Belthangady : ಧನುಪೂಜೆಗೆಂದು ತೆರಳಿದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆ

ಬೆಳ್ತಂಗಡಿ : ಇಂದು ಬೆಳಗ್ಗೆ (ಜ.14) ಧನುಪೂಜೆಗೆಂದು ತೆರಳಿದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಗೇರುಕಟ್ಟೆ ಎಂಬಲ್ಲಿ ನಡೆದಿದೆ. ಮೃತ ಬಾಲಕ ಸುಬ್ರಹ್ಮಣ್ಯ ನಾಯಕ್ ಪುತ್ರ ಗೇರುಕಟ್ಟೆ ಸರ್ಕಾರಿ ಪ್ರೌಢ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಸುಮಂತ್ ಪ್ರತಿದಿನ ಸ್ನೇಹಿತರ ಜತೆ ಧನು ಪೂಜೆಗೆ ತೆರಳುತ್ತಿದ್ದ, ಇಂದು ಬೆಳಗ್ಗೆ ಪೂಜೆಗೆ ತೆರಳಿದ ಬಾಲಕ ಬಾರದದೇ ಇರುವ ಕುರಿತು ಸ್ನೇಹಿತರಿಂದ ಮಾಹಿತಿ ಬಂದಾಗ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಕುವೆಟ್ಟು ಪಂಚಾಯತ್ ಓಡಿಲ್ನಾಳ ಗ್ರಾಮದ ಸಂಬೋಳ್ಯ ಸಮೀಪದ ಬರಮೇಲು ಎಂಬಲ್ಲಿ ಬುಧವಾರ ನಿಗೂಢವಾಗಿ ಕಾಣೆಯಾದ ಹುಡುಗನ ಹುಡುಕಾಟಕ್ಕಿಳಿದಾಗ ಆತ ತೆರಳಿದ ಪ್ರದೇಶದ ತೋಟದ ಕೆರೆಯ ಬದಿಯಲ್ಲಿ ರಕ್ತದ ಕಲೆಗಳು ಕಾಣಿಸಿರುತ್ತವೆ. ಚಿರತೆಗಳ ಓಡಾಟ ಆ ಪ್ರದೇಶದಲ್ಲಿ ಹೆಚ್ಚಾಗಿ ಇರುವುದರಿಂದ, ಆತಂಕ ಸೃಷ್ಟಿಯಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು.

Advertisement

ಇದನ್ನೂ ಓದಿ : Kundapura : ಅಪರೂಪದ ಮಹಿಷಾಸುರ ಮರ್ಧಿನಿ ವಿಗ್ರಹ ಪತ್ತೆ!

ಬೆಳ್ತಂಗಡಿ ಪೊಲೀಸರು, ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳು, ಅಗ್ನಿಶಾಮಕ ದಳದವರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದು ಕೆರೆಯಲ್ಲಿ ಶವ ಪತ್ತೆಯಾಗಿ, ನಂತರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಸಂದರ್ಭ ಬಾಲಕ ನಾಪತ್ತೆಯಾದ ವಿಚಾರ ತಿಳಿದು ಗ್ರಾಮದ ನೂರಾರು ಜನರು ಸ್ಥಳಕ್ಕೆ ಆಗಮಿಸಿದ್ದರು.

Advertisement

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು