ಇಂದಿನ ದ್ವಾದಶ ರಾಶಿಗಳ ಫಲಾಫಲಗಳು ಹೇಗಿವೆ?

ಗ್ರಹಗಳ ಹಾಗೂ ನಕ್ಷತ್ರಗಳ ಚಲನೆಯ ಆಧಾರದ ಮೇಲೆ ಇಂದಿನ (ಅಕ್ಟೋಬರ್ 17) ದಿನ ಭವಿಷ್ಯವು ಎಲ್ಲಾ 12 ರಾಶಿಗಳವರಿಗೆ ಯಾವ ರೀತಿಯ ಫಲಿತಾಂಶಗಳನ್ನು ತರಲಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ ನೋಡಿ.

 

♈ ಮೇಷ ರಾಶಿ:

ಇಂದಿನ ದಿನವು ನಿಮಗೆ ಮಿಶ್ರಫಲಗಳಿಂದ ಕೂಡಿರಲಿದೆ. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿದ್ದು, ಮೇಲಧಿಕಾರಿಗಳ ಪ್ರಶಂಸೆ ದೊರೆಯಲಿದೆ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಕೌಟುಂಬಿಕ ಜೀವನದಲ್ಲಿ ಸಮಾಧಾನಕರ ವಾತಾವರಣವಿರುತ್ತದೆ.

♉ ವೃಷಭ ರಾಶಿ:

ಉದ್ಯೋಗ ಹಾಗೂ ವ್ಯಾಪಾರದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿದೆ. ಬಾಕಿ ಉಳಿದಿದ್ದ ಕೆಲಸಗಳು ಸುಲಭವಾಗಿ ಮುಗಿಯಲಿವೆ. ಸಹೋದ್ಯೋಗಿಗಳ ಬೆಂಬಲದಿಂದ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಆರೋಗ್ಯದ ಕಡೆ ಗಮನವಿರಲಿ.

ಮಿಥುನ ರಾಶಿ:

ನಿಮ್ಮ ಮಾತಿನ ಚಾತುರ್ಯದಿಂದ ಹಲವು ಕೆಲಸಗಳು ಸುಲಭವಾಗಿ ನೆರವೇರಲಿವೆ. ಸಭೆ, ಸಮಾರಂಭಗಳಲ್ಲಿ ನಿಮ್ಮ ಪ್ರತಿಭೆಗೆ ತಕ್ಕ ಮನ್ನಣೆ ಸಿಗಲಿದೆ. ಹೊಸ ಉದ್ಯೋಗ ಅಥವಾ ವ್ಯವಹಾರಿಕ ಪ್ರಸ್ತಾವನೆಗಳು ಬರುವ ಸಾಧ್ಯತೆಯಿದೆ.

 

♋ ಕರ್ಕಾಟಕ ರಾಶಿ:

ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾದರೂ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ಕುಟುಂಬದ ಸದಸ್ಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಅವಕಾಶ ದೊರೆಯಲಿದೆ.

 

♌ ಸಿಂಹ ರಾಶಿ:

ನಿಮ್ಮ ನಾಯಕತ್ವ ಗುಣವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ಪ್ರಮುಖ ಯೋಜನೆಗಳ ಜವಾಬ್ದಾರಿ ನಿಮ್ಮ ವಹಿಸಲ್ಪಡಲಿದೆ. ಕಷ್ಟದ ಸಂದರ್ಭಗಳಲ್ಲಿ ಹಿರಿಯರ ಸಲಹೆ ಪ್ರಯೋಜನಕಾರಿಯಾಗಲಿದೆ. ಆರ್ಥಿಕವಾಗಿ ಲಾಭದಾಯಕ ದಿನ.

 

♍ ಕನ್ಯಾ ರಾಶಿ:

ಪ್ರತಿಯೊಂದು ಕೆಲಸದಲ್ಲೂ ನಿಮ್ಮ ನಿಖರತೆ ಹಾಗೂ ಸ್ಪಷ್ಟತೆ ಅಧಿಕಾರಿಗಳ ಪ್ರಶಂಸೆಗೆ ಕಾರಣವಾಗಲಿದೆ. ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಪ್ರಯಾಣ ಮಾಡುವಾಗ ಎಚ್ಚರವಿರಲಿ.

 

♎ ತುಲಾ ರಾಶಿ:

ಪಾಲುದಾರಿಕೆ ವ್ಯವಹಾರಗಳಲ್ಲಿ ಉತ್ತಮ ಲಾಭ ಸಿಗಲಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ. ಸ್ನೇಹಿತರ ಸಹಾಯದಿಂದ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ.

 

♏ ವೃಶ್ಚಿಕ ರಾಶಿ:

ಕಚೇರಿಯಲ್ಲಿ ಗುಪ್ತ ಶತ್ರುಗಳ ಬಗ್ಗೆ ಹಾಗೂ ಅನಗತ್ಯ ಚರ್ಚೆಗಳಿಂದ ದೂರವಿರಿ. ನಿಮ್ಮ ಪರಿಶ್ರಮ ಹಾಗೂ ಏಕಾಗ್ರತೆಯಿಂದ ಅಡೆತಡೆಗಳನ್ನು ನಿವಾರಿಸುವಿರಿ. ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ.

 

♐ ಧನು ರಾಶಿ:

ದೂರ ಪ್ರಯಾಣ ಅಥವಾ ಉದ್ಯೋಗ ನಿಮಿತ್ತ ವರ್ಗಾವಣೆ ಬಯಸುವವರಿಗೆ ಶುಭ ಸುದ್ದi ಸಿಗಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಹೆಚ್ಚಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಒಲವು ಮೂಡಲಿದೆ.

 

♑ ಮಕರ ರಾಶಿ:

ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆ ಹಾಗೂ ಬಡ್ತಿ ಸಿಗುವ ಸಂಭವವಿದೆ. ಸ್ಥಗಿತಗೊಂಡಿದ್ದ ಹಣಕಾಸಿನ ವ್ಯವಹಾರಗಳು ಚೇತರಿಸಿಕೊಳ್ಳಲಿವೆ. ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಸಲಿದೆ.

 

♒ ಕುಂಭ ರಾಶಿ:

ನಿಮ್ಮ ವಿಭಿನ್ನ ಆಲೋಚನೆಗಳು ಹಾಗೂ ಸೃಜನಶೀಲತೆಗೆ ಉತ್ತಮ ಮೌಲ್ಯ ಸಿಗಲಿದೆ. ತಂತ್ರಜ್ಞಾನ ಹಾಗೂ ಕಲಾಕ್ಷೇತ್ರದವರಿಗೆ ವಿಶೇಷ ಅವಕಾಶಗಳು ಒದಗಿಬರಲಿವೆ. ಆರ್ಥಿಕವಾಗಿ ಪ್ರಗತಿ ಕಂಡುಬರಲಿದೆ.

 

♓ ಮೀನ ರಾಶಿ:

ನಿಮ್ಮ ಅಂತಃಪ್ರಜ್ಞೆ ಕೆಲಸಗಳಲ್ಲಿ ಯಶಸ್ಸು ತಂದುಕೊಡಲಿದೆ. ಸೃಜನಶೀಲ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ದೊಡ್ಡ ನಿರ್ಧಾರಗಳನ್ನು ಕೈಗೊಳ್ಳುವಾಗ ಹಿರಿಯರ ಸಲಹೆ ಪಡೆಯುವುದು ಉತ್ತಮ.