ಮಂಗಳೂರು: ಗ್ಯಾಸ್ ದರ ಏರಿಕೆಗೆ ಹೋಟೆಲ್ ಮಾಲೀಕರ ಆಕ್ರೋಶ; ಒಂದೇ ದಿನದಲ್ಲಿ 993 ರೂ. ಜಂಪ್!

ಮಂಗಳೂರು: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಕರಾವಳಿಯ ಹೋಟೆಲ್ ಉದ್ಯಮಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿನ್ನೆಯ ದರಕ್ಕೂ ಇಂದಿನ ದರಕ್ಕೂ ಇರುವ ಅಜಗಜಾಂತರ ವ್ಯತ್ಯಾಸವನ್ನು ಕಂಡು ಮಾಲೀಕರು ಕಂಗಾಲಾಗಿದ್ದಾರೆ.

ಮಂಗಳೂರಿನ ಹೋಟೆಲ್ ಮಾಲೀಕ ವಿಜಯ ಕುಮಾರ್ ಅವರು ಟಿವಿ9 ಗೆ ನೀಡಿರುವ ಮಾಹಿತಿಯಂತೆ ಬೆಲೆ ಏರಿಕೆಯ ಚಿತ್ರಣ ಹೀಗಿದೆ. ನಿನ್ನೆ (ಏಪ್ರಿಲ್ 30) ಗ್ಯಾಸ್ ಬುಕ್ ಮಾಡಿದಾಗ ದರ 2,072 ರೂ. ಇತ್ತು. ಆದರೆ ಇಂದು (ಮೇ 1) ಅದು ಒಮ್ಮೆಲೆ 3,063 ರೂ. ಕ್ಕೆ ಏರಿಕೆಯಾಗಿದೆ. ಫೆಬ್ರವರಿ ಅಂತ್ಯದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಕೇವಲ 1,620 ರೂ. ಇತ್ತು. ಅಂದರೆ ಕೇವಲ ಎರಡು ತಿಂಗಳಲ್ಲಿ ಬೆಲೆ ದುಪ್ಪಟ್ಟಾಗುವ ಹಂತಕ್ಕೆ ತಲುಪಿದೆ.

Advertisement

ಇದನ್ನೂ ಓದಿ: LPG ಕೊರತೆ: ಇಂಡಕ್ಷನ್‌ ಸ್ಟೌ ಬಳಸುತ್ತಿದ್ದೀರಾ? ಇಲ್ಲಿದೆ ನಿಮಗೆ ಎಚ್ಚರಿಕೆ.. ಮಾರ್ಗಸೂಚಿ ಪಾಲಿಸಿ

ದಿನಕ್ಕೆ ಒಂದು ಸಾವಿರ ರೂಪಾಯಿಯಷ್ಟು ವ್ಯತ್ಯಾಸ ಬಂದಾಗ ಅದನ್ನು ಹೋಟೆಲ್ ಮಾಲೀಕರು ಭರಿಸಲು ಸಾಧ್ಯವಿಲ್ಲ. ಹೀಗಾಗಿ ಗ್ರಾಹಕರಿಗೆ ನೀಡುವ ಆಹಾರದ ದರವನ್ನು ಏರಿಸುವುದು ಅನಿವಾರ್ಯವಾಗಿದೆ. ಗ್ಯಾಸ್ ಜೊತೆಗೆ ಇತರ ದಿನಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿರುವುದರಿಂದ, ಲಾಭಾಂಶವಿಲ್ಲದೆ ಅನೇಕ ಹೋಟೆಲ್ ಉದ್ಯಮಗಳು ಮುಚ್ಚುವ ಸಾಧ್ಯತೆಯಿದೆ. ಚುನಾವಣೆ ಮುಗಿಯುವವರೆಗೆ ದರ ಏರಿಕೆಯನ್ನು ತಡೆಹಿಡಿದು, ಈಗ ಒಮ್ಮೆಲೆ ಬೆಲೆ ಹೆಚ್ಚಿಸಲಾಗಿದೆ ಎಂದು ಮಾಲೀಕರು ಅಸಮಾಧಾನ ಹೊರಹಾಕಿದ್ದಾರೆ.

Advertisement

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು