸ್ಯೆಗೆ ಮುಕ್ತಿ ಸಿಗಲಿದೆ.

ಭಾರತ್ ಜೋಡೋ ಯುವಕ ಸಂಘ ಸ್ಥಾಪನೆ: ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ‘ಭಾರತ್ ಜೋಡೋ ಯುವಕ ಸಂಘ’ಗಳನ್ನು ಸ್ಥಾಪಿಸಲು ತಲಾ 10,000 ರೂಪಾಯಿ ಪ್ರೋತ್ಸಾಹ ಧನ ಘೋಷಣೆ ಮಾಡಲಾಗಿದೆ.

ಖಾಸಗಿ ಉದ್ಯೋಗ ವಿನಿಮಯ ಕೇಂದ್ರ (Private Employment Exchange): ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರ ನೆರವಿಗಾಗಿ ರಾಜ್ಯ ಸರ್ಕಾರವೇ ಅಧಿಕೃತವಾಗಿ ‘ಖಾಸಗಿ ಉದ್ಯೋಗ ವಿನಿಮಯ ಕೇಂದ್ರ’ವನ್ನು ಸ್ಥಾಪಿಸಲಿದೆ.

ಇದನ್ನೂ ಓದಿ:ಡಿಕೆಶಿ ಕುಮಾರ್​​​​ ಸಿಎಂ ಆಗುತ್ತಿದ್ದಂತೆ ಮಹತ್ವದ ದಾಖಲೆ: ದೇಶದ ಕುಬೇರ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಕರ್ನಾಟಕ ಸಿಎಂ!

ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಭರ್ಜರಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ನಾವು ಯಾವಾಗಲೂ ಶುಭ ಗಳಿಗೆ, ಶುಭ ಮುಹೂರ್ತ ಬರುತ್ತೆ ಎಂದು ಕಾಯುತ್ತಿದ್ದೆವು. ಇಂದು ಸಂಜೆ 4.15ಕ್ಕೆ ಆ ಶುಭ ಮುಹೂರ್ತ ಬಂದೇ ಬಿಟ್ಟಿದೆ. ಇವತ್ತು ಹೊಸ ದಿನ, ಹೊಸ ಆಡಳಿತ ಮತ್ತು ಹೊಸ ಅವಕಾಶ ಆರಂಭವಾಗುವ ದಿನ. ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಹೊಸ ಯೋಜನೆಗಳನ್ನು ಜಾರಿಗೆ ತರುತ್ತೇನೆ. ರೈತರು, ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಜನರಿಗಾಗಿ ಕಳೆದ 6 ತಿಂಗಳಿಂದಲೇ ನಾನು ಅತ್ಯುತ್ತಮ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅವುಗಳನ್ನು ಹಂತಹಂತವಾಗಿ ಜಾರಿಗೆ ತರುತ್ತೇನೆ” ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು